ಬುಧವಾರ, ಜೂಲೈ 8, 2020
28 °C

ಅಮೃತಮಹಲ್ ಕರು ಬೆಲೆ 1.37 ಲಕ್ಷ est111

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೂ ಚಿನ್ನಾಟ ಆಡುವ ಒಂದೂವರೆ ವರ್ಷದ ಜೋಡಿ ಕರುಗಳ ಬೆಲೆ ರೂ. 1.37 ಲಕ್ಷ ರೂಪಾಯಿ! ಇದು ಅಮೃತ್ ಮಹಲ್ ತಳಿಯ ಮಹಾತ್ಮೆ. ರಾಷ್ಟ್ರದಲ್ಲೇ ವಿಶೇಷ ತಳಿಯಾಗಿ ಗುರುತಿಸಿ ಕೊಂಡಿರುವ ಅಮೃತ್ ಮಹಲ್ ಗಂಡು ಕರುಗಳಿಗಿ ರುವ ಚಿನ್ನದ ಬೆಲೆ ಮತ್ತೊಮ್ಮೆ ಸಾಬೀತಾಯಿತು.

 

ಅಜ್ಜಂಪುರ ಅಮೃತಮಹಲ್ ತಳಿ ಸಂವರ್ಧನಾ ಕ್ಷೇತ್ರದಿಂದ ತಾಲ್ಲೂಕಿನ ಬಿದರಮ್ಮಗುಡಿ ಕಾವಲಿನಲ್ಲಿ ಬುಧವಾರ ನಡೆದ ಕರುಗಳ ಬಹಿರಂಗ ಹರಾಜಿನಲ್ಲಿ ‘ಅಮೃತಮೌಲ್ಯ’ ದಾಖಲಾಯಿತು.ಕಿಕ್ಕಿರಿದು ನೆರೆದಿದ್ದ ಜನರ ಮಧ್ಯೆ ಹರಾಜು ಪ್ರಕ್ರಿಯೆ ಆರಂಭದಿಂದಲೇ ಕುತೂಹಲ ಕೆರಳಿಸಿತ್ತು. ಒಟ್ಟು 19 ಜೋಡಿಗಳನ್ನು ಹರಾಜಿಗೆ ಇಡಲಾಗಿತ್ತು. ಇವೆಲ್ಲವೂ 2 ವರ್ಷ ಒಳಗಿನವು.

ಮೊದಲು ಹರಾಜಿಗೆ ಬಂದ ಬೆಳ್ಳಿಗೆಜ್ಜೆ ಮತ್ತು ನಾಮಧಾರಿ ಕರುಗಳ ಹರಾಜು ರೈತರ ಕರತಾಡನದ ನಡುವೆ ಏರುತ್ತಾ ಹೋಯಿತು. ಕೊಳ್ಳುವುದೇ ಪ್ರತಿಷ್ಠೆ ಎಂಬಂತೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತರು ಜಿದ್ದಿಗೆ ಬಿದ್ದು ಕೂಗಿದರು.ಅಂತಿಮವಾಗಿ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕಾಡಯ್ಯನಕೊಪ್ಪಲು ಗ್ರಾಮದ ಶಿವೇಗೌಡ ಎಂಬುವವರು ರೂ. 1.37 ಲಕ್ಷ ಗರಿಷ್ಠ ಮೊತ್ತಕ್ಕೆ ಖರೀದಿಸಿದರು. ಕಳೆದ ವರ್ಷ ಕೂಡ ಮೊದಲ ಜೋಡಿಯನ್ನು ಇದೇ ಊರಿನ ನಂಜುಂಡಯ್ಯ ಎಂಬುವರು ರೂ. 1.5 ಲಕ್ಷ ಬೆಲೆಗೆ ಕೊಂಡಿದ್ದರು.ಹಾಸನ ಜಿಲ್ಲೆ ದುದ್ದ ಹೋಬಳಿ ಕೋಡಿಹಳ್ಳಿಯ ದೊರೆಸ್ವಾಮಿ ಎಂಬುವರು ಮತ್ತೊಂದು ಜೋಡಿಯನ್ನು ರೂ. 1.175 ಲಕ್ಷಕ್ಕೆ ಎರಡನೇ ಕೊಂಡು ಬೀಗಿದರು. ಚಿತ್ರದುರ್ಗ ಜಿಲ್ಲೆಯ ಮುದ್ದಾಪುರದ ಬಿ.ಹನುಮಯ್ಯ ಎಂಬವರು ಮೂರನೇ ಗರಿಷ್ಠ ಬೆಲೆ 90250 ರೂ.ಗೆ ಜೋಡಿ ಕರು ಕೊಂಡರು.ಅಜ್ಜಂಪುರ, ರಾಮಗಿರಿ, ಚಿಕ್ಕಹೆಮ್ಮಿಗನೂರು, ಬಾಸೂರು, ಲಿಂಗದಹಳ್ಳಿ, ಹಬ್ಬನಘಟ್ಟ ಅಮೃತಮಹಲ್ ಕಾವಲುಗಳಲ್ಲಿ ಸ್ವಾಭಾವಿಕವಾಗಿ ಬೆಳೆಸಿದ ಕರುಗಳನ್ನು ಪ್ರತಿ ವರ್ಷದಂತೆ ಇಲ್ಲಿ ಹರಾಜಿಗಿಡಲಾಗಿತ್ತು.ಹಾಸನ, ಶಿವಮೊಗ್ಗ ಜಿಲ್ಲೆಯ ಹೆಚ್ಚು ಜನರಿದ್ದರು. ತುಮಕೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಮತ್ತಿತರರ ಜಿಲ್ಲೆಗಳ ರೈತರೂ ಪಾಲ್ಗೊಂಡಿದ್ದರು.ಖಾಸಗಿ ಸಂತೆ: ಸರ್ಕಾರಿ ಹರಾಜು ಪ್ರಕ್ರಿಯೆ ಹೊರತಾಗಿ ಇಲ್ಲಿ ಅಮೃತಮಹಲ್, ಹಳ್ಳಿಕಾರ್ ಮತ್ತಿತರ ನಾಟಿ ತಳಿ ಹೋರಿಗಳ ಖಾಸಗಿ ಮಾರಾಟವೂ ಸಂತೆಯಂತೆ ನಡೆಯಿತು.ಐದುನೂರಕ್ಕೂ ಹೆಚ್ಚು ಜೋಡಿಗಳು ನೆರೆದಿದ್ದವು. ರೂ. 2 ಲಕ್ಷ ವರೆಗಿನ ಹೋರಿಗಳೂ ಇದ್ದವು. ಉತ್ತರ ಕರ್ನಾಟಕ, ಶಿವಮೊಗ್ಗ ಕಡೆಗಳಿಂದ ಬಂದಿದ್ದ ರೈತರು ಈ ಹೋರಿಗಳನ್ನು ಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.