ಬುಧವಾರ, ಜೂನ್ 23, 2021
30 °C

ಅಮೆರಿಕ, ರಶ್ದಿ, ಗಬ್ಬರ್, ಜುಲ್ಫಿಕರ್ ಭುಟ್ಟೊಗೆ ಸೋಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉತ್ತರ ಪ್ರದೇಶ ಚುನಾವಣೆಯಲ್ಲಿ ಅಮೆರಿಕ, ಗಬ್ಬರ್ ಹಾಗೂ ಜುಲ್ಫಿಕರ್ ಭುಟ್ಟೊ, ರಶ್ದಿ ಪ್ರಯತ್ನ ಕೊನೆಗೂ ಮಣ್ಣುಪಾಲಾಗಿದೆ!ಇವರೆಲ್ಲ ಯಾರು ಎಂದು ಹುಬ್ಬೇರಿಸಬೇಡಿ. ಇವು ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳ ಹೆಸರುಗಳು. 50 ವರ್ಷದ ಅಮೆರಿಕ ಬಿಎಸ್‌ಪಿ ಅಭ್ಯರ್ಥಿಯಾಗಿ ಸೈದಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಸಮಾಜವಾದಿ ಪಕ್ಷದ ಸುಭಾಷ್ ಅವರಿಂದ 41,969 ಮತಗಳ ಅಂತರದಲ್ಲಿ ಅವರು ಸೋಲು ಕಂಡಿದ್ದಾರೆ.ಫಿರೋಜ್ ಖಾನ್ ಅಲಿಯಾಸ್ ಗಬ್ಬರ್ ಎಂಬುವವರು ಬಿಕಾಪುರ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅವರು ತಮ್ಮ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮಿತ್ರಸೇನ್ ಯಾದವ್ ಅವರಿಂದ 1868 ಮತಗಳ ಅಂತರದಲ್ಲಿ ಪರಾಜಯಗೊಂಡಿದ್ದಾರೆ.ಬಿಎಸ್‌ಪಿ ಟಿಕೆಟ್ ಪಡೆದು ಆಗ್ರಾ (ದಕ್ಷಿಣ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಜುಲ್ಫಿಕರ್ ಭುಟ್ಟೊ ಅವರು ಬಿಜೆಪಿಯ ಯೋಗೇಂದ್ರ ಉಪಾಧ್ಯಾಯ ಅವರಿಂದ 22,960 ಮತಗಳ ಅಂತರದಲ್ಲಿ ಸೋತಿದ್ದಾರೆ.ರಶ್ದಿ ಮಿಯಾನ್ (ಮೂಲ ಹೆಸರು ಅಬ್ಬಾಸ್  ಅಲಿ ಜೈದಿ) ಸಮಾಜವಾದಿ ಪಕ್ಷದ ಟಿಕೆಟ್ ಪಡೆದು ರಡೌಲಿಯಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ರಾಮಚಂದ್ರ ಯಾದವ್ ಅವರಿಂದ 914 ಮತಗಳ ಅಂತರದಲ್ಲಿ ಪರಾಜಯ ಹೊಂದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.