ಭಾನುವಾರ, ಜೂನ್ 20, 2021
25 °C
ರಾಜ್ಯ ಸಂಪುಟದ ಮಹತ್ವದ ತೀರ್ಮಾನ

ಅರಣ್ಯ ನಿವಾಸಿಗಳಿಗೆ ಹಕ್ಕುಪತ್ರ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರಣ್ಯದಲ್ಲಿ ನೆಲೆಸಿರುವ ಬುಡಕಟ್ಟು ಮತ್ತು ಪಾರಂಪರಿಕ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಜವಾಬ್ದಾರಿಯನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಗಳಿಗೇ ವಹಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸ­ಲಾಗಿದೆ. ಹಕ್ಕುಪತ್ರದಿಂದಾಗಿ ರಾಜ್ಯದ 9 ಜಿಲ್ಲೆಗಳ 26 ತಾಲ್ಲೂಕು­ಗಳಲ್ಲಿನ ಅರಣ್ಯವಾಸಿಗಳಿಗೆ ಅನುಕೂಲ ­ಆಗಲಿದೆ.



‘ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡು­ವುದು) 2006ರ ಕಾಯ್ದೆ’– ಪ್ರಕಾರ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.



ಗ್ರಾಮಸಭೆಗಳು ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸ­ಬೇಕು. ಆ ಸಮಿತಿಗಳು ಹಕ್ಕು ಪತ್ರ ಯಾರಿಗೆ ನೀಡಬಹುದು ಎಂಬುದನ್ನು ತೀರ್ಮಾನಿಸುತ್ತವೆ. ಈ ಬಗ್ಗೆ ತಕರಾರು ಇದ್ದರೂ ಅದನ್ನು ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿನ ಸಮಿತಿಗಳ ಮುಂದೆ ಪ್ರಶ್ನಿಸಬಹುದು ಎಂದು ಅವರು ಹೇಳಿದರು.



2005ರ ಡಿಸೆಂಬರ್‌ಗೂ ಮೊದಲು ಅರಣ್ಯದಲ್ಲಿ ನೆಲೆಸಿರುವ ಬುಡಕಟ್ಟು ಜನರಿಗೆ ಗರಿಷ್ಠ ನಾಲ್ಕು ಎಕರೆವರೆಗೆ ಜಮೀನು ನೀಡುವುದಕ್ಕೂ ಕಾಯ್ದೆಯಲ್ಲಿ ಅವಕಾಶ ಇದೆ. ಜೀವನೋಪಾಯಕ್ಕೆ ಅರಣ್ಯವನ್ನೇ ಅವಲಂಬಿಸಿರುವವರಿಗೆ ಈ ಅವಕಾಶ ಇದ್ದು, ಅದನ್ನು ತೀರ್ಮಾನಿ­ಸುವ ಅಧಿಕಾರವನ್ನು ಗ್ರಾಮ ಸಮಿತಿಗಳಿಗೆ ನೀಡಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.