ಬೆಂಗಳೂರು: `ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಗ್ರ ಅಭಿವೃದ್ಧಿ ಹರಿಕಾರರಾಗಿದ್ದರು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕತೆ ಸಮಗ್ರ ಪ್ರಗತಿಗೆ ಆದ್ಯತೆ ನೀಡಿದವರು. ಒಬ್ಬ ರಾಜನಾಗಿ ಪ್ರಜಾಪ್ರಭುತ್ವ ಧೋರಣೆ ಹೊಂದಿದ್ದ ಅಪರೂಪದ ವ್ಯಕ್ತಿತ್ವ' ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬಣ್ಣಿಸಿದರು.

ಕರ್ನಾಟಕ ಸ್ವಾಭಿಮಾನಿ ಸಮ ಸಮಾಜವು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ `ಸಾಮಾಜಿಕ ನ್ಯಾಯದ ಹರಿಕಾರರಾಗಿ ನಾಲ್ವಡಿ ಕೃಷ್ಣರಾಜ್ ಒಡೆಯರ್' ಕುರಿತು ಮಾತನಾಡಿದರು.

`ಇಂದು ಬರೀ ಏಕಮುಖ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಪ್ರಗತಿಯೆಂದರೆ ಬರೀ ಕಾರ್ಪೊರೇಟ್ ಪ್ರಗತಿ ಎಂದಾಗಿದೆ. ಆದರೆ, ನಾಲ್ವಡಿ ಅವರು ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು. ಎಲ್ಲ ಪ್ರಗತಿಯ ಮೂಲ ಶಿಕ್ಷಣ ಎಂದು ನಂಬಿದ್ದ ಅವರು, ಎಲ್ಲರೂ ಶಿಕ್ಷಿತರಾಗಬೇಕೆಂದು ಬಯಸಿದ್ದರು. ಮಹಿಳೆಯರ ಮತ್ತು ದಲಿತರ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಿದ್ದರು' ಎಂದರು. `ಎಲ್ಲರಿಗೂ ಸಮಾನ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಕಡ್ಡಾಯ ಶಿಕ್ಷಣ ನೀತಿಯನ್ನು 1913 ರಲ್ಲಿಯೇ ಆರಂಭಿಸಿದ್ದರು. ಅನುದಾನಿತ ಶಾಲೆ, ಕಾಲೇಜು ಮತ್ತು ರಾತ್ರಿ ಶಾಲೆಗಳನ್ನು ಆರಂಭಿಸಿದರು' ಎಂದು ಹೇಳಿದರು.

`ಅನುದಾನಿತ ಶಾಲಾ ಕಾಲೇಜುಗಳನ್ನು ಆರಂಭಿಸಿ, 1905 ರಲ್ಲಿ ದಲಿತ ಮಕ್ಕಳಿಗೆ ಶುಲ್ಕ ವಿನಾಯಿತಿ ಘೋಷಿಸಿದರು. ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ ಸಾಮಾಜಿಕ, ಧಾರ್ಮಿಕ ಅಥವಾ ಜಾತಿ ಆಧಾರದ ಮೇಲೆ ಪ್ರವೇಶವನ್ನು ನಿರ್ಬಂಧಿಸಿದರೆ, ಅನುದಾನವನ್ನು ನೀಡುವುದಿಲ್ಲ ಎಂದು ಘೋಷಿಸಿದ್ದರು. ಅದಕ್ಕಾಗಿ, 1915 ರಲ್ಲಿ ಒಂದು ನಿರ್ದಿಷ್ಟ ಕಾನೂನು ಜಾರಿಗೆ ತಂದರು' ಎಂದರು.

ಪೀಠ ಪ್ರಾರಂಭಿಲು ಸಲಹೆ: `ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠವನ್ನು ಆರಂಭಿಸಿ, ಒಡೆಯರ್ ಅವರ ವ್ಯಕ್ತಿತ್ವ ಮತ್ತು ಚಿಂತನೆಗಳ ಕುರಿತು ಗಂಭೀರವಾದ ಸಂಶೋಧನೆಗಳು ನಡೆಯಬೇಕು' ಎಂದು ಅವರು ಹೇಳಿದರು.

`ನಾಲ್ವಡಿಯವರ ವಿಚಾರಗಳ ಕುರಿತು ವಿಶ್ವವಿದ್ಯಾಲಯವು ಮಹತ್ವವನ್ನು ನೀಡಬೇಕು. ಅವರ ವ್ಯಕ್ತಿತ್ವ ಅವಲೋಕನಕ್ಕೆ, ಚರ್ಚೆಗೆ ಆದ್ಯತೆ ನೀಡಬೇಕು. ಅಧ್ಯಯನ ಪೀಠಗಳು ಇಂದು ಕೇವಲ ಹೆಸರಿಗೆ ಮಾತ್ರ ಎಂಬಂತೆ ಬಿಂಬಿತವಾಗಿವೆ. ಆದರೆ, ನಾಲ್ವಡಿಯವರ ವಿಚಾರದಲ್ಲಿ ಇದಾಗಬಾರದು. ಕಾರ್ಯಕ್ರಮದಲ್ಲಿ ಬರಬೇಕಿದ್ದ ಅತಿಥಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ' ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡರ ಅನುಪಸ್ಥಿತಿಯ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.