ಗುರುವಾರ , ಏಪ್ರಿಲ್ 15, 2021
31 °C

ಅರಸು ಸಾಮಾಜಿಕ ನ್ಯಾಯದ ಹರಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: `ಮಾಜಿ ಮುಖ್ಯಮಂತ್ರಿ  ದೇವರಾಜ ಅರಸು ಅವರಿಗೆ ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆ ಯುವುದು ಸಮಂಜಸವಾಗಿದೆ. ಸಾಮಾಜಿಕ ಪರಿವರ್ತನೆ ತರಲು ಹೋರಾಡುವವರಿಗೆ ಅವರು ಮಾದರಿ ಯಾಗಿದ್ದಾರೆ~  ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಆಶ್ರಯ ದಲ್ಲಿ ಪಟ್ಟಣದ ತಾ.ಪಂ. ಸಭಾಭವನ ದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 97ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಮೈಸೂರು~ ಎಂದು ಹೆಸರಿದ್ದ ರಾಜ್ಯಕ್ಕೆ `ಕರ್ನಾಟಕ~ ಎಂಬ ಹೆಸರಿಟ್ಟು, ಸಮಗ್ರ ಭಾವನೆ ಬರಲು ಅವರು ಕಾರಣರಾದರು.1974ರಲ್ಲಿ ಅವರು ಜಾರಿಗೆ ತಂದ `ಊಳುವವನೆ ಹೊಲ ದೊಡೆಯ~ ಕಾಯ್ದೆ ಇಡೀ ದೇಶದ ಗಮನ ಸೆಳೆಯಿತು. ಅಲ್ಲಿಯವರೆಗೆ ಕೃಷಿ ಕೂಲಿಕಾರರಾಗಿದ್ದವರು ಭೂಮಾಲೀಕ ರಾಗುವ ಕ್ರಾಂತಿಕಾರಿ ಬದಲಾವಣೆಗೆ ಈ ಕಾಯ್ದೆ ಕಾರಣವಾಯಿತು.ಮಲ ಹೊರುವ ಪದ್ಧತಿಯ ನಿಷೇಧ, ಜೀತದಾಳು ಪದ್ಧತಿಯ ನಿರ್ಮೂಲನೆ ಯ ಕಾನೂನನ್ನು ಕೂಡ ಅವರು ಜಾರಿಗೆ ತಂದರು ಎಂದರು.`ಶಿಕ್ಷಣ ಸಚಿವನಾಗಿ ನಾನು ಅರಸು ಅವರಿಗೆ ಎಷ್ಟು ಕೃತಜ್ಞನಾದರೂ ಕಡಿಮೆಯೇ, ಯಾಕೆಂದರೆ ಅವರು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಯನ್ನು ಪ್ರಾರಂಭಿಸಿದರು. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಸ್ಮರಣೀಯವಾದುದು~ ಎಂದರು.ಮುಖ್ಯ ಅತಿಥಿಗಳಾಗಿ ಪ.ಪಂ.ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್,ಜಿ.ಪಂ. ಸದಸ್ಯೆ ಶಾಲಿನಿ ಕೆ.ಗೌಡರ್,ತಾ.ಪಂ. ಉಪಾಧ್ಯಕ್ಷ ಪ್ರಸನ್ನ ಹೆಗಡೆ ಮಾತ ನಾಡಿದರು. ತಹಶೀಲ್ದಾರ ಗಣಪತಿ ಕಟ್ಟಿನಕೆರೆ ಮತ್ತಿತರರು ಉಪಸ್ಥಿತ ರಿದ್ದರು. ತಾ.ಪಂ.ಅಧ್ಯಕ್ಷೆ ಶಾಂತಿ ಹಸ್ಲರ್ ಅಧ್ಯಕ್ಷತೆ ವಹಿಸಿದ್ದರು.ವೀಣಾ ಸಂಗಡಿಗರು ಪ್ರಾರ್ಥ ನಾಗೀತೆ, ಶ್ರೀನಿಧಿ ಸಂಗಡಿಗರು ನಾಡಗೀತೆ ಮತ್ತು ಪೂಜಾ ಸಂಗಡಿಗರು ರೈತಗೀತೆ ಹಾಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿ.ಎಸ್. ಹೆಗಡೆ ಸ್ವಾಗತಿಸಿದರು.   ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಡಿ.ವಿ.ಶೇಟ್ ಪ್ರಾಸ್ತಾವಿಕ ಮಾತನಾಡಿದರು. ಎನ್.ಆರ್. ಹೆಗಡೆಕರ್ ನಿರೂಪಿಸಿದರು.ಬಹುಮಾನ ವಿತರಣೆ

ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಆಶ್ರಯದಲ್ಲಿ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಸೋಮ ವಾರ ಏರ್ಪಡಿಸಿದ್ದ  ದೇವರಾಜ ಅರಸು ಅವರ 97ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ  ಪಡೆದ ಜಿಲ್ಲೆಯ ವಸತಿ ನಿಲಯಗಳ ವಿದ್ಯಾರ್ಥಿ ಗಳಿಗೆ ಬಹುಮಾನ ನೀಡಲಾಯಿತು. ಅದರೊಂದಿಗೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ತಾಲ್ಲೂಕಿನ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.ಎಸ್ಸೆಸ್ಸೆಲ್ಸಿಯ ಬಾಲಕರ ವಿಭಾಗದಲ್ಲಿ ಸತೀಶ್ ಮರಾಠಿ, ಅಂಕೋಲಾ (ಪ್ರಥಮ), ರಾಜೇಶ ನಾಯ್ಕ, ಸಿದ್ದಾಪುರ (ದ್ವಿತೀಯ),ದರ್ಶನ ಚವ್ಹಾಣ, ಯಲ್ಲಾಪುರ(ತೃತೀಯ) ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರೇಮಾ ಮರಾಠಿ, ಯಲ್ಲಾಪುರ (ಪ್ರಥಮ)ಮೈತ್ರಿ ಮಡಿವಾಳ, ಶಿರಸಿ (ದ್ವಿತೀಯ),ಗಾಯತ್ರಿ ಟೊಸೂರು, ಹಳಿಯಾಳ (ತೃತೀಯ) ಬಹುಮಾನ ಪಡೆದರು. ಪಿಯುಸಿಯ  ಬಾಲಕರ ವಿಭಾಗದಲ್ಲಿ ಬಾಬು ಸಿಂಧೆ ಕಾರವಾರ(ಪ್ರಥಮ), ವಿದ್ಯಾಧರ ನಾಯ್ಕ,ಕಾರವಾರ(ದ್ವಿತೀಯ), ಗಣೇಶ ಕೋರ್ವೆಕರ,ದಾಂಡೇಲಿ(ತೃತೀಯ) ಮತ್ತು

 

ಬಾಲಕಿಯರ ವಿಭಾಗದಲ್ಲಿ ರೇಷ್ಮಾ ಅಗೇರ, ಅಂಕೋಲಾ (ಪ್ರಥಮ), ದೀಪಾ ನಾಯ್ಕ, ಶಿರಸಿ(ದ್ವಿತೀಯ), ಸುನೀತಾ ನಾಯ್ಕ, ಸಿದ್ದಾಪುರ(ತೃತೀಯ) ಬಹುಮಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಪೂರ್ಣಿಮಾ ಗೌಡ ಮತ್ತು ಕವಿತಾ ಮಡಿವಾಳ ಬಹುಮಾನ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.