ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ (ಎಸ್ಕಾಂ) ಕೋರಿಕೆಯನ್ನು ಮನ್ನಿಸಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ), ವಿದ್ಯುತ್ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಗಡುವನ್ನು ಇದೇ 13ರವರೆಗೆ ವಿಸ್ತರಿಸಿದೆ. ನಿಯಮ ಪ್ರಕಾರ ಎಲ್ಲ ಎಸ್ಕಾಂಗಳು, ವಿದ್ಯುತ್ ದರ ಪರಿಷ್ಕರಣೆಯ ಅರ್ಜಿಗಳನ್ನು ಮುಂದಿನ ಹಣಕಾಸು ವರ್ಷ ಆರಂಭವಾಗುವ 120 ದಿನಗಳ ಮುನ್ನವೇ (ಅಂದರೆ ಡಿ. 1ರ ಒಳಗೆ) ಸಲ್ಲಿಸಬೇಕು. ಈ ಬಗ್ಗೆ ಆಯೋಗವು ಅಕ್ಟೋಬರ್ 30ರಂದು ಎಸ್ಕಾಂಗಳಿಗೆ ಪತ್ರ ಬರೆದಿತ್ತು.

ಆದರೆ, ಎಸ್ಕಾಂಗಳು ಎರಡು ವಾರ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ 31 ದಿನಗಳ ಸಮಯ ಕೇಳಿದ್ದವು. ಈ ಹಿನ್ನೆಲೆಯಲ್ಲಿ ಎಸ್ಕಾಂಗಳಿಗೆ ಡಿ. 13 ಹಾಗೂ ಹುಕ್ಕೇರಿ ಸಹಕಾರ ಸಂಸ್ಥೆಗೆ ಡಿ.31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಎನ್. ಶ್ರೀರಾಮನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.