ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಿದ ಕೇಂದ್ರ ಮುಂಗಡ ಪತ್ರ ಮೊದಲೇ ಸಂಕಟದಲ್ಲಿರುವ ದೇಶದ ಅರ್ಥವ್ಯವಸ್ಥೆಗೆ ಪುನಃಶ್ಚೇತನ ನೀಡಲು ಸಂಪೂರ್ಣ ವಿಫಲವಾಗಿದೆ.

ದೇಶದ ಬಡ ಜನತೆ ಹಿತಾಸಕ್ತಿ ಹಾಗೂ ಅರ್ಥವ್ಯಸ್ಥೆಗೆ ಹೊಸ ಹುರುಪು ನೀಡುವಂತಹ ರಚನಾತ್ಮಕ ಬಜೆಟ್ ಮಂಡಿಸುವ ಸಾಮರ್ಥ್ಯವಿದ್ದರೂ ಕೂಡ ಅರ್ಥವಿಲ್ಲದ ರಾಜಕೀಯ ಒತ್ತಡಗಳಿಂದ ಕಟ್ಟಿಸಿಕೊಂಡಿದ್ದ ಅರ್ಥ ಸಚಿವರು ಈ ಎರಡೂ ಅಂಶಗಳನ್ನು ಸಾಧಿಸದೆ ಎಡವಿದ್ದಾರೆ.

ಸೇವಾಕರ ಹಾಗೂ ಕೇಂದ್ರ ಅಬಕಾರಿ ಕರಗಳನ್ನು ಹೆಚ್ಚಿಸುವ ಮೂಲಕ ಹಣದುಬ್ಬರ ಮತ್ತಷ್ಟು ಏರುವಂತೆ ಮಾಡಿದ್ದಾರೆ. ದೇಶದ ಕೃಷಿಗೆ ಅನುದಾನ ಹೆಚ್ಚಿಸಲಾಗಿದ್ದರೂ ಅದಕ್ಕೆ ಪೂರಕವಾದ ವಿದ್ಯುತ್ ಹಾಗೂ ನೀರಾವರಿ ಅಭಿವೃದ್ಧಿ ಬಗೆಗೆ ಪ್ರಸ್ತಾವನೆಗಳಿಲ್ಲ. ಸಾರ್ವಜನಿಕ ವಿತರಣೆಗೆ ಆಧಾರ ಕಾರ್ಡ್ ಮೂಲ ಆಧಾರವೆಂದು ತಿಳಿಸಿದರೂ ಅದರ ಪ್ರಕ್ರಿಯೆ ಇನ್ನೂ ಅರ್ಧದಷ್ಟು ಅಗದೆ ಇರುವುದರಿಂದ ಇದಕ್ಕೆ ಅರ್ಥವಿಲ್ಲ.

ಉದ್ಯೋಗ ಖಾತ್ರಿ ಯೋಜನೆಗೆ ಹಣ ವೃದ್ಧಿಸಲಾಗಿದೆ, ಆದರೆ ಯೋಜನೆಗೆ ಯಾವುದೇ ಅರ್ಥಪೂರ್ಣ ಕಾಯಕಲ್ಪ ಬಜೆಟ್ನಲ್ಲಿ ಇಲ್ಲ. 2011-12ರಲ್ಲಿ ಕೃಷಿ ಬೆಳವಣಿಗೆ ಕೇವಲ ಶೇ 2.5ರಷ್ಟಾಗಿರುವುದು ಸರ್ಕಾರದ ವಿಫಲತೆಗೆ ನಿದರ್ಶನ. ಕೃಷಿ ಸಾಲದ ಮೇಲಿನ ಬಡ್ಡಿಗೆ ಶೇ 3 ಸಬ್ಸಿಡಿ ಘೋಷಿಸುವ ಬದಲಾಗಿ ಬಡ್ಡಿದರಗಳನ್ನು ಇಳಿಸುವುದು ಏಕೆ ಸಾಧ್ಯವಾಗಿಲ್ಲ? ಕಪ್ಪು ಹಣ ಹೊರತರುವ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರೂಪಿಸುವ ಯಾವುದೇ ಸ್ಪಷ್ಟ ಪ್ರಸ್ತಾವನೆಗಳು ಬಜೆಟ್ನಲ್ಲಿ ಇಲ್ಲ.

ಈ ಬಜೆಟ್ನಿಂದ ನನಗೆ ವೈಯಕ್ತಿಕವಾಗಿ ಹರ್ಷವಾಗಿದೆ. ಕಳೆದ 4-5 ವರ್ಷಗಳಿಂದ ನಿರಂತರ ಪ್ರಯತ್ನಿಸಿದ ಫಲವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ರೂ 50 ಕೋಟಿ ವಿಶೇಷ ಅನುದಾನ ನೀಡಿರುವುದೇ ಇದಕ್ಕೆ ಕಾರಣ. ವಿಮಾನಯಾನ ವಲಯಕ್ಕೆ ವಿದೇಶಿ ಸಾಲ ಸೌಲಭ್ಯ ಹಾಗೂ ವಿಮಾನ ಇಂಧನ ವಿದೇಶದಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಆ ವಲಯಕ್ಕೆ ನೀಡಿದ ಪ್ರೋತ್ಸಾಹವಾಗಿದೆ. ಕೈಮಗ್ಗ ನೇಕಾರರ ಜೀವನಕ್ಕೆ ಪೂರಕವಾದ ಕೆಲವು ಪ್ರಸ್ತಾವಗಳು ಕೂಡ ಸಮಾಧಾನಕರ. ಆದಾಯಕರ ವಿನಾಯಿತಿ ಮಿತಿ 3 ಲಕ್ಷ ನಿರೀಕ್ಷಿಸಿದವರಿಗೆ ಅದು ಕೇವಲ 20 ಸಾವಿರ ಹೆಚ್ಚಾಗಿರುವುದು ನಿರಾಶಾದಾಯಕ. ಸೇವಾ ತೆರಿಗೆ ಹಾಗೂ ಅಬಕಾರಿ ಕರದಿಂದ ಬರುವ ಹೆಚ್ಚಿನ ಆದಾಯದಲ್ಲಿ ಆದಾಯ ಕರಕ್ಕೆ ಹೆಚ್ಚಿನ ವಿನಾಯಿತಿ ನೀಡಬಹುದಾಗಿತ್ತು. ವಿತ್ತೀಯ ಕೊರತೆಯನ್ನು ಕಳೆದ ಬಾರಿ ಹೇಳಿದಂತೆ ಶೇ 4-6ಕ್ಕೆ ಸೀಮಿತಗೊಳಿಸುವಲ್ಲಿ ಸರ್ಕಾರ ವಿಫಲವಾಗಿದ್ದು ಶೇ 5.1ರಷ್ಟು ಹೆಚ್ಚಾಗಿದೆ, ಇದು ಅರ್ಥವ್ಯವಸ್ಥೆಗೆ ತುಂಬಾ ಆತಂಕಕಾರಿ. ಈ ಬಜೆಟ್ ಬಡಜನರ ವಿರೋಧಿಯಾಗಿದ್ದು ಅರ್ಥವ್ಯವಸ್ಥೆಗೂ ಪೂರಕವಾದ ಯಾವುದೇ ಅಂಶಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.