ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಾಗಿರುವ 22.75 ರ ಯೋಜನೆಯ 1.45 ಕೋಟಿ ರೂ.ಗಳ ಅನುದಾನವನ್ನು ಕಳೆದ ಮೂರು ವರ್ಷಗಳಿಂದ ಬಳಕೆ ಮಾಡದೇ ಹಾಗೆ ಇಟ್ಟಿರುವ ಅಂಶ ಶುಕ್ರವಾರ ನಡೆದ ನಗರಸಭೆ ತುರ್ತು ಸಭೆಯಲ್ಲಿ ಬೆಳಕಿಗೆ ಬಂದಿತು.22.75 ರ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಕುರಿತು ಸಭೆಯಲ್ಲಿ ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಪ್ರಸ್ತಾಪ ಮಾಡುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ಹೊನ್ನಪ್ಪ ತಗಡಿನಮನಿ, ಮೂರು ವರ್ಷಗಳಿಂದ ಈ ಯೋಜನೆ ಟೆಂಡರ್ ಕರೆಯುವುದು, ಅದಕ್ಕೆ ಸಭೆಯಲ್ಲಿ ಒಪ್ಪಿಗೆ ಪಡೆಯುವುದು ಇವೆರಡೇ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.

ನಗರದ ಯಾವುದೇ ಒಬ್ಬ ಫಲಾನುಭವಿಗಳಿಗೂ ಯೋಜನೆ ಲಾಭ ಸಿಕ್ಕಿಲ್ಲ. ಭಾಗ್ಯಜ್ಯೋತಿ ಸಂಪರ್ಕ ಕಲ್ಪಿಸುವುದು, ಆಟೋ ಕೊಡಿಸುವ, ಮನೆ ನಿರ್ಮಾಣಕ್ಕೆ ಧನಸಹಾಯ ಒದಗಿಸುವ ಕೆಲಸ ಆಗಿಲ್ಲ. ಮೂರು ವರ್ಷಗಳಿಂದ ಬಂದಿರುವ ಯೋಜನೆ ಹಣ ಏನಾಗಿದೆ. ಏತಕ್ಕಾಗಿ ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗಿಲ್ಲ ಎಂಬ ಬಗ್ಗೆ ವಿವರ ನೀಡುವಂತೆ ಅವರು ನಗರಸಭೆ ಆಯುಕ್ತರನ್ನು ಒತ್ತಾಯಿಸಿದರು.

ಆಗ ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಮಾತನಾಡಿ, ಕೆಲವೊಂದು ಅನಿವಾರ್ಯ ಕಾರಣಗಳಿಂದ ಯೋಜನೆಯ ಅನುಷ್ಠಾನಕ್ಕೆ ತರಲಾಗಿಲ್ಲ. ಮೂರು ವರ್ಷದ ಹಣವನ್ನು ಕ್ರೋಡಿಕರಣ ಮಾಡಿದರೆ, ಸುಮಾರು 145 ಲಕ್ಷ ರೂ.ಆಗಲಿದೆ. ಈ ಹಣಕ್ಕೆ ಕ್ರಿಯಾಯೋಜನೆ ರೂಪಿಸಿದರೆ, 15 ದಿನಗಳಲ್ಲಿ ಖರ್ಚು ಮಾಡಬಹುದಾಗಿದೆ ಎಂದು ಸಭೆಗೆ ತಿಳಿಸಿದರು.ಆಯುಕ್ತರ ಉತ್ತರಕ್ಕೆ ತೃಪ್ತರಾಗದ ಸದಸ್ಯ ತಗಡಿನಮನಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದ ಬಗ್ಗೆ ನಗರಸಭೆ ಸಂಪೂರ್ಣ ನಿರ್ಲಕ್ಷ್ಯಿಸಿ ಆ ಜನಾಂಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆಪಾದಿಸಿದರು.

ಪತ್ರಿಕೆಗಳಲ್ಲಿ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ ಎಂದು ಆಯುಕ್ತರ ಸಭೆಗೆ ತಿಳಿಸಿದಾಗ, ಯೋಜನೆಯ ಬಗ್ಗೆ ಆ ಜನಾಂಗಕ್ಕೆ ಇರಲಿ ನಗರಸಭೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅದೇ ಕಾರಣದಿಂದ ನಗರಸಭೆಯಲ್ಲಿ ಸಾಕಷ್ಟ ಹಣವಿದ್ದರೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಿಲ್ಲ. ಅದು ಅಲ್ಲದೇ ಅಧ್ಯಕ್ಷರು ತಮಗೆ ಬೇಕಾದ ಸದಸ್ಯರಿಗೆ ಅಷ್ಟೇ ಮಾಹಿತಿ ನೀಡಿ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ಲಾಭ ಸಿಗುತ್ತಿಲ್ಲ ಎಂದರು.
ಆಗ ಅಧ್ಯಕ್ಷರು ಸದಸ್ಯರ ಗಮನಕ್ಕೆ ತಂದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಈಗಲೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಯಾರಾದರೂ ಫಲಾನುಭವಿಗಳಿದ್ದರೆ ಅರ್ಜಿ ಸಲ್ಲಿಸುವಂತೆ ಹೇಳಬಹುದು ಎಂದು ತಿಳಿಸಿದರಲ್ಲದೇ ಅರ್ಜಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು.

ಫಲಾನುಭವಿಗಳ ಆಯ್ಕೆಯಲ್ಲಿ ತಪ್ಪು: ಯೋಜನೆಯಲ್ಲಿರುವ ಅನುಕೂಲತೆಗಳನ್ನು ಪಡೆಯಲು ಕೆಲವರೇ ಬೇರೆ ಬೇರೆ ವಿಭಾಗಕ್ಕೆ ಅರ್ಜಿ ಸಲ್ಲಿದ್ದಾರೆ. ಒಂದೇ ಕುಟುಂಬ ನಾಲ್ಕೈದು ಜನರು ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸದಸ್ಯೆ ಮಂಜುಳಾ ಕರಬಸಮ್ಮನವರ ಆರೋಪಿಸಿದರೆ, ಇದಕ್ಕೆ ಧ್ವನಿಗೂಡಿಸಿದ ಸದಸ್ಯ ತಗಡಿಮನಿ, ವಕೀಲರಿಗೆ ಪುಸ್ತಕ ನೀಡುವ ಯೋಜನೆಯಲ್ಲಿ ಹಿಂದೇ ಫಲಾನುಭವಿಗಳಾದವರೇ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅಂತಹ ಫಲಾನುಭವಿಗಳಿಗೆ ಮತ್ತೊಮ್ಮೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.ಅರ್ಹ ಫಲಾನುಭವಿಗಳನ್ನೇ ಆಯ್ಕೆ ಮಾಡಲಾಗಿದೆ. ಸದಸ್ಯರು ಮಾಹಿತಿ ಇಲ್ಲದೇ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಅಧ್ಯಕ್ಷ ಜಗದೀಶ ಮಲಗೋಡ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.