ಕೃಷ್ಣರಾಜಪುರ: ಅರ್ಹ ಪರಿಶಿಷ್ಟ ಫಲಾನುಭವಿಗಳಿಗೆ ಬಿಬಿಎಂಪಿ ವತಿಯಿಂದ ಮಂಜೂರಾದ ಮನೆ ನಿರ್ಮಾಣದ ಆದೇಶ ಪತ್ರಗಳನ್ನು ಪಾಲಿಕೆ ಸದಸ್ಯ ಎನ್.ವೀರಣ್ಣ ವಿತರಿಸಿದರು.

`ಕೃಷ್ಣರಾಜಪುರದ 15 ಮಂದಿ, ಭಟ್ಟರಹಳ್ಳಿಯ 4 ಮಂದಿ, ತಂಬುಚೆಟ್ಟಿಪಾಳ್ಯದ ಒಬ್ಬರು ಸೇರಿದಂತೆ ಒಟ್ಟು 20 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ತಲಾ 3 ಲಕ್ಷ ರೂಪಾಯಿ ವೆಚ್ಚದ ಚೆಕ್ ಅನ್ನು ಹಂತ-ಹಂತವಾಗಿ ಫಲಾನುಭವಿಗಳಿಗೆ ವಿತರಿಸಲಾಗುವುದು~ ಎಂದು ಅವರು ತಿಳಿಸಿದರು.

`ಆರ್ಥಿಕವಾಗಿ ಹಿಂದುಳಿದವರಿಗೂ ಮನೆ ನಿರ್ಮಾಣಕ್ಕೆ ಸಹಾಯಧನ ವಿತರಿಸಲಾಗುವುದು. ಒಂದು ವಾರ್ಡ್ಗೆ ತಲಾ 25 ಮನೆಗಳನ್ನು ಮೀಸಲಿಡಲಾಗುವುದು. ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಬಿಬಿಎಂಪಿ ವತಿಯಿಂದ ನಡೆಯುತ್ತಿದೆ~ ಎಂದರು.

ಬಿಬಿಎಂಪಿ ಸಹಾಯಕ ಎಂಜಿನಿಯರ್ ಸೋಮಯ್ಯ, ವಾರ್ಡ್ನ ಅಧ್ಯಕ್ಷ ಮಂಜುನಾಥ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.