ಬುಧವಾರ, ಮೇ 19, 2021
22 °C

ಅಲರ್ಜಿಗೆ ಹಲವು ಕಾರಣ

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

ದೇಹದ ರೋಗಪ್ರತಿರೋಧಕ ಶಕ್ತಿಯ ವ್ಯವಸ್ಥೆಯು ಸಂಕೀರ್ಣ ಹಾಗೂ ಅದ್ಭುತವಾದದ್ದು. ರೋಗಪ್ರತಿರೋಧಕ ವ್ಯವಸ್ಥೆಯು ಸಮತೋಲನದಲ್ಲಿದ್ದಾಗ ಸಂಭವನೀಯ ಅಪಾಯಗಳನ್ನು (ಉದಾ: ಕೀಟಾಣುಗಳು, ವೈರಸ್‌ಗಳು, ಟಾಕ್ಸಿನ್ ಮುಂತಾದುವುಗಳನ್ನು ) ತೆಗೆದುಹಾಕುತ್ತದೆ. ಆದರೆ ಕೆಲವೊಮ್ಮೆ ನಮ್ಮ ರೋಗಪ್ರತಿರೋಧಕ ವ್ಯವಸ್ಥೆಯು ಪರಿಸರದಲ್ಲಿರುವ ಒಂದು ವಸ್ತುವಿಗೆ ಬಹಳ ಹುರುಪಿನಿಂದ ಪ್ರತಿಕ್ರಿಯೆಯನ್ನು ನೀಡುತ್ತದೆ.ಉದಾಹರಣೆ: ಮೂಗಿನಲ್ಲಿ ಸೋರಿವುದು, ಕಣ್ಣಿನಿಂದ ನೀರು ಸೋರುವುದು, ಮೂಗು ಕಟ್ಟುವುದು. ಇದರ ಜೊತೆ ರೋಗಪ್ರತಿರೋಧಕ ವ್ಯವಸ್ಥೆಯು ಉತ್ಪ್ರೇಕ್ಷಿತವಾಗಿ ಅಸ್ತಮಾ ಅಥವಾ ಚರ್ಮರೋಗಗಳಿಗೆ ಸಂಬಂಧಿಸಿದ ಅಲರ್ಜಿಯಾಗಿ ಲಕ್ಷಣಗಳನ್ನು ತೋರಿಸಬಹುದು.

ದೇಹದ ಪ್ರಕೃತಿಯು ಹೆಚ್ಚಾಗಿ ನಿರ್ದಿಷ್ಟ ಅಹಾರ ಪದಾರ್ಥಗಳು, ಔಷಧ ಮುಂತಾದವನ್ನು ಅವಲಂಬಿಸಿದ್ದರೂ, ಅನುವಂಶಿಕತೆಯು ಒಂದು ಮುಖ್ಯವಾದ ಅಂಶ. ತಂದೆತಾಯಿಗಳಿಗೆ ಅಲರ್ಜಿ ಇದ್ದರೆ ಮಕ್ಕಳಲ್ಲಿ ಅಲರ್ಜಿ ಬರುವ ಸಾಧ್ಯತೆಗಳು ಶೇ. 60ರಷ್ಟು.ಅಲರ್ಜಿ ಎಂಬುದು ಒಂದು ಪದಾರ್ಥಕ್ಕೆ ಪ್ರತಿಕೂಲವಾದ ಪ್ರತಿಕ್ರಿಯೆಗಳ ಶ್ರೇಣಿ. ಆ ಪದಾರ್ಥವು ಒಂದು ನಿರ್ದಿಷ್ಟವಾದ ಆಹಾರ ಪದಾರ್ಥ, ದೂಳು, ಸಾಕುಪ್ರಾಣಿಗಳ ಕೂದಲುಗಳು ಅಥವಾ ಪುಕ್ಕಗಳು, ಕೃತಕ ಆಹಾರ ಸಂಯೋಜನೀಯಗಳು, ರಾಸಾಯನಿಕ ಮಾರ್ಜಕಗಳು, ಔಷಧಗಳಂಥವು ಆಗಿರುತ್ತವೆ.ಅಲರ್ಜಿಯ ಪದಾರ್ಥಕ್ಕೆ ಪ್ರತಿಕ್ರಿಯಿಸುತ್ತ ನಮ್ಮ ದೇಹದ ರೋಗಪ್ರತಿರೋಧಕ ವ್ಯವಸ್ಥೆಯು ‘ಆನ್ಟಿಬಾಡೀಸ್’ಗಳನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಕೆಲವು ಜೀವಕೋಶಗಳು ‘ಹಿಸ್ಟಮಿನ್‌’ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಆಗ ಕಣ್ಣಿನಲ್ಲಿ ತುರಿಕೆ, ಚರ್ಮದ ಪ್ರತಿಕ್ರಿಯೆಗಳು, ಗಂಟಲಿನಲ್ಲಿ ತುರಿಕೆ, ಸೈನಸ್ ಕಂಜೆಶನ್, ಉಬ್ಬಸ ಮುಂತಾದ ಅಹಿತಕರ ಚಿಹ್ನೆಗಳನ್ನು ಕಾಣಬಹುದು. ಅಲರ್ಜಿಗೆ ಬಹಳ ಕಾರಣಗಳಿರುವುದರಿಂದ ಅದನ್ನು ಗುಣಪಡಿಸಲು ಅದರ ಮೂಲಕಾರಣವನ್ನು ಹುಡುಕಿ, ಚಿಕಿತ್ಸೆಯನ್ನು ಮಾಡಬೇಕು.ಮೂರು ಬಗೆಯ ಅಲರ್ಜಿಗಳು

ಶ್ವಾಸಕೋಶದ ಅಲರ್ಜಿ: ಸೀನುವುದು, ಕೆಮ್ಮುವುದು, ಕಣ್ಣಿನಿಂದ ಅಥವಾ ಮೂಗಿನಿಂದ ನೀರು ಸೋರುವುದು, ಅಸ್ತಮಾ* ಆಹಾರದ ಅಲರ್ಜಿ: ಅತಿಸಾರ, ಅಪಾನವಾಯು, ದದ್ದುಗಳು, ಎಗ್ಸೀಮಾ* ಸಂಪರ್ಕ ಅಲರ್ಜಿನವೆ, ಕಜ್ಜಿ, ಉರಿಯುವ ಸಂವೇದನೆ.ಬೊಬ್ಬೆಗಳ ಅಲರ್ಜಿಯನ್ನು ಕಡಿಮೆ ಮಾಡುವ ಪದ್ಧತಿಗಳು* ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಬೇಕು.* ಹಣ್ಣು–ತರಕಾರಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸೇವಿಸುವುದು.* ಚೆನ್ನಾಗಿ ನಿದ್ರೆ ಮಾಡುವುದು.* ಉಗುರು ಬೆಚ್ಚನೆಯ ನೀರನ್ನು ಕುಡಿಯುವುದು.* ಯೋಗಾಭ್ಯಾಸ, ಪ್ರಾಣಾಯಾಮ ಹಾಗೂ ಧ್ಯಾನವನ್ನು ತಪ್ಪದೆ ಮಾಡುವುದು.ಅಲರ್ಜಿ ಅಥವಾ ಅಸ್ತಮಾಗೆ ಚಿಕಿತ್ಸೆ ಕೊಡುವಾಗ ದೇಹದ ರೋಗನಿರೊಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಆದ್ಯತೆಯನ್ನು ಕೊಡಬೇಕು. ಚಿಕಿತ್ಸೆಯನ್ನು ಕೊಡಬಹುದು; ಆದರೆ ಅದು ಮತ್ತೆ ಬಾರದಿರುವಂತೆ ನೋಡಿಕೊಳ್ಳುವುದೇ ಮುಖ್ಯ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.