ಶನಿವಾರ, ಜೂನ್ 19, 2021
26 °C

ಅಲ್ಪಸಂಖ್ಯಾತರ ಬೆಂಬಲ ಬಿಜೆಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪವಚುನಾವಣೆಯಲ್ಲಿ  ಅಲ್ಪಸಂಖ್ಯಾತರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ತಿಳಿಸಿದರು.ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಮತಯಾಚನೆ ಮಾಡಲು ಮಂಗಳವಾರ ಆಗಮಿಸಿದ  ಅವರು ಪಕ್ಷದ ಕಚೇರಿಯಲ್ಲಿ ಮಾತನಾಡಿದರು.  ಎರಡು ಜಿಲ್ಲೆಗಳಲ್ಲೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಳೆದ 4ವರ್ಷಗಳಲ್ಲಿ ಬಿಜೆಪಿ ಅಲ್ಪ ಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿದೆ. ವಕ್ಛ್ ಮಂಡಳಿಯಿಂದ ಮುಸ್ಲಿಂ ಮಹಿಳೆಯರಿಗೆ ಕ್ಯಾನ್ಸರ್, ಹೃದಯದ ರೋಗ ಮುಂತಾದ ಚಿಕಿತ್ಸೆಗೆ ರೂ.1ಲಕ್ಷ  ನೀಡುವ ಯೋಜನೆ ರೂಪಿಸಿದೆ. ಹಜ್ ಯಾತ್ರಿಕರಿಗೆ ಸಹಾಯವಾಗುವ ಹಜ್‌ಭವನ ನಿರ್ಮಾಣ ಮಾಡುತ್ತಿದೆ. ಬ್ಯಾರಿ ಅಕಾಡೆಮಿ ಸ್ಥಾಮಿಸಲಾಗಿದೆ.ವಕ್ಛ್ ಮಂಡಲಿಯಲ್ಲಿ ಬ್ಯಾರಿ ಸಮುದಾಯದವರಿಗೆ ಪ್ರಾತಿನಿದ್ಯ ನೀಡಲಾಗಿದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ರೂ.50 ಕೋಟಿ ಅನುದಾನ ನೀಡಲಾಗಿದೆ.  ವಕ್ಛ್ ಮಂಡಳಿ 4 ಲಕ್ಷ ಕೋಟಿ ಆಸ್ತಿ ಹೊಂದಿದ್ದು ಇದರಲ್ಲಿ ಕೆಲವರು 2ಲಕ್ಷ ಕೋಟಿ ಮೌ ಲ್ಯದ ಆಸ್ತಿ ಕಬಳಿಸಿರುವ ಬಗ್ಗೆ ಬಗ್ಗೆ ಬಿಜೆಪಿಯ ಅಲ್ಪಸಂಖ್ಯಾತರ ಆಯೋಗ ಪತ್ತೆ ಹಚ್ಚಿದೆ ಎಂದರು. ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದರು ಅಲ್ಪಸಂಖ್ಯಾತರನ್ನು ಕಡೆಗಣಿಸಿತು ಎಂದು ದೂರಿದರು. ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಈ ಬಾರಿ 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.ರಾಜ್ಯ ವಕ್ಛ್ ಮಂಡಳಿ ಸದಸ್ಯ ಸೈಯದ್‌ಆಲಿ ಖಾನ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೌಲ್ವಿಗಳಿಗೆ ಸಂಬಳ ನಿಗದಿ ಮಾಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿತ್ತು ಎಂದು ದೂರಿದರು. ಈ ಬಾರಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಸಂಪತ್‌ಕುಮಾರ್, ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಮೊಯಿದ್ದೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕರ, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಪಿಸನ್ನಿ, ಜಿಲ್ಲಾ ವಕ್ಛ್‌ಮಂಡಳಿ ಸದಸ್ಯ ಅಬಿ ಬುಲ್ಲಾ, ಸೈಫುಲ್ಲಾ, ಶಬ್ಬಿರ್, ನಾಸೀರ್‌ಖಾನ್ ಇದ್ದರು.     

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.