ಅಲ್‌ಖೈದಾದಿಂದ ಹೊಸ ವಿಡಿಯೊ ದೃಶ್ಯ ಪ್ರಸಾರ

ಭಾನುವಾರ, ಮೇ 19, 2019
34 °C

ಅಲ್‌ಖೈದಾದಿಂದ ಹೊಸ ವಿಡಿಯೊ ದೃಶ್ಯ ಪ್ರಸಾರ

Published:
Updated:

ಲಂಡನ್, (ಐಎಎನ್‌ಎಸ್): 9/11ರ ದಾಳಿ ನಡೆದು 10 ವರ್ಷಗಳು ಸಂದ ಸಂದರ್ಭದಲ್ಲಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಇಂಟರ್‌ನೆಟ್‌ನಲ್ಲಿ ಹೊಸ ವಿಡಿಯೊ ದೃಶ್ಯಗಳನ್ನು ಪ್ರಸಾರ ಮಾಡಿದೆ.`ನಮ್ಮ ಸಂಘಟನೆಯು ವಿಜಯದ ಹಾದಿಯಲ್ಲಿದೆ~ ಎಂದು ಸಂಘಟನೆಯ ಹೊಸ ಮುಖ್ಯಸ್ಥ ಐಮನ್ ಅಲ್ ಜವಾಹಿರಿ ಹೇಳಿದ್ದಾನೆ.`ಶೀಘ್ರದಲ್ಲೇ ಜಯ~ ಎಂಬ ತಲೆಬರಹದ, ಒಂದು ಗಂಟೆ ಕಾಲದ ವಿಡಿಯೊ ದೃಶ್ಯವನ್ನು ಜವಾಹಿರಿ ಸಿದ್ಧಪಡಿಸಿದ್ದಾಗಿ ಸ್ಕೈ ನ್ಯೂಸ್ ಚಾನೆಲ್ ವರದಿ ಮಾಡಿದೆ.ಈ ವಿಡಿಯೊದಲ್ಲಿ ಬಿನ್ ಲಾಡೆನ್, `ಪ್ರಮುಖ ಕಂಪೆನಿಗಳ ಗುಲಾಮರಾಗಬೇಡಿ~ ಎಂದು ಅಮೆರಿಕದ ಪ್ರಜೆಗಳಿಗೆ ಕರೆ ನೀಡಿರುವುದನ್ನು ದಾಖಲಿಸಲಾಗಿದೆ.ಈಜಿಪ್ಟ್, ಲಿಬಿಯಾ ಮತ್ತು ಟ್ಯುನೀಷಿಯದಲ್ಲಿ ಇತ್ತೀಚೆಗೆ ನಡೆದ ಬಂಡಾಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಜವಾಹಿರಿ, ಕ್ರಾಂತಿಗಳು ಅಮೆರಿಕದ ಸೋಲು ಎಂದು ಬಣ್ಣಿಸಿದ್ದಾನೆ.ಈ ರಾಷ್ಟ್ರಗಳಲ್ಲಿ ನಿಜವಾದ ಇಸ್ಲಾಂ ಅನ್ನು ಜಾರಿ ಮಾಡಬೇಕು ಎಂದೂ ಆತ ಕರೆ ನೀಡಿದ್ದಾನೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry