ಮಂಗಳೂರು ಹುಡುಗಿ ಯಜ್ಞಾಶೆಟ್ಟಿ ಅವರ ಅದೃಷ್ಟ ಮಗ್ಗಲು ಬದಲಿಸಿದೆ. ‘ಎದ್ದೇಳು ಮಂಜುನಾಥ’ ಚಿತ್ರದ ನಂತರ ಅವರು ನಿರ್ವಹಿಸಿದ ಪ್ರತಿ ಪಾತ್ರವೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ‘ಉಳಿದವರು ಕಂಡಂತೆ’ ಚಿತ್ರದ ‘ಶಾರದೆ’ ಪಾತ್ರ ಅದಕ್ಕೆ ತಾಜಾ ಉದಾಹರಣೆ. ಚಿತ್ರ ಜೀವನ ಮತ್ತು ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಕಚಗುಳಿಯಾಗಿ ಮಾತನಾಡಿದ್ದಾರೆ...

ಇಲ್ಲಿವರೆಗೂ ನಟಿಸಿದ ಬಹುತೇಕ ಚಿತ್ರಗಳಲ್ಲಿ ಅಳುಮುಂಜಿ ಪಾತ್ರ ನಿರ್ವಹಿಸಿದ್ದೀರಿ. ತೆರೆ ಮೇಲೆ ಯಜ್ಞಾಶೆಟ್ಟಿಯನ್ನು ಅಳಿಸುವುದು ಅಂದರೆ ನಿರ್ದೇಶಕರಿಗೆ ಇಷ್ಟವೇ?
‘ಎದ್ದೇಳು ಮಂಜುನಾಥ’ ಚಿತ್ರದ ನಂತರ ಚಿತ್ರರಂಗದಲ್ಲಿ ಒಂದು ಸುದ್ದಿ ಹುಟ್ಟಿತ್ತು. ಯಜ್ಞಾಶೆಟ್ಟಿ ಗ್ಲಿಸರಿನ್ ಇಲ್ಲದೆ ಅಳುತ್ತಾರೆ ಎಂದು. ಪ್ರೊಡಕ್ಷನ್್ ಕಾಸ್ಟ್ ಉಳಿಯುತ್ತದೆ ಎನ್ನುವ ಕಾರಣಕ್ಕೆ ಅಳುವ ಪಾತ್ರಗಳಿಗೆ ನನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ನಿರ್ದೇಶಕರು! ಯಜ್ಞಾ ಈಗ ಅಳಬೇಕಮ್ಮ ಅಂದರೆ ತಕ್ಷಣವೇ ಅಳುತ್ತಿದ್ದೆ.

ಕಣ್ಣೀರಿನ ಕಲೆ ಬಾಲ್ಯದಿಂದ ಸಿದ್ಧಿಸಿದ್ದೇ?
ಅಪ್ಪ ಅಮ್ಮ ಮುದ್ದಿನಿಂದ ಬೆಳೆಸಿದ್ದಾರೆ. ನಿಜ ಜೀವನದಲ್ಲಿ ಅಳುವುದು ತುಂಬಾ ಕಡಿಮೆ. ನಗುವೇ ಹೆಚ್ಚು. ಚಿತ್ರಗಳ ಡಬ್ಬಿಂಗ್ ವೇಳೆ ನಗುವಿನ ಸೌಂಡೇ ಹೊರಡುವುದಿಲ್ಲ. ಅಳುವುದು ತುಂಬಾ ಸುಲಭ.

‘ಎದ್ದೇಳು ಮಂಜುನಾಥ’ ಚಿತ್ರದಲ್ಲಿ ಕುಡುಕನ ಹೆಂಡತಿಯಾಗಿ ನಟಿಸಿದ್ದೀರಿ. ‘ಎಣ್ಣೆ’ ಹೊಡೆಯುವ ಹುಡುಗನನ್ನು ಮದುವೆಯಾಗುತ್ತೀರಾ?
ಇಲ್ಲಪ್ಪ. ಆ ಚಿತ್ರದ ಗೌರಿ ಪಾತ್ರ ನನ್ನ ನೈಜ ಕ್ಯಾರೆಕ್ಟರಿಗೆ ಪೂರ್ಣ ವಿರುದ್ಧ. ಆ ಪಾತ್ರಕ್ಕೂ ನನ್ನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ.

ಇತ್ತೀಚೆಗೆ ಬಿಡುಗಡೆಯಾದ ‘ಸಡಗರ’ ಚಿತ್ರದಲ್ಲಿ ಸಡಗರವಾಗಿಯೇ ಅಭಿನಯಿಸಿದ್ದೀರಿ. ಕಣ್ಣೀರು ಹಾಕಿಲ್ಲ?
‘ಸಡಗರ’ ತುಂಬಾ ಇಷ್ಟವಾಯಿತು. ನನಗೆ ನಗುವು ದಕ್ಕೂ ಬರುತ್ತದೆ ಎನ್ನುವುದನ್ನು ಅಲ್ಲಿ ತೋರಿಸಿದ್ದೇನೆ. ಚಿತ್ರದಲ್ಲಿ ನಾಯಕನ ಮೇಲೆ ನಿಂತು ಉಪ್ಪಿನ ಕಾಯಿ ಕದಿಯುವ ದೃಶ್ಯವಿದೆ. ಆ ದೃಶ್ಯ ಚಿತ್ರೀಕರಿಸುವಾಗ ಕ್ಯಾಮೆರಾಮೆನ್ ಬಿದ್ದು ಬಿದ್ದು ನಗುತ್ತಿದ್ದರು. ತುಂಬಾ ಎಂಜಾಯ್ ಮಾಡಿದ ದೃಶ್ಯ ಅದು. ಯಾವ ವೇಳೆಯಲ್ಲಾದರೂ ನೆನಪಾದರೆ ನಗುತ್ತೇನೆ.

ಕಾಲೇಜಿನಲ್ಲಿ ಯಾವ ಹುಡುಗನ ಮೇಲಾದರೂ ಮನ ಮಿಡಿದಿತ್ತೇ?
ಕಾಲೇಜಿನಲ್ಲಿ ಕ್ರಷ್ ಆಗಿದ್ದಿದೆ. ಲವ್ ಮಾಡಿಲ್ಲ. ತುಂಬಾ ಪ್ರಪೋಸಲ್ ಬಂದಿದ್ದವು. ಆದರೆ, ಅವೆಲ್ಲ ರಿಜೆಕ್ಟ್ ಲಿಸ್ಟ್ಗೆ ಸೇರಿಬಿಟ್ಟವು. ಅಕಾಡೆಮಿಕ್ ಆಗಿಯೂ ಟಾಪ್ನಲ್ಲಿ ಇರುತ್ತಿದ್ದೆ. ಆದ್ದರಿಂದ ನನಗೆ ಸರಿ ಹೊಂದುವವರು ಯಾರೂ ಕಾಣುತ್ತಿರಲಿಲ್ಲ. ನನ್ನ ಸಹಪಾಠಿಗಳ ಜತೆಗೆ ಸೀನಿಯರ್ ಜೂನಿಯರ್ಗಳೂ ಪ್ರಪೋಸ್ ಮಾಡಿದ್ದರು. ನಾನು ಅಂತಿಮ ಪದವಿಯಲ್ಲಿ ದ್ದಾಗ ಮೊದಲ ವರ್ಷದ ಹುಡುಗ ಪ್ರಪೋಸ್ ಮಾಡಿದ್ದ. ಇಡೀ ಕಾಲೇಜಿನಲ್ಲಿ ಅತಿ ಹೆಚ್ಚು ರೋಸ್ ಬರುತ್ತಿದ್ದದ್ದು ನನಗೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ, ಎಷ್ಟು ಹುಡುಗರು ಪ್ರಪೋಸ್ ಮಾಡಿದ್ದರು ಎಂದು.

ಮೊದಲ ಬಾರಿ ‘ಐ ಲವ್ ಯು’ ಹೇಳಿದ ಹುಡುಗನ ನೆನಪು ಇದೆಯೇ?
ನನಗೆ ಮೊದಲು ಪ್ರಪೋಸ್ ಮಾಡುವುದಕ್ಕೆ ಬಂದ ಹುಡುಗ ಭಯಬಿದ್ದು ಬೆವರಿಬಿಟ್ಟಿದ್ದ. ಅವನು ಏನು ಹೇಳುವುದಕ್ಕೆ ಬಂದಿದ್ದಾನೆ ಎನ್ನುವುದು ಅರ್ಥವಾಯಿತು. ‘ನಿನ್ನ ಮಾತಿಗೆ ನಾಳೆ ಉತ್ತರ ನೀಡುತ್ತೇನೆ’ ಎಂದೆ. ಆನಂತರ ಅವನು ನನ್ನ ಮುಂದೆ ಬರಲೇ ಇಲ್ಲ.

ನಿಮ್ಮ ಡ್ರೀಮ್ ಬಾಯ್ ಹೇಗಿರಬೇಕು?
ದೊಡ್ಡ ಲಿಸ್ಟೇ ಇದೆ! ನನಗಿಂತ ಉದ್ದ ಇರಬೇಕು. ಅಡುಗೆ ಮಾಡಲು ಬರಬೇಕು.... ಇತ್ಯಾದಿ ಇತ್ಯಾದಿ ಬಹಳ ಇದೆ.

‘ಉಳಿದವರು ಕಂಡಂತೆ’ ಚಿತ್ರದಲ್ಲಿ ನಿಮಗೆ ಸಂಭಾಷಣೆಯೇ ಇಲ್ಲ. ಬಾಯಿಗೆ ಬೀಗ ಹಾಕಿಕೊಂಡಿದ್ದು ಕಷ್ಟ ಆಗಲಿಲ್ಲವಾ?
ನಿರ್ದೇಶಕ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಒಂದೂ ಡೈಲಾಗ್ ಕೊಟ್ಟಿಲ್ಲ. ಅದಕ್ಕೆ ತುಂಬಾ ಬೈಯ್ದಿದ್ದೇನೆ!

‘...ಮಂಜುನಾಥ’ನಲ್ಲೂ ಜಾಸ್ತಿ ಮಾತು ಇರಲಿಲ್ಲ ಅಲ್ಲವಾ?
ಅಯ್ಯೋ, ಆಗ ಕನ್ನಡವೇ ಸರಿಯಾಗಿ ಬರುತ್ತಿರಲಿಲ್ಲ. ನನ್ನ ಕನ್ನಡ ಭಾಷೆ ಕೇಳಿದರೆ ‘ದಯವಿಟ್ಟು ಕನ್ನಡ ಮಾತನಾಡಬೇಡಮ್ಮ’ ಎನ್ನುತ್ತಿದ್ದರು. ಮಾಧ್ಯಮದವರೇ ನನ್ನ ಕನ್ನಡ ಕಲಿಕೆಗೆ ಮೂಲ ಕಾರಣ. ‘ನಿಮಗೆ ಕನ್ನಡ ಬರಲ್ಲವಾ’ ಎಂದು ಅವರು ಕೇಳುತ್ತಿದ್ದರೆ ನನಗೆ ಏನೋ ಒಂದು ರೀತಿಯಾಗುತ್ತಿತ್ತು. ಆದ್ದರಿಂದ ಕ್ಯಾಮೆರಾಮೆನ್ ಸೇರಿದಂತೆ ಎಲ್ಲರಿಗೂ ನನ್ನ ಜತೆ ಕನ್ನಡದಲ್ಲೇ ಮಾತನಾಡಿ ಎಂದು ಕೇಳಿಕೊಂಡೆ.

‘ಉಳಿದವರು ಕಂಡಂತೆ’ ಚಿತ್ರದಲ್ಲಿ ನಿಮ್ಮ ಪಾತ್ರ ನಿಮಗೆ ಕಾಣಿಸಿದ್ದು ಹೇಗೆ?
ಮೀನು ಮಾರುವ ಮಹಿಳೆಯ ಪಾತ್ರ ಮಾಡಬೇಕು ಅಂದಿದ್ದರು. ಆಗಲ್ಲ ಅಂದಿದ್ದೆ. ಇಡೀ ಚಿತ್ರೀಕರಣದಲ್ಲಿ ನಾನೇ ರಕ್ಷಿತ್ ಶೆಟ್ಟಿಗೆ ಕಾಟ ಕೊಟ್ಟಿದ್ದು. ಚಿತ್ರದಲ್ಲಿ ಶಾರದಾ (ಅವರ ಪಾತ್ರದ ಹೆಸರು) ಎಷ್ಟು ಸರಳವಾಗಿ ಕಾಣಿಸಿಕೊಳ್ಳುತ್ತಾಳೋ ಅದಕ್ಕೆ ವಿರುದ್ಧವಾಗಿದ್ದೆ.

ಕರಾವಳಿ ಹುಡುಗಿಯಾಗಿದ್ದರೂ ಮೀನಿನ ಬಗ್ಗೆ ಮಡಿವಂತಿಕೆ ಏಕೆ?
ಮೀನಿನ ವಾಸನೆ ತುಂಬಾ ಸ್ಟ್ರಾಂಗ್. ನನಗೆ ಹಿಡಿಸಲ್ಲ. ಮನೆಯಲ್ಲಿ ಮೀನಿನ ಆಹಾರ ಮಾಡಿದಾಗ ಅಗರ್ ಬತ್ತಿ ಹಿಡಿದು ಓಡಾಡುತ್ತೇನೆ. ಚಿಕನ್ ತಿನ್ನುತ್ತೇನೆ. ನನಗೆ ಯಾರೋ ಶಾಪ ಇಟ್ಟಿರಬೇಕು. ಒಂದಲ್ಲಾ ಒಂದು ದಿನ ಫಿಶರ್ ವುಮೆನ್ ಆಗ್ತೀಯ ಅಂತ, ಅದಕ್ಕೆ ಆ ಪಾತ್ರ ಸಿಕ್ಕಿತ್ತು.

ಅತ್ತಿದ್ದು, ನಕ್ಕ ಪಾತ್ರಗಳು ಆಯಿತು. ಮುಂದೆ ಯಾವ ರೀತಿ ಚಿತ್ರದಲ್ಲಿ ತೊಡಗಬೇಕು ಅಂದುಕೊಂಡಿದ್ದೀರಿ?
ಡಾನ್ಸ್ ತುಂಬಾ ಇಷ್ಟ, ನೃತ್ಯ ಪ್ರಧಾನ ಚಿತ್ರ ಸಿಕ್ಕರೆ ಒಳ್ಳೆಯದು.

ಶಸ್ತ್ರ ಚಿತ್ರದಲ್ಲಿ ನಕ್ಸಲೇಟ್ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ. ಗುಂಡು ಹೊಡೆಯುವುದನ್ನು ಕಲ್ತಿದ್ದೀರಾ?
ನನ್ನ ಪಾತ್ರದಿಂದಲೇ ಚಿತ್ರಕ್ಕೆ ಮುಖ್ಯ ತಿರುವು ಸಿಕ್ಕುವುದು. ‘ಶಸ್ತ್ರ’ ಚಿತ್ರದ ಕಾರಣಕ್ಕೆ ಸ್ವಲ್ಪ ಸಣ್ಣಗಾಗಬೇಕಾಗಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.