ಶುಕ್ರವಾರ, ಮೇ 7, 2021
20 °C

ಅಶಕ್ತರ ಆಶಾಕಿರಣ ಡಿಎಸ್-ಮ್ಯಾಕ್ಸ್

-ಸತೀಶ ಬಿ. Updated:

ಅಕ್ಷರ ಗಾತ್ರ : | |

ರಿಯಲ್ ಎಸ್ಟೇಟ್ ಸಂಸ್ಥೆಗಳೆಂದರೆ ಹಣ ಗಳಿಸುವ, ಸಾಮಾಜಿಕ ಕಾಳಜಿಯಿಲ್ಲದ, ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದ ನೋಡುವ ಸಂಸ್ಥೆಗಳೆಂಬ ಅಪವಾದವಿದೆ. ಆದರೆ ಇಲ್ಲೊಂದು ಸಂಸ್ಥೆ ತನ್ನ ಜನಪರ ಕಾಳಜಿ, ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯಗಳಿಂದಾಗಿ ಗಮನ ಸೆಳೆಯುತ್ತಿದೆ.ರಿಯಲ್ ಎಸ್ಟೇಟ್ ವ್ಯವಹಾರವನ್ನು ಮುಖ್ಯ ಗುರಿಯಾಗಿಸಿಕೊಂಡು 2005ರಲ್ಲಿ ಸ್ಥಾಪನೆಯಾದ `ಡಿಎಸ್-ಮ್ಯಾಕ್ಸ್' ರಿಯಲ್ ಎಸ್ಟೇಟ್ ಕಂಪೆನಿಯು ಸಮಾಜದಲ್ಲಿರುವ ಅಶಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಕೆ.ವಿ.ಸತೀಶ್ ಸ್ಥಾಪಿಸಿದ ಈ ಸಂಸ್ಥೆಯು ಉಚಿತ ನೇತ್ರ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಪ್ರತಿಭಾ ಪುರಸ್ಕಾರ, ಔಷಧ ವಿತರಣೆ ಸೇರಿದಂತೆ ಪ್ರತಿವರ್ಷ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.ತನ್ನ ಅಂಗ ಸಂಸ್ಥೆಗಳಾದ ಆಶ್ರಾ ಫೌಂಡೇಷನ್ ಮತ್ತು `ಕೆವಿಎಸ್ ಫ್ಯಾನ್ಸ್ ಚಾರಿಟಬಲ್ ಟ್ರಸ್ಟ್' ಮೂಲಕ ಈ ಕಾರ್ಯಕ್ರಮಗಳನ್ನು ಕಂಪೆನಿ ಹಮ್ಮಿಕೊಳ್ಳುತ್ತಿದೆ.ಹೆಣ್ಣೂರಿನಲ್ಲಿರುವ `ಫ್ರೀಡಂ ಫೌಂಡೇಷನ್'ನಲ್ಲಿ 90ಕ್ಕೂ ಅಧಿಕ ಎಚ್‌ಐವಿ ಸೋಂಕಿತ ಮಕ್ಕಳಿದ್ದಾರೆ. ಆಶ್ರಾ ಫೌಂಡೇಷನ್ ಮೂಲಕ ಆ ಮಕ್ಕಳಿಗೆ ಪ್ರತಿ ತಿಂಗಳು ಔಷಧ ವಿತರಣೆ, ಚಿಕಿತ್ಸೆ ಕೊಡಿಸುವ ಮತ್ತು ಶಿಕ್ಷಣಕ್ಕೆ ಸಹಾಯ ಮಾಡುವ ಹೊಣೆ ಹೊತ್ತಿದೆ.ಮತ್ತಿಕೆರೆಯಲ್ಲಿರುವ ಡೇವಿಡ್ ಕ್ರಿಸ್ಟೋಫರ್ ಮೂಗ ಮತ್ತು ಕಿವುಡರ ಶಾಲೆಯಲ್ಲಿರುವ 80ಕ್ಕೂ ಅಧಿಕ ಮೂಗ ಮತ್ತು ಕಿವುಡುತನದಿಂದ ಬಳಲುತ್ತಿರುವ ಮಕ್ಕಳಿಗೆ ಊಟ ಮತ್ತು ಬಟ್ಟೆ ವಿತರಿಸುತ್ತಿದೆ. ಕಿವುಡ ಮಕ್ಕಳಿಗೆ `ಹಿಯರಿಂಗ್ ಏಯ್ಡ' ವಿತರಿಸುವ ಕುರಿತು ಕಾರ್ಯಕ್ರಮವನ್ನು ರೂಪಿಸುತ್ತದೆ.ವಯಸ್ಸಾದ ನಂತರ ಹಿರಿಯರು ಹಲವು ದೈಹಿಕ ಕಾಯಿಲೆಗಳಿಂದ ಬಳಲುತ್ತಾರೆ. ಕಣ್ಣಿನ ತೊಂದರೆ ಅದರಲ್ಲಿ ಪ್ರಮುಖವಾದುದು. ತಮ್ಮ ಮಕ್ಕಳಿಂದ, ಕುಟುಂಬದಿಂದ ನಿರ್ಲಕ್ಷಕ್ಕೊಳಗಾಗಿ ಸಾವಿರಾರು ಜೀವಗಳು ನೋವಿನಿಂದ ಬದುಕುತ್ತಿವೆ. ಅಂತಹವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ನೇತ್ರ ತಪಾಸಣೆ, ಕನ್ನಡಕ ವಿತರಣೆಯಂತಹ ಕೆಲಸಗಳನ್ನು ಕೆವಿಎಸ್ ಫ್ಯಾನ್ಸ್ ಚಾರಿಟಬಲ್ ಟ್ರಸ್ಟ್ ಮಾಡುತ್ತಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ದಯಾನಂದ.ಮೋದಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 50 ವರ್ಷ ಮೀರಿದವರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಅವರ ಊರಿಂದ ಕರೆತಂದು ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ತಲುಪಿಸುವವರೆಗಿನ ಸಂಪೂರ್ಣ ಹೊಣೆಯನ್ನು ಸಂಸ್ಥೆ ವಹಿಸಿಕೊಳ್ಳುತ್ತದೆ. ಈಗಾಗಲೇ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳ 280 ಅಧಿಕ ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ನಡೆಸಿ ಕನ್ನಡಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಈ ಸೇವೆ ನೀಡುವ ಗುರಿ ಹೊಂದಲಾಗಿದೆ ಎಂದು ಹೆಮ್ಮೆಯಿಂದ ವಿವರಿಸುತ್ತಾರೆ.ಕ್ಯಾನ್ಸರ್ ರೋಗಿಗಳೆಂದರೆ ಅವರನ್ನು ಒಂದು ರೀತಿಯಲ್ಲಿ ಅಸ್ಪೃಶ್ಯರಂತೆ ಕಾಣಲಾಗುತ್ತದೆ. ಅಂತಹ 400ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳು ಕಿದ್ವಾಯಿ ಆಸ್ವತ್ರೆಯಲ್ಲಿದ್ದಾರೆ. ವಾರದಲ್ಲಿ ಒಂದು ಬಾರಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಚಿಕಿತ್ಸೆಯ ಖರ್ಚು ಭರಿಸಲಾಗದಿರುವ ರೋಗಿಗಳಿಗೆ ಔಷಧ ಮತ್ತು ಚಿಕಿತ್ಸೆಯ ಖರ್ಚನ್ನು ನೀಡಲಾಗುತ್ತಿದೆ. ಸಂಸ್ಥೆಯ ಸಂಪಕಕ್ಕೆ : 2543 9990.ಪ್ರತಿಭಾ ಪುರಸ್ಕಾರ

ಪ್ರತಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಕಳೆದ ವರ್ಷ 150 ವಿದ್ಯಾರ್ಥಿಗಳನ್ನು ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸಿ ರೂ10 ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ವರ್ಷ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಅತಿ ಹೆಚ್ಚು ಅಂಕ ಪಡೆದು ವಿದ್ಯಾಭ್ಯಾಸವನ್ನು ಮುಂದುವರೆಸಲಾಗದ ವಿದ್ಯಾರ್ಥಿಗಳಿಗೆ ಅವರ ಓದಿಗೆ ಸಹಾಯ ಮಾಡಲಾಗುವುದು ಎಂದು ತಮ್ಮ ಟ್ರಸ್ಟ್‌ನ ಯೋಜನೆಗಳನ್ನು ವಿವರಿಸುತ್ತಾರೆ ಅವರು.ಆಶಕ್ತರಿಗೆ ನೆರವು

ಹಣ ಸಂಪಾದಿಸುವುದಷ್ಟೇ ಸಂಸ್ಥೆಯ ಉದ್ದೇಶವಲ್ಲ. ಬಡ, ಮಧ್ಯಮ ವರ್ಗದ ಕುಟುಂಬದಲ್ಲಿ ಸಾವಿರಾರು ಜನ ಅಶಕ್ತರಿದ್ದಾರೆ. ಅಂತಹ ಜನರಿಗೆ ನೆರವಾಗುವುದು ಸಂಸ್ಥೆಯ ಸಂಸ್ಥಾಪಕ ಕೆ.ವಿ.ಸತೀಶ್ ಅವರ ಆಶಯ.ಅದರಂತೆ ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗಿರುವ ಚಾರಿಟಿಗಳ ಮೂಲಕ  ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಆಶಯವನ್ನು ನೆರವೇರಿಸುವ ಕೆಲಸ ಮಾಡಲಾಗುತ್ತದೆ.

-ಎಸ್.ವಿ.ದಯಾನಂದ ಸಂಸ್ಥೆಯ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.