ಬುಧವಾರ, ಏಪ್ರಿಲ್ 21, 2021
25 °C

ಅಶೋಕ್ ಸೇನ್‌ಗೆ ಯೂರಿ ಮಿಲ್ನರ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಶೋಕ್ ಸೇನ್‌ಗೆ ಯೂರಿ ಮಿಲ್ನರ್ ಪ್ರಶಸ್ತಿ

ನವದೆಹಲಿ: ಅಲಹಾಬಾದ್‌ನ ಹರೀಶ್‌ಚಂದ್ರ ಸಂಶೋಧನಾ ಸಂಸ್ಥೆಯ ಭೌತ ವಿಜ್ಞಾನಿ ಅಶೋಕ್ ಸೇನ್ ಅವರು ವಿಶ್ವದಲ್ಲೇ ಅತ್ಯಂತ ಹೆಚ್ಚು ಮೊತ್ತದ ಯೂರಿ ಮಿಲ್ನರ್ ಫಂಡಮೆಂಟಲ್ ಫಿಸಿಕ್ಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯ ಮೊತ್ತ 16.7 ಕೋಟಿ ರೂ. ಆಗಿದ್ದು ಇದು ನೊಬೆಲ್ ಪ್ರಶಸ್ತಿ ಮೊತ್ತದ ಮೂರು ಪಟ್ಟು ಹೆಚ್ಚು.ಫಂಡಮೆಂಟಲ್ ಫಿಸಿಕ್ಸ್‌ನಲ್ಲಿ ಮಹತ್ವದ ಕೊಡುಗೆ ನೀಡುವ ಯುವ ಸಂಶೋಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ರಷ್ಯಾದ ಭೌತಶಾಸ್ತ್ರ ವಿದ್ಯಾರ್ಥಿ ಯೂರಿ ಮಿಲ್ನರ್ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.ಅನಿವಾರ್ಯ ಕಾರಣಗಳಿಂದ ಕಾಲೇಜು ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಮೊಟಕುಗೊಳಿಸಿದ್ದ  ಮಿಲ್ನರ್ ಬಳಿಕ ಫೇಸ್‌ಬುಕ್ ಮತ್ತು  ಗ್ರೂಪನ್‌ನಂತಹ ಕಂಪೆನಿಗಳಿಗೆ ಬಂಡವಾಳ ಹೂಡಿ ಮಿಲಿಯಗಟ್ಟಲೆ ಹಣ ಸಂಪಾದಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.