ಚಾಮರಾಜನಗರ: ಸೆ.4ರಂದು ನಡೆಯಲಿರುವ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಸ್ಥಗಿಸಗೊಳಿಸ ಬೇಕೆಂದು ಪ್ರಗತಿಪರ ಸಂಘಟನೆಗಳು ಜಿಲ್ಲಾಡಳಿತವನ್ನು ಶುಕ್ರವಾರ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆ ಅಧ್ಯಕ್ಷ ಸಿ.ಎಂ.ಕೃಷ್ಣ ಮೂರ್ತಿ ಮಾತನಾಡಿ, ಜಿಲ್ಲೆಗೆ ಬಂದಲ್ಲಿ ಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಶಾಪ ವಿಮೋಚನೆಗಾಗಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಕೇರಳದ ಜ್ಯೋತಿಷಿ ರವಿನಂಬೂದರಿ ನೇತೃತ್ವದ 35 ಜನ ಜ್ಯೋತಿಷಿಗಳ ತಂಡ ಅಂದಾಜು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಸೆ.4ರಿಂದ ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ತಿಳಿಸದೆ ಅಷ್ಟಮಂಗಳ ಪ್ರಶ್ನೆ ಹಾಕಲಾಗುತ್ತಿದೆ. ಚಾ.ನಗರ ಪಟ್ಟಣ ಮತ್ತು ಜಿಲ್ಲೆಯಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇ ಕಾಗಿದೆ. ಆದರೆ ಇದ್ಯಾವುದನ್ನು ಕಿಂಚಿತ್ತೂ ಆಲೋಚಿಸದೆ ಅಷ್ಟ ಮಂಗಲದಂತಹ ಕಂದಾಚಾರಕ್ಕೆ ಬೆಂಬಲ ನೀಡುತ್ತಿರುವುದು ದುರ್ದೈ ವದ ಸಂಗತಿಯಾಗಿದೆ ಎಂದರು.

ಆದ್ದರಿಂದ ಜಿಲ್ಲಾಡಳಿತ ಕೂಡಲೇ ಇತ್ತ ಗಮನಹರಿಸಿ ಅಷ್ಟಮಂಗಲ ಹಾಗೂ ಮತ್ತಿತರ ಕಾರ್ಯಗಳಿಗೆ ತಡೆವೊಡ್ಡಬೇಕು. ಒಂದು ವೇಳೆ ಏನಾದರೂ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ನಮ್ಮ ಶಾಸ್ತ್ರದ ಪ್ರಕಾರ ಮರಿ ಒಡೆದು ಪರ್ವ ಮಾಡುತ್ತೇವೆ. ಇದಕ್ಕೂ ಕೂಡ ಅನುಮತಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಗೋಷ್ಟಿಯಲ್ಲಿ ಸಿ.ಎನ್. ಗೋವಿಂದರಾಜು, ಆಲೂರು ನಾಗೇಂದ್ರ, ಬ್ಯಾಡಮೂಡ್ಲು ಬಸವಣ್ಣ, ರಾಮಸಮುದ್ರ ಬಂಗಾರಸ್ವಾಮಿ ಉಪಸ್ಥಿತರಿದ್ದರು.

ಅರ್ಜಿಗಳ ವಿತರಣೆ: ಮುಕ್ತ ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ವಿವಿಧ ಕೋರ್ಸ್ ಗಳ ವಿವರಣಾ ಪುಸ್ತಕ ಮತ್ತು ಅರ್ಜಿಗಳನ್ನು ಚಾಮರಾಜನಗರದ ಪ್ರಾದೇಶಿಕ ಕೇಂದ್ರದಲ್ಲಿ ವಿತರಿಸಲಾಗುತ್ತಿದೆ. ಮಾಹಿತಿಗೆ ದೂ. 08226 222191, ಮೊಬೈಲ್:99450 58950 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.