ಶನಿವಾರ, ಜನವರಿ 18, 2020
19 °C

ಅಸಭ್ಯ ವರ್ತನೆ: ಕೊಹ್ಲಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ದಿನ ಪ್ರೇಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಭಾರತ ತಂಡದ ಯುವ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ಪಂದ್ಯದ ಸಂಭಾವನೆಯ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಪಂದ್ಯದ ಮ್ಯಾಚ್ ರೆಫರಿ ರಂಜನ್ ಮದುಗಲೆ ಈ ಕ್ರಮ ಕೈಗೊಂಡಿದ್ದಾರೆ. ಫೀಲ್ಡಿಂಗ್ ವೇಳೆ ಪ್ರೇಕ್ಷಕರು ಮೂದಲಿಸಿದ ಕಾರಣ ಕೊಹ್ಲಿ ಮಧ್ಯದ ಬೆರಳು ತೋರಿಸಿದ್ದರು. ವಿಚಾರಣೆಗೆ ಕೊಹ್ಲಿ ಹಾಗೂ ತಂಡದ ಮ್ಯಾನೇಜರ್ ಶಿವಲಾಲ್ ಯಾದವ್ ಹಾಜರಾಗಿದ್ದರು. ಈ ಸಂದರ್ಭದಲ್ಲಿ ವಿರಾಟ್ ತಮ್ಮ ತಪ್ಪು ಒಪ್ಪಿಕೊಂಡರು. ಆದರೆ ಒಂದು ಟೆಸ್ಟ್ ಪಂದ್ಯದ ನಿಷೇಧದಿಂದ ಅವರು ಪಾರಾದರು.

`ನನ್ನ ತಾಯಿ ಹಾಗೂ ಸಹೋದರಿ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಇದನ್ನು ಹೇಗೆ ಸಹಿಸಿಕೊಳ್ಳುವುದು~ ಎಂದು ಬುಧವಾರ ಅವರು ತಮ್ಮ ಕ್ರಮವನ್ನು ಟ್ವಿಟರ್‌ನಲ್ಲಿ ಸಮರ್ಥಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)