ಬುಧವಾರ, ಏಪ್ರಿಲ್ 14, 2021
24 °C

ಅಸಮರ್ಪಕ ಸಂಕೇತ ಪದಾಂಧತೆಗೆ ಕಾರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಲಿನ್ (ಪಿಟಿಐ):  ಒಮ್ಮಮ್ಮೆ ಒಬ್ಬರು ಹೇಳಿದ ಮಾತುಗಳು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ (ಕೇಳಿಸುತ್ತದೆ). ಹಾಗಾಗಿ `ಇನ್ನೊಮ್ಮೆ ಹೇಳಿ, ಇನ್ನೊಮ್ಮೆ ಹೇಳಿ...~ ಎಂದು ಪದೇ ಪದೇ ಕೇಳುವಂತಾಗುತ್ತದೆ.

ಎಲ್ಲೋ ಗ್ರಹಿಕೆಯ ಕೊರತೆ ಇರಬೇಕು, ಏಕಾಗ್ರತೆಯ ಸಮಸ್ಯೆ ಇರಬೇಕೆಂದು ಸುಮ್ಮನಾಗುತ್ತೇವೆ.ಆದರೆ ಈ ಸಮಸ್ಯೆಗೆ ಮೂಲ ಕಾರಣ ಮಿದುಳಿನಲ್ಲಿನ ಸಂಕೇತ ಪ್ರಕ್ರಿಯೆಗಳ ಅಸಮರ್ಪಕ ಕಾರ್ಯನಿರ್ವಹಣೆ ಎನ್ನುತ್ತದೆ ಒಂದು ಸಂಶೋಧನೆ. ಹೀಗೆ ಅಸ್ಪಷ್ಟ ಮಾತು ಕೇಳಿಸುವ ತೊಂದರೆಗೆ `ಪದಾಂಧತೆ(Dyslexia)  ಎನ್ನುತ್ತಾರೆ.ಚೀನಾದ ಲೈಪಿಜಿಗ್‌ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಕಾಗ್ನಿಟಿವ್ ಸಂಸ್ಥೆಯ ಸಂಶೋಧಕರು `ಪದಾಂಧತೆ~ಯುಳ್ಳ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಮಿದುಳಿನ ಕೋಣೆಗಳಲ್ಲಿರುವ ನ್ಯೂಕ್ಲಿಯಸ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಸಂಕೇತಗಳು ಸ್ಪಷ್ಟವಾಗಿ ರವಾನೆಯಾಗುವುದಿಲ್ಲ. ಹೀಗಾಗಿ ಮಾತು ಅಸ್ಪಷ್ಟವಾಗಿ ಕೇಳಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.ಮೂರು ವಿಧದಲ್ಲಿ `ಪದಾಂಧತೆ~ ಕಾಡುತ್ತದೆ. ಒಂದು ಧ್ವನಿ, ಎರಡನೆಯದು ದೃಶ್ಯ ಮತ್ತು ಮೂರನೆಯದು ಏಕಾಗ್ರತೆ. ಪದಾಂಧತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮಾತುಗಳನ್ನು ಗುರುತಿಸಲು ಪರದಾಡುತ್ತಾರೆ. `ಪದಾಂಧತೆ~ಯಿರುವ ಮಕ್ಕಳು ಅಷ್ಟು ಬೇಗನೆ ಮಾತನಾಡುವುದಿಲ್ಲ~ ಎಂದು ಸಂಶೋಧಕರು ವಿವರಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.