ಸೋಮವಾರ, ಜನವರಿ 20, 2020
20 °C

ಅಸಾರಾಮ್ ಪುತ್ರ ಸೂರತ್‌ನಲ್ಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಬಂಧನ ಭೀತಿಯಿಂದಾಗಿ ತಲೆಮರಿಸಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಪುತ್ರ ನಾರಾಯಣ್ ಸಾಯಿ ಅವರನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಸೂರತ್‌ ನಲ್ಲಿ ಬಂಧಿಸಿದ್ದಾರೆ.

‘ದೆಹಲಿ –ಹರಿಯಾಣ ಗಡಿಯಲ್ಲಿ ನಾರಾಯಣ ಸಾಯಿ ಅವರನ್ನು ಬಂಧಿಸಲಾಗಿದೆ. ಜೊತೆಗೆ ಅವರ ಆಪ್ತ  ಹನುಮಾನ್ ಅವರನ್ನೂ ಬಂಧಿಸಲಾಗಿದೆ’ ಎಂಧು ದೆಹಲಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ರವೀಂದ್ರ ಯಾದವ್‌ ಬುಧವಾರ ಪಿಟಿಐಗೆ ತಿಳಿಸಿದರು.

ಬಂಧನದಿಂದ ಪಾರಾಗಲು ಸಾಯಿ ಸಿಖ್‌ ವ್ಯಕ್ತಿಯಂತೆ ವೇಷ ಬದಲಾಯಿಸಿಕೊಂಡಿದ್ದರು ಎಂದು ದೆಹಲಿ ಪೊಲೀಸ್‌ ಮೂಲಗಳು ಹೇಳಿವೆ.

ಇತ್ತ ಅಹಮದಾಬಾದ್‌ನಲ್ಲಿ ಪ್ರತಿಕ್ರಿಯಿಸಿರುವ ಗುಜರಾತ್‌ ಪೊಲೀಸ್‌ ಮಹಾ ನಿರ್ದೇಶಕ ಪ್ರಮೋದ್‌ ಕುಮಾರ್‌,ಸೂರತ್‌ನ ಜಹಾಂಗೀರಪುರ ಪೊಲೀಸ್‌ ಠಾಣೆಯಲ್ಲಿ ಸಹೋದರಿಯರಿಬ್ಬರು ಅಸಾರಾಮ್ ಬಾಪು ಹಾಗೂ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಬೆನ್ನಲ್ಲೆ ಕಳೆದ ಕೆಲ ತಿಂಗಳನಿಂದ ಸಾಯಿ ತಲೆಮರಿಸಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)