ಸೋಮವಾರ, ಏಪ್ರಿಲ್ 12, 2021
26 °C

ಅಸ್ಸಾಂ: ದೋಣಿ ದುರಂತ, 12 ಜನ ಪಾರು, ಒಬ್ಬ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧುಬ್ರಿ (ಅಸ್ಸಾಂ) (ಪಿಟಿಐ): ಅಸ್ಸಾಮಿನ ಧುಬ್ರಿ ಜಿಲ್ಲೆಯಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಾಡದೋಣಿಯೊಂದು ಭಾನುವಾರ ಬೆಳಗ್ಗೆ ಮಗುಚಿದ್ದು, ನದಿಗೆ ಬಿದ್ದ 12 ಮಂದಿಯನ್ನು ರಕ್ಷಿಸಲಾಯಿತು. ಒಬ್ಬ ವ್ಯಕ್ತಿ ಕಣ್ಮರೆಯಾಗಿದ್ದಾನೆ. ಭಾರತ - ಬಾಂಗ್ಲಾದೇಶ ಗಡಿಗೆ ಸಮೀಪ ಈ ದುರಂತ ಸಂಭವಿಸಿತು.ಭಾರತ-ಬಾಂಗ್ಲಾದೇಶ ಗಡಿಗೆ ಸಮೀಪದ ಮಣಕ್ಚಾರ್ ಬಳಿಯ ಶುಖ್ ಚಾರ್ ನಲ್ಲಿ ಈ ದುರಂತ ಸಂಭವಿಸಿತು. ದುರಂತದಲ್ಲಿ ಸಿಲುಕಿದ 12 ಮಂದಿಯನ್ನು ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಕಾಡಮ್ತಲಿಯಿಂದ ಅತುಂಡ್ ಚಾರ್ ಕಡೆಗೆ ಹೊರಟಿದ್ದ ದೋಣಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮರಳಿನ ಅಡ್ಡೆಗೆ ಡಿಕ್ಕಿ ಹೊಡೆದು ಮಗುಚಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.