ಗುರುವಾರ , ಮೇ 13, 2021
18 °C

ಅಹಂಕಾರದ ನಡುವೆ ಮರೆಯಾದ ನಾಮಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಸ್ವಾರ್ಥ ಹಾಗೂ ಅಹಂಕಾರದ  ನಡುವೆ ದೇವ ನಾಮಸ್ಮರಣೆ ಕಡಿಮೆಯಾಗಿದೆ ಎಂದು ಕೈವಾರ ಕ್ಷೇತ್ರ ಧರ್ಮಾಧಿಕಾರಿ  ಡಾ.ಎಂ.ಆರ್.ಜಯರಾಂ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಹೊರವಲಯದ ಐತಿಹಾಸಿಕ ಗಡಿದಂ ಬೆಟ್ಟದ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗಿನಾರೇಯಣ ತಾತಯ್ಯರವರ ದೇವಸ್ಥಾನ ಪೂಜೆ ಭೂಮಿ ಸಮಾರಂಭದಲ್ಲಿ ಯೋಗಿವರ್ಯರಿಗೆ ವಿಶೇಷ ಪೂಜೆ ಸಮರ್ಪಿಸಿ ಮಾತನಾಡಿದರು.ಇದೇ ವೇಳೆ ಭೂಮಿ ಪೂಜೆ  ಅಂಗವಾಗಿ ವಿಶೇಷ ಅಭಿಷೇಕ, ರಾಜೋಪಚಾರ, ಶೋಡಶೋಪಚಾರ, ಅಷ್ಟಾವಧಾನ ಸೇವೆ, ವಿವಿಧ ಫಲ ಪುಷ್ಪಗಳಿಂದ ಪುನುಗು, ಜವ್ವಾಜಿ, ಕೇಸರಿ, ಗೋರೋಜನ ಛತ್ರ ಚಮರಾದಿ ಬಿರುದು ಬಾವಲಿ ಗಳೊಂದಿಗೆ ಯೋಗಿವರ್ಯ ರಿಗೆ ಸಮರ್ಪಿಸಿದರು.  ಕ್ಷೇತ್ರದ ಸಂಯೋಜಕ ವಾನರಾಸಿ ಬಾಲಕೃಷ್ಣ ಭಾಗವತರ್ ಸಂಕೀರ್ತನೆ ಪ್ರಸ್ತುತ ಪಡಿಸಿದರು.

 ತಾತಯ್ಯ ಅವರ ಭಕ್ತಾಧಿಗಳಿಂದ ಭಜನೆ ಹಾಗೂ ಅಷ್ಟಾಕ್ಷರಿ ಮಂತ್ರ ನಡೆಸಿದರು. ಯೋಗಿನಾರೇಯಣ ತಾತಯ್ಯ ಅವರ ದೇಗುಲ ನಿರ್ಮಿಸಲು ಭೂಮಿ ನೀಡಿದ ಶಾರದಮ್ಮ ಹಾಗೂ ಜಯ ರಾಮಪ್ಪ ಅವರನ್ನು ಅಭಿನಂದಿಸಲಾಯಿತು.ವಿಶ್ವಸ್ಥ ಮಂಡಲಿ ಸದಸ್ಯ ಕೆ.ನರಸಿಂಹಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.