ಬುಧವಾರ, ಫೆಬ್ರವರಿ 24, 2021
23 °C

ಅಹಂ ಬದಿಗಿಟ್ಟು ಲೋಕಪಾಲ ಮಸೂದೆ ಜಾರಿ ಮಾಡಿ - ಯುಪಿಎಗೆ ಅಣ್ಣಾ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಂ ಬದಿಗಿಟ್ಟು ಲೋಕಪಾಲ ಮಸೂದೆ ಜಾರಿ ಮಾಡಿ - ಯುಪಿಎಗೆ ಅಣ್ಣಾ ಸಲಹೆ

ಪುಣೆ (ಪಿಟಿಐ): ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ `ಅಹಂ ಬಿಟ್ಟು~ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತನ್ನಿ  ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಗುರುವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದ ಅಣ್ಣಾ ಅವರು ಸುದ್ಧಿಗಾರರೊಂದಿಗೆ ಮಾತನಾಡುತ್ತಾ `ಮೇ ಅಂತ್ಯಕ್ಕೆ ಕೊನೆಗೊಳ್ಳುವ ಪ್ರಸಕ್ತ ಅಧಿವೇಶನದಲ್ಲಿ ಮಸೂದೆಯನ್ನು ಜಾರಿಗೊಳಿಸುವರೆಂಬ ಭರವಸೆಯನ್ನು ನಾನು ಹೊಂದಿದ್ದು, ಸರ್ಕಾರ ಅಹಂ ಬಿಟ್ಟು ದೇಶ ಹಾಗೂ ಸಮಾಜ ಕುರಿತು (ಪ್ರಬಲ ಲೋಕಪಾಲ್ ಮಸೂದೆ ಜಾರಿಗೊಳಿಸುವ ಮೂಲಕ) ಚಿಂತಿಸಬೇಕು~ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಪ್ರಬಲ ಲೋಕಾಯುಕ್ತ ಸಂಸ್ಥೆ ಜಾರಿಗೊಳಿಸುವ ಕುರಿತಂತೆ ಜನಾಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ  ಮೇ ಒಂದರಿಂದ ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ `ಮಹಾರಾಷ್ಟ್ರದಲ್ಲಿನ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಎಜಿ ಸಲ್ಲಿಸಿರುವ ವರದಿಯಲ್ಲಿರುವ ಮಂತ್ರಿಗಳು ತಪ್ಪಿಸ್ಥರೆಂದು ಕಂಡುಬಂದರೆ ಅವರಿಗೆ `ಜೀವಾವಧಿ ಶಿಕ್ಷೆ~ ವಿಧಿಸಬೇಕು~ ಎಂದು ಅಣ್ಣಾ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.