ಅ.15ರಂದು ಎನ್‌ಡಿಸಿ ಸಭೆ

ಶುಕ್ರವಾರ, ಮೇ 24, 2019
26 °C

ಅ.15ರಂದು ಎನ್‌ಡಿಸಿ ಸಭೆ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (ಎನ್‌ಡಿಸಿ) 12 ನೇ ಪಂಚವಾರ್ಷಿಕ ಯೋಜನೆಗೆ ಸಂಬಂಧಿಸಿದ  `ಪ್ರಸ್ತಾವ ಪತ್ರಿಕೆ~ ಕುರಿತು ಚರ್ಚಿಸಿ ಅನುಮೋದಿಸಲು ಅಕ್ಟೋಬರ್ 15 ರಂದು ಸಭೆ ಸೇರಲಿದೆ.`ಪ್ರಸ್ತಾವ ಪತ್ರಿಕೆ~ ಕುರಿತ ಚರ್ಚೆಯ ಜತೆಗೆ, ಮಂದಗತಿಯ ಪ್ರಗತಿ ಹಾಗೂ ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಲಿದೆ. ಪ್ರಧಾನಿ ನೇತೃತ್ವದ ಸಮಗ್ರ ಯೋಜನಾ ಆಯೋಗವು ಆಗಸ್ಟ್ 20ಂದು `ಪ್ರಸ್ತಾವ ಪತ್ರಿಕೆ~ಗೆ ಅನುಮೋದನೆ ನೀಡಿದೆ.ಅಲ್ಲದೇ ಇದೇ 15 ರಂದು ಇದಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. 12ನೇ ಪಂಚವಾರ್ಷಿಕ ಯೋಜನೆ ನೀಲನಕ್ಷೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ  ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry