ಸೋಮವಾರ, ಮಾರ್ಚ್ 8, 2021
24 °C

ಆಂಧ್ರಕ್ಕೆ ವಿಶೇಷ ಸ್ಥಾನಮಾನ ‘ರಕ್ಷಾ ಬಂಧನ’ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂಧ್ರಕ್ಕೆ ವಿಶೇಷ ಸ್ಥಾನಮಾನ ‘ರಕ್ಷಾ ಬಂಧನ’ ಪ್ರತಿಭಟನೆ

ಹೈದರಾಬಾದ್‌: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇಲ್ಲಿನ ಮಹಿಳೆಯರು ಅಂತರ್ಜಾಲ ರಾಖಿ ಪ್ರತಿಭಟನೆ ಪ್ರಾರಂಭಿಸಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್‌ ಖಾತೆ @narendramodi, ಪ್ರಧಾನಿ ಕಚೇರಿ ಖಾತೆ @PMOIndia ಮತ್ತು ಫೇಸ್‌ಬುಕ್‌ನ ಪ್ರಧಾನಿ ಅವರ ಪುಟಗಳಲ್ಲಿ ‘ರಾಖಿ ಪ್ರೊಟೆಸ್ಟ್‌’ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ರಾಖಿಯ ಚಿತ್ರಗಳನ್ನು ರವಾನಿಸಲಿದ್ದಾರೆ.ಮಾಜಿ ಸಂಸದ ಕೊನಥಲ ರಾಮಕೃಷ್ಣ ಅವರು ಈ ಮಾದರಿಯ ಪ್ರತಿಭಟನೆ ಆಯೋಜಿಸಿದ್ದು, ಇದಕ್ಕಾಗಿಯೇ ವಿಶೇಷ ಮಾದರಿಯ ರಾಖಿಗಳನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಟ್ವಿಟರ್‌ ಖಾತೆ ಅಥವಾ ಅವರ ಫೇಸ್‌ಬುಕ್‌ ಪುಟದಿಂದ ರಾಖಿಯ ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು, ಅದನ್ನು  ಪ್ರಧಾನಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.2014ರ ಆಂಧ್ರಪ್ರದೇಶ ಪುನರ್‌ರಚನಾ ಕಾಯ್ದೆಯನ್ನು ಅನುಷ್ಠಾನಗೊಳಿಸದ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ‘ರಕ್ಷಾ ಬಂಧನ ಪ್ರತಿಭಟನೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.