ಆಕರ್ಷಕ ಚಿಟ್ಟೆ

7

ಆಕರ್ಷಕ ಚಿಟ್ಟೆ

Published:
Updated:
ಆಕರ್ಷಕ ಚಿಟ್ಟೆ

ತೋವಿನಕೆರೆ: ಗ್ರಾಮದ ಬಸ್ ನಿಲ್ದಾಣದಲ್ಲಿ ಸೋಡಿಯಂ ವೇಪರ್ ಲ್ಯಾಂಪ್‌ನ ಕಂಬಕ್ಕೆ ಕಟ್ಟಿದ್ದ ಬಾಳೆ ಎಲೆ ಮೇಲೆ ಭಾನುವಾರ ಬೆಳಿಗ್ಗೆ ಆಕರ್ಷಕ ಚಿಟ್ಟೆ ಕುಳಿತು ನೂರಾರು ಜನರನ್ನು ತನ್ನತ್ತ ಸೆಳೆದ ಘಟನೆ ನಡೆಯಿತು.ಚಿಟ್ಟೆಯ ಒಂದೊಂದು ರೆಕ್ಕೆ ಸುಮಾರು 5 ಇಂಚಿಗೂ ಹೆಚ್ಚು ಇದ್ದು, ಉದ್ದ 7 ಇಂಚಿಗೂ ಹೆಚ್ಚು ಇದ್ದವು. ಎರಡು ರೆಕ್ಕೆಯ ಮೇಲ್ಭಾಗದ ತುದಿಗಳು ಹಾವಿನ ರೂಪದಲ್ಲಿ ಇರುವುದು ಕಂಡುಬಂದಿತು.ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಜನರು ತಂಡೋಪ ತಂಡವಾಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಚಿಟ್ಟೆ ನೋಡುವ ದೃಶ್ಯ ಸಾಮಾನ್ಯವಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry