ಕಾರವಾರ: ನಗರದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿರುವ `ಸಾಗರ ಮತ್ಸ್ಯಾಲಯ~ ದುರಸ್ತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಮೀನುಗಾರಿಕೆ ಇಲಾಖೆಯ ಅಧಿಕಾರಿ ಗಳ ನಿರ್ಲಕ್ಷ್ಯ, ಅಸಡ್ಡೆಯಿಂದಾಗಿ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದರೆ, ಮತ್ಸ್ಯಾಲಯಕ್ಕೆ ಬರುವ ಪ್ರವಾಸಿಗ ರಿಂದಲೇ ಬೈಸಿಕೊಳ್ಳ ಬೇಕಾದ ಅನಿವಾ ರ್ಯತೆ ಇಲ್ಲಿಯ ಸಿಬ್ಬಂದಿಯದ್ದು.

ಮತ್ಸ್ಯಾಲಯ ದುರಸ್ತಿ ಮಾಡುವು ದಕ್ಕೆ ಸಂಬಂಧಿಸಿದಂತೆ ಅಲ್ಲಿಗೆ ಭೇಟಿ ನೀಡಿದ್ದ ಹಿಂದಿನ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಈಗಿನ ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್ ಕ್ರಮ ಕೈಗೊಳ್ಳಲು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಹಿರಿಯ ಅಧಿ ಕಾರಿಗಳ ಆದೇಶಕ್ಕೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಮತ್ಸ್ಯಾಲಯದ ಸ್ಥಿತಿ ನೋಡಿದರೆ ಅದು ಸ್ಪಷ್ಟವಾಗುತ್ತದೆ.

ಕಳೆದ ತಿಂಗಳು ಇಲ್ಲಿಗೆ ಭೇಟಿ ನೀಡಿದ್ದ ಇಲಾಖೆಯ ಜಂಟಿ ನಿರ್ದೇಶಕ ಮಡ್ಡಿ ಕೇರಿ ಅವರು, ಅಲ್ಲಿರುವ ಅವ್ಯವಸ್ಥೆ ನೋಡಿ ಸರಿಪಡಿಸುವಂತೆ ಸೂಚನೆ ನೀಡಿದ್ದರು. ಪ್ರತಿನಿತ್ಯ ಮತ್ಸ್ಯಾಲಯಕ್ಕೆ ಭೇಟಿ ನೀಡಬೇಕು ಎಂದು ಸಹಾಯಕ ನಿರ್ದೇಶಕರಿಗೆ ಆದೇಶ ನೀಡಿದ್ದರು.

ಆದರೆ, ಸಹಾಯಕ ನಿರ್ದೇಶಕರು ವಾರಕ್ಕೊಂದು ಬಾರಿ ಭೇಟಿ ನೀಡು ವುದು ದೂರದ ಮಾತಾಗಿದೆ. ಮತ್ಸ್ಯಾಲ ಯದ ನಿರ್ವಹಣೆಯ ಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಅಲ್ಲಿರುವ ಅಲಂಕಾರಿಕ ಗಿಡಮರಗಳು ನೀರು ಕಾಣದೆ ಒಣಗಿ ಹೋಗುತ್ತಿದೆ. ಅವು ಗಳಿಗೆ ನೀರು ಹಾಕುವ ವ್ಯವಸ್ಥೆಯೂ ಕೆಟ್ಟು ವರ್ಷಗಳೇ ಕಳೆದಿದೆ. ಅದು ದುರಸ್ತಿ ಮಾಡಲೂ ಸಾಧ್ಯವಾಗಿಲ್ಲ.

ರಾಷ್ಟ್ರೀಯ ಹೆದ್ದಾರಿ-17ಕ್ಕೆ ಅಂಟಿ ಕೊಂಡೇ ಮತ್ಸ್ಯಾಲಯ ಇರುವುದ ರಿಂದ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿ ಗರು ಬಗೆಬಗೆಯ ಮೀನುಗಳನ್ನು ನೋಡಬೇಕು ಎನ್ನುವ ಕುತೂಹಲ ದಿಂದ ಮತ್ಸ್ಯಾಲಯಕ್ಕೆ ಹೋಗುತ್ತಾರೆ. ಆದರೆ, ಬೆರಳೆಣಿಕೆಯಷ್ಟು ಮೀನುಗಳು ಮಾತ್ರ ಅಲ್ಲಿ ನೋಡಲು ಲಭ್ಯ. ಕೆಲವು ತೊಟ್ಟಿಗಳು ಖಾಲಿ ಇರುವುದರಿಂದ ಪ್ರವಾಸಿಗರು ನಿರಾಸೆಯಿಂದ ಮರಳ ಬೇಕಾಗಿದೆ.

ಸಮುದ್ರದ ಅಪರೂಪದ ಜೀವಿ ಗಳನ್ನು ಮತ್ಸ್ಯಾಲಯದಲ್ಲಿಡ ಲಾಗಿದೆ. ಅವುಗಳನ್ನು ಸಂಗ್ರಹಿಸಿಡಲು ಬಳಸುವ ಫಾರ್ಮಲಿನ್ ರಾಸಾಯನಿಕ ತಿಂಗಳಿ ಗೊಮ್ಮೆ ಬದಲಾಯಿಸಬೇಕು. ಹೀಗೆ ಮಾಡದೇ ಇರುವುದರಿಂದ ಗಾಜಿನ ಬಾಟಲ್ಗಳಲ್ಲಿರುವ ನೀರು ಕಂದು ಬಣ್ಣಕ್ಕೆ ತಿರುಗಿದ್ದು ಮೀನುಗಳು ಗುರುತು ಹಿಡಿಯಲು ಸಾಧ್ಯವಾಗು ತ್ತಿಲ್ಲ.
`ಮತ್ಸ್ಯಾಲಯ ನೋಡಲು ಪ್ರವಾಸಿಗರು ಬರುತ್ತಾರೆ. ಅವರು ನೋಡಿ ಖುಷಿಪಡುವಷ್ಟು ಮೀನುಗಳು ಇಲ್ಲಿಲ್ಲ.

ನಿರ್ವಹಣೆಗೆ ಹಣ ಇಲ್ಲದೆ ತೊಟ್ಟಿಗಳಲ್ಲಿ ಪಾಚಿ ಬೆಳೆಯುತ್ತಿದೆ. ಕೆಲವೊಮ್ಮೆ ಪ್ರವಾಸಿಗರು ನಮ್ಮನ್ನೆ ಬೈದು ಹೋಗುತ್ತಾರೆ. ಕೆಲಸ ಮಾಡುವ ಮನಸ್ಸಿದೆ ಆದರೆ ಸರಿ ಯಾದ ಸೌಲಭ್ಯ, ಸಲಕರಣೆಗಳಿಲ್ಲ~ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಮೀನುಗಾರಿಕೆ ಇಲಾಖೆಯ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.