ಬುಧವಾರ, ಏಪ್ರಿಲ್ 14, 2021
31 °C

ಆಗಸ್ಟ್‌ನಲ್ಲಿ ಅಲ್ಪ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದೆ. ರಾಜ್ಯದಲ್ಲಿ ಆಗಬೇಕಾಗಿದ್ದ ಮಾಮೂಲು ಮಳೆಯ ಪ್ರಮಾಣವು 599 ಮಿ.ಮೀ. ಆದರೆ, 431 ಮಿ.ಮೀ. ಮಾತ್ರ  ಮಳೆಯಾಗಿದೆ. ಅಂದರೆ ಪ್ರಸ್ತುತ ತಿಂಗಳಿನಲ್ಲಿ ಅಲ್ಪ ಮಳೆಯಾಗಿದೆ.ಜಿಲ್ಲಾವಾರು ಮಳೆಯಲ್ಲಿ ಕೋಲಾರ, ಉಡುಪಿ, ಬೀದರ್, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾಮೂಲು ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬೆಳಗಾವಿ, ವಿಜಾಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.ಚಾಮರಾಜನಗರ ಜಿಲ್ಲೆಯಲ್ಲಿ  ಈ ಭಾರಿ ಮಾತ್ರ ಅಲ್ಪ ಮಳೆಯಾಗಿದೆ.ತಾಲ್ಲೂಕುವಾರು ಮಳೆಯಲ್ಲಿ ರಾಜ್ಯದ 176 ತಾಲ್ಲೂಕುಗಳಲ್ಲಿ 33 ತಾಲ್ಲೂಕುಗಳಲ್ಲಿ ಮಾಮೂಲು ಮಳೆಯಾದರೆ, 112 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 31 ತಾಲ್ಲೂಕುಗಳಲ್ಲಿ ಅಲ್ಪ ಮಳೆಯಾಗಿದೆ.ಕಳೆದ ಇದೇ ಸಾಲಿನ ಮುಂಗಾರು ಉತ್ತಮವಾಗಿತ್ತು. ಏಕೆಂದರೆ, ಇದೇ ಅವಧಿಯಲ್ಲಿ 35 ತಾಲ್ಲೂಕುಗಳಲ್ಲಿ ಅಧಿಕ, 92 ತಾಲ್ಲೂಕುಗಳಲ್ಲಿ ಮಾಮೂಲು, 45 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 4 ತಾಲ್ಲೂಕುಗಳಲ್ಲಿ ಅಲ್ಪ ಮಳೆಯಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.