ಗ್ರಾಹಕರಿಗೆ ನಿಜವಾದ `ಲಿವ್ ದ ಥಂಡರ್~ ಅನುಭೂತಿ ನೀಡುವ ಸಲುವಾಗಿ ಥಮ್ಸ ಅಪ್ `ಆಜ್ ಕುಚ್ ತೂಫಾನಿ ಕರ್ತೆ ಹೈ~ ಎಂಬ ಹೊಸ ಜಾಹೀರಾತು ಆಂದೋಲನ ಆರಂಭಿಸಿದೆ.

ದೇಶದ ಅತಿದೊಡ್ಡ ಸಾಫ್ಟ್ ಡ್ರಿಂಕ್ ಬ್ರಾಂಡ್ ಎನಿಸಿಕೊಂಡಿರುವ ಥಮ್ಸ ಅಪ್ನ ಜಾಹೀರಾತಿನಲ್ಲಿ ನಟ ಮಹೇಶ್ ಬಾಬು, ಸಾಹಿಲ್ ಶ್ರಾಫ್, ಧವಳ್ ಟಾಕೂರ್ ಮತ್ತು ಬೋಲ್ಡ್ ಅಂಡ್ ಬ್ಯೂಟಿಫುಲ್ ಕಿಂಗ್ಫಿಷರ್ ಕ್ಯಾಲೆಂಡರ್ ಗರ್ಲ್ ಏಂಜೆಲಾ ಜಾನ್ಸನ್ ನಟಿಸಿದ್ದಾರೆ.

ಬ್ಯಾಂಕಾಕ್ನಲ್ಲಿ ಚಿತ್ರೀಕರಣಗೊಂಡಿರುವ ಜಾಹೀರಾತಿನಲ್ಲಿ ಮಹೇಶ್ ಬಾಬು ಮತ್ತು ತಂಡ ಹತ್ತು ಹಲವು ಮೈ ನವಿರೇಳಿಸುವ ಸಾಹಸ ದೃಶ್ಯಗಳನ್ನು ಮಾಡಿದೆ. ಏನಾದರೂ ಸಾಧನೆ ಮಾಡಬೇಕೆಂದರೆ ಅದಕ್ಕೆ ಥಮ್ಸ ಅಪ್ ಪಾನೀಯವೇ ಇಂಧನ ಎಂದು ಭಾವಿಸುವ ಈ ತಂಡ `ತೂಫಾನಿ~ಯಂತಹ ಕಾರ್ಯಗಳನ್ನೇ ಮಾಡುತ್ತದೆ.

ಲಿಯೋ ಬರ್ನೆಟ್ ಅವರ ಪರಿಕಲ್ಪನೆಯಾಗಿರುವ ಈ ಟೀವಿ ಜಾಹೀರಾತನ್ನು ಹಾಲಿವುಡ್ನ ಪ್ರಖ್ಯಾತ ಸಾಹಸ ನಿರ್ದೇಶಕ, `ಗ್ಲಾಡಿಯೇಟರ್~ನಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ನಿಕ್ ಲಿವೆಸೈ ನಿರ್ದೇಶಿಸಿದ್ದಾರೆ. ಸಂಪತ್ ಮತ್ತು ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.