ರಸ್ತೆ ಕೇಂದ್ರಿತ ದೀಪ

ಒಂದು ಕಾಲದಲ್ಲಿ ವಾಹನಗಳಲ್ಲಿ ವಿದ್ಯುದ್ದೀಪ ಬಳಸುವುದೇ ದೊಡ್ಡ ಸಂಗತಿಯಾಗಿತ್ತು. ಸೀಮೆಎಣ್ಣೆ ಬುಡ್ಡಿಗಳನ್ನು ಇಟ್ಟು, ಅದರಲ್ಲಿ ಪ್ರತಿಫಲಕಗಳನ್ನು ಜೋಡಿಸಿ ಹೆಡ್ ಮಾಡುವ ಕಾಲವೂ ಇತ್ತು ಎಂದರೆ ಈಗ ನಂಬುವುದು ತುಸು ಕಷ್ಟವೇ. ಸೂರ್ಯನ ಬೆಳಕನ್ನೇ ನಾಚಿಸುವ ಹಾಲೋಜಿನ್ ದೀಪಗಳು, ಕ್ಸೆನಾನ್ ದೀಪಗಳು ಇಂದು ಹೆಡ್ಲೈಟ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ.

ಆದರೆ ಕೇವಲ ಹೆಡ್ಲೈಟ್ ಇದ್ದರೆ ಸಾಕೆ? ಕೆಲವೊಮ್ಮೆ ರಸ್ತೆಯಲ್ಲಿ ಏರಿಳಿತಗಳಿದ್ದು, ಉಬ್ಬು ತಗ್ಗುಗಳಿದ್ದಾಗ, ರಸ್ತೆ ತೀರ ನೇರವಾಗಿ ವಿಶಾಲವಾಗಿದ್ದಾಗ ವಾಹನದ ದೀಪ ಸರಿಯಾಗಿ ರಸ್ತೆಗೆ ಬೀಳುವುದೇ ಇಲ್ಲ. ಆಗ ಬೆಳಕಿನ ಕೋನವನ್ನು ನಿಯಂತ್ರಿಸಬೇಕಾಗುತ್ತದೆ. ಅದಕ್ಕಾಗೇ ಈಗ ಹೆಡ್ಲೈಟ್ ಲೆವಲಿಂಗ್ ಸಿಸ್ಟಂನ್ನು ಅಭಿವದ್ಧಿಪಡಿಸಲಾಗಿದೆ.

ಹೆಡ್ಲೈಟ್ ಲೆವಲಿಂಗ್ ಸಿಸ್ಟಂ

ಇದು ಹೆಡ್ಲೈಟ್ನ ಅತ್ಯಂತ ಸುಧಾರಿತ ವ್ಯವಸ್ಥೆ. ಸಾಮಾನ್ಯವಾಗಿ ವಾಹನಗಳಲ್ಲಿ ಹೆಡ್ಲೈಟ್ನಲ್ಲಿ ಬೆಳಕನ್ನು ಕೇಂದ್ರೀಕರಿಸುವ ಪ್ರಬಲವಾದ ರಿಫ್ಲೆಕ್ಟರನ್ನು (ಪ್ರತಿಫಲಕ) ಅಳವಡಿಸಲಾಗಿರುತ್ತದೆ. ಮಧ್ಯದಲ್ಲಿರುವ ಬಲ್ಬ್ನಲ್ಲಿ ಉತ್ಪತ್ತಿಯಾಗುವ ಬೆಳಕನ್ನು ಕೇಂದ್ರೀಕರಿಸಿ, ಅದನ್ನು ರಸ್ತೆಗೆ ಬೀಳುವಂತೆ ಮಾಡುವುದಷ್ಟೇ ಇದರ ಕೆಲಸ. ಇದು ವಾಹನದಲ್ಲಿ ಒಂದೆಡೆ ಅಚಲವಾಗಿ ಜೋಡಿಸಲ್ಪಟ್ಟಿರುತ್ತದೆ.

ಬಲ್ಬ್ನ ಒಳಗೆ ಎರಡು ಫಿಲಮೆಂಟ್ (ಸುರುಳಿ ತಂತಿ) ಅಳವಡಿಸಿರುವ ಮೂಲಕ, ಹೈ ಬೀಂ, ಲೋ ಬೀಂ ಬೆಳಕನ್ನು ಹೊಮ್ಮಿಸಬಹುದು. ಆದರೆ ಹೆಡ್ಲೈಟ್ ಲೆವೆಲರ್ ಒಂದು ವಿಶಿಷ್ಟವಾದ ವ್ಯವಸ್ಥೆ. ಇಲ್ಲಿ ಅಚಲವಾದ ರಿಫ್ಲೆಕ್ಟರ್ನ ಬದಲಿಗೆ ಚಲಿಸುವ ರಿಫ್ಲೆಕ್ಟರ್ ಜೋಡಿಸಲ್ಪಟ್ಟಿರುತ್ತದೆ. ಅಂದರೆ ವಾಹನ ಚಾಲಕನ ಸಂಜ್ಞೆಗಳಿಗೆ ಅನುಗುಣವಾಗಿ ರಿಫ್ಲೆಕ್ಟರ್ ಮೇಲೆ-ಕೆಳಗೆ ಚಲಿಸುತ್ತದೆ. ಆಗ ಬೆಳಕಿನ ಕೋನ ಬದಲಾಗಿ ದೀಪ ಅಗತ್ಯಕ್ಕೆ ತಕ್ಕಂತೆ ರಸ್ತೆಯ ಮೇಲೆ ಬೀಳುತ್ತದೆ.

ಸ್ಟಾರ್ಟರ್ ಮೋಟಾರ್

ಬೈಕ್, ಕಾರ್ಗಳಲ್ಲಿ ಸೆಲ್ಫ್ ಸ್ಟಾರ್ಟ್ ಇದೆ, ಕೀ ಅಥವಾ ಬಟನ್ ಬಳಸಿ ಸ್ಟಾರ್ಟ್ ಮಾಡಿಬಿಡಬಹುದು ಎಂದಷ್ಟೇ ತಿಳಿದರೆ ಸಾಲದು. ವಾಸ್ತವಾಗಿ ವಾಹನದ ಎಂಜಿನ್ ಅನ್ನು ಸ್ಟಾರ್ಟ್ ಮಾಡಲು ಕೀ ಅಥವಾ ಬಟನ್ ಸಂಜ್ಞೆ ಮಾತ್ರ ನೀಡುತ್ತವೆ. ಸ್ಟಾರ್ಟ್ ಮಾಡುವ ಕೆಲಸ ಸ್ಟಾರ್ಟರ್ನದು. ಹಿಂದೆ ಕಿಕ್ ಅಥವಾ ಪೆಡಲಿಂಗ್ ವ್ಯವಸ್ಥೆ ವಾಹನಗಳಲ್ಲಿತ್ತು. ಈಗಲೂ ಅನೇಕ ಬೈಕ್ಗಳಲ್ಲಿ ಕಿಕ್ ಸ್ಟಾರ್ಟ್ ಸೌಲಭ್ಯವೇ ಇದೆ.

ಕಿಕ್ ಹೊಡೆದಾಗ ಎಂಜಿನ್ನ ಒಳಗಿನ ಹಲ್ಲಿನ ಚಕ್ರ ತಿರುಗಿ, ಅದು, ಎಂಜಿನ್ ಚಾಲನೆಗೊಳಿಸುತ್ತದೆ. ಇದೇ ಕೆಲಸವನ್ನು ಎಂಜಿನ್ ಮೋಟಾರ್ ಸ್ಟಾರ್ಟರ್ ಮಾಡುತ್ತದೆ. ಇದೊಂದು ಪ್ರಬಲ ಶಕ್ತಿಯ ಮೋಟಾರ್. ವಾಹನದ ಬ್ಯಾಟರಿಯಿಂದ ಶಕ್ತಿ ಪಡೆಯುವ ಮೋಟಾರ್, ತನ್ನಲ್ಲಿರುವ ಪುಲ್ಲಿಯ ಸಹಾಯದಿಂದ, ಎಂಜಿನ್ ಒಳಗಿನ ಹಲ್ಲಿನ ಚಕ್ರವನ್ನು ತಿರುಗಿಸುತ್ತದೆ. ಆಗ ಎಂಜಿನ್ ಸ್ಟಾರ್ಟ್ ಆಗುತ್ತದೆ. ಆದರೆ ಇದಕ್ಕೆ ಬ್ಯಾಟರಿ ಚನ್ನಾಗಿರಬೇಕು. ಸ್ವಲ್ಪವೇ ಚಾರ್ಜ್ ದುರ್ಬಲಗೊಂಡರೂ ವಾಹನ ಸ್ಟಾರ್ಟ್ ಆಗಲು ಸಾಧ್ಯವಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.