ಮಂಗಳವಾರ, ಮೇ 24, 2022
30 °C

ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಲು ಶಿಕ್ಷಕರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಲು ಶಿಕ್ಷಕರಿಗೆ ಸಲಹೆ

ಕಲಘಟಗಿ: ದೇಶದ ನಾಳಿನ ನಾಗರಿಕ ಸಮುದಾಯವನ್ನು ನಿರ್ಮಿಸುವ ಜವಾಬ್ದಾರಿಯುತ ಸ್ಥಾನವನ್ನು ಪಡೆದಿರುವ ಶಿಕ್ಷಕರಿಗೆ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಚರಿತ್ರೆಗಳು ಮಾದರಿಯಾಗಬೇಕಿದೆ ಎಂದು ರಾಜ್ಯ ಇಂಧನ ನಿಗಮದ ಅಧ್ಯಕ್ಷ ಸಿ.ಎಂ.ನಿಂಬಣ್ಣವರ ನುಡಿದರು.ಪಟ್ಟಣದ ಹನ್ನೆರಡುಮಠದ ಆವರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಏರ್ಪಡಿಸಿದ ಶಿಕ್ಷಕ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿ ಕೇವಲ ಒಂದು ಸಮುದಾಯದ ನಾಯಕರಾಗದೆ ವಿಸ್ತೃತವಾದ ವ್ಯಕ್ತಿತ್ವವನ್ನು ರೂಢಿಸಿಕೊಂಡಂತೆ, ಶಿಕ್ಷಕರು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಗುಣಯುಕ್ತವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಶ್ರಮಿಸಬೇಕಾದ ಅಗತ್ಯವಿದೆ ಎಂದರು.ನೇತಾರರ ಜೀವನವನ್ನು ಆಧರಿಸಿದ ಘಟನೆಗಳನ್ನು ಉದಾಹರಿಸಿದರು. ಕೆಲವು ತಾಂತ್ರಿಕ ಕಾರಣಗಳಿಂದ ತಾಲ್ಲೂಕು ಶಿಕ್ಷಕರ ದಿನಾಚರಣೆ ನಿಗದಿತ ದಿನದಂದು ನಡೆಯದಿದ್ದರೂ, ಶಿಕ್ಷಕರ ಸಂಘವು ಆಸಕ್ತಿವಹಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.ಉಪನ್ಯಾಸಕ ಶಿವಾನಂದ ಅದರಗುಂಚಿ ಉಪನ್ಯಾಸ ನೀಡಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆನಂದ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಲ್.ಹಂಚಾಟೆ, ಹಾಜರಿದ್ದರು.ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಬಿ.ಕಿಚಡಿ ವಹಿಸಿದ್ದರು.ತಾ.ಪಂ.ಅಧ್ಯಕ್ಷ ಚಿನ್ನಪ್ಪ ಕೊಪ್ಪದಗಾಣಿಗೇರ, ಜಿ.ಪಂ. ಸದಸ್ಯ ವೈ.ಬಿ.ದಾಸನಕೊಪ್ಪ, ಕಸ್ತೂರಿ ಧಾರವಾಡ, ತಾ.ಪಂ.ಸದಸ್ಯರಾದ ಸಾವಕ್ಕ ಪಾಟೀಲ, ಪಾರ್ವತಿ ಲಕ್ಕಪ್ಪನವರ, ಮಲ್ಲೆೀಶಪ್ಪ ಜಾವೂರ, ಎಲ್ಲಾರಿ ಶಿಂಧೆ,ಬಸವರಾಜ ಹಿರೇಮಠ ಹಾಜರಿದ್ದರು.ಹನ್ನೆರಡುಮಠದ ರೇವಣಸಿದ್ಧಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮಾಳಗಿ, ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಿ.ಎಸ್. ಕುಲಕರ್ಣಿ, ಎಂ.ಆರ್. ತೋಟಗಂಟಿ, ತಾಲೂಕು ನೌಕರ ಸಂಘದ ಅಧ್ಯಕ್ಷ ಎಂ.ಎಚ್. ಗೌರಣ್ಣವರ, ತಾಲ್ಲೂಕು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯ ಸಂಘದ ಆರ್.ಎಸ್.ದೇಶಪಾಂಡೆ,  ಶಿಕ್ಷಕ ಸಂಘದ ಕಾರ್ಯದರ್ಶಿ ಐ.ವಿ. ಜವಳಿ,  ಪದಾಧಿಕಾರಿಗಳು ಮತ್ತು  ಆರ್.ಎಸ್.ಜಂಬಗಿ, ಯು.ಎಸ್.ಬಿದರಿ, ಸಿ.ಎಸ್.ಗ್ಯಾನಪ್ಪನವರ, ಎಸ್.ಎ.ಚಿಕ್ಕನರ್ತಿ, ಪಿ.ಎನ್.ಹರ್ತಿ ಅಲ್ಲದೇ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ವಂದದವರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.