ಮಂಗಳವಾರ, ಜನವರಿ 28, 2020
18 °C

ಆದಾಯ ಮಿತಿ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಹೆಚ್ಚಿನವರು ಒಬಿಸಿ ಪ್ರವರ್ಗದ ವ್ಯಾಪ್ತಿಗೆ ಬರುತ್ತಾರೆ. ಆದರೆ ರಾಜ್ಯ ಸರ್ಕಾರ  ಮತ್ತು ಈಗಿನ ಹಿಂದುಳಿದ ವರ್ಗಗಳ ಆಯೋಗ ಈ ವರ್ಗಗಳ ಜನರನ್ನು ಅಲಕ್ಷಿಸಿವೆ. ಇದರಿಂದ ಒಬಿಸಿ (ಪ್ರವರ್ಗ 2 ಎ, 2 ಬಿ, 3 ಎ, 3 ಬಿ) ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ 2009ರಲ್ಲಿ ಒಬಿಸಿ ವರ್ಗಗಳ ಜನರ ಆದಾಯ ಮಿತಿಯನ್ನು 4.5 ಲಕ್ಷ ರೂಗಳಿಗೆ ಏರಿಸಿದೆ. ಕೇರಳ,ಆಂಧ್ರಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳು ಈ ವರ್ಗಗಳ ಆದಾಯದ ಮಿತಿಯನ್ನು ಹೆಚ್ಚಿಸಿವೆ. ಆದರೆ ಕರ್ನಾಟಕದಲ್ಲಿ ಇನ್ನೂ ಹೆಚ್ಚಳ ಆಗಿಲ್ಲ. ಇದರಿಂದಾಗಿ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. 1995ರಲ್ಲಿ ಆದಾಯದ ಮಿತಿಯನ್ನು 2 ಲಕ್ಷ ರೂಗಳಿಗೆ ನಿಗದಿ ಮಾಡಲಾಗಿತ್ತು. 1995ರಲ್ಲಿ `ಬಿ~ ದರ್ಜೆಯ ಅಧಿಕಾರಿಗಳ ವಾರ್ಷಿಕ ವೇತನ 66 ಸಾವಿರ ರೂ ದಾಟುತ್ತಿರಲಿಲ್ಲ. ಆದರೆ ಈಗ `ಸಿ~ ದರ್ಜೆ ನೌಕರರ ವಾರ್ಷಿಕ ವೇತನ 2 ಲಕ್ಷ ರೂ. ದಾಟುತ್ತಿದೆ. ಇದರಿಂದಾಗಿ ಈ ವರ್ಗಗಳ ಮಕ್ಕಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದ ಮಿಸಲಾತಿ ಸಿಗುತ್ತಿಲ್ಲ. ಈ ಸೌಲಭ್ಯಗಳು ಸಿಗಬೇಕಾದರೆ ಅವರ ಆದಾಯದ ಮಿತಿ ಹೆಚ್ಚಿಸುವ ಅಗತ್ಯವಿದೆ.ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಆದಾಯ ಮಿತಿ ಹೆಚ್ಚಿಸುವಂತೆ ಶಿಫಾರಸು ಮಾಡಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮಾದರಿಯಲ್ಲಿ ವೇತನ ಮಿತಿಯನ್ನು 4.5 ಲಕ್ಷ ರೂಗಳಿಗೆ ಏರಿಕೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಪ್ರತಿಕ್ರಿಯಿಸಿ (+)