ಶುಕ್ರವಾರ, ಮಾರ್ಚ್ 5, 2021
23 °C

ಆಭರಣ ಲೋಕದಲ್ಲಿ ವಿದ್ಯಾ ಹೊಳಪು

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಆಭರಣ ಲೋಕದಲ್ಲಿ ವಿದ್ಯಾ ಹೊಳಪು

ಆನ್‌ಲೈನ್‌ನಲ್ಲಿ ಆಭರಣ ಅಂದ್ರೆ ಎಲ್ಲರೂ ಹುಬ್ಬೇರಿಸುತ್ತಾರೆ. ಕುಟುಂಬದ ಆಚಾರಿ ಬಳಿಯೋ, ಬ್ರ್ಯಾಂಡ್ ಮಳಿಗೆಗಳಿಗೋ ಹೋಗಿ ಕೊಳ್ಳುವುದು ಭಾರತೀಯ ಜೀವನಶೈಲಿ. ಆದರೆ ಒಂದು ಕ್ಲಿಕ್- ಆಯ್ಕೆ ಮಾಡಿ, ಒಂದಷ್ಟು ಅಂಕಿಗಳು- ಹಣ ನೀಡಿ. ಮನೆ ಬಾಗಿಲಿಗೆ ಆಭರಣ ಬರುವವರೆಗೂ ಕಾಯುತ್ತಿರಿ...ಇಂಥ ವ್ಯಾಪಾರಕ್ಕೆ ಭಾರತೀಯ ಮನಃಸ್ಥಿತಿ ಸಿದ್ಧವಾಗಿದೆಯೇ ಎಂಬುದೇ ಪ್ರಶ್ನೆಯಾಗಿತ್ತು. ಆದರೆ ಈಗ ಅಂಥ ಆತಂಕಗಳೇ ಇಲ್ಲ. ಹೀಗೆ ವ್ಯಾಪಾರದ ಒಳ-ಹೊರಗನ್ನು ಬಿಡಿಸಿಡುತ್ತಿದ್ದುದು ವಿದ್ಯಾ ನಟರಾಜ್.ಆನ್‌ಲೈನ್ ಆಭರಣ ವಹಿವಾಟಿನಲ್ಲಿ ಹೆಸರು ಮಾಡುತ್ತಿರುವ ಬ್ಲುಸ್ಟೋನ್. ಕಾಮ್‌ನ ಸಹ ಸಂಸ್ಥಾಪಕಿ. ವಿದ್ಯಾ ಫ್ರಾನ್ಸ್‌ನ ಇನ್ಸೀಡ್ ಸಂಸ್ಥೆಯಿಂದ ಎಂಬಿಎ ಪದವಿ ಪಡೆದವರು. ಇಂಗ್ಲೆಂಡ್‌ನ ವಾರ್ವಿಕ್ ವಿಶ್ವವಿದ್ಯಾಲಯದಿಂದ ಗಣಿತ ಪದವಿ ಪಡೆದವರು.ಜೆಮಾಲೊಜಿಕಲ್ ಇನ್ಸ್‌ಟಿಟ್ಯೂಟ್ ಆಫ್ ಅಮೆರಿಕಾದಿಂದ ಮಾನ್ಯತೆ ಪಡೆದಿರುವ ಆಭರಣ ತಜ್ಞೆ. ಬೆಂಗಳೂರಿನ ಕೃಷ್ಣಯ್ಯ ಚೆಟ್ಟಿ ಆಭರಣ ಮಳಿಗೆಯ ಕುಟುಂಬದ ಐದನೇ ತಲೆಮಾರಿನ ಗಣೇಶ್ ನಾರಾಯಣ್ ಅವರ ಪತ್ನಿ.ಕೊಲಂಬೊ, ಲಂಡನ್, ಪ್ಯಾರಿಸ್, ಸಿಂಗಾಪುರ, ಚೆನ್ನೈಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ವಿದ್ಯಾಗೆ ಪ್ರವಾಸವೆಂದರೆ ಅತಿ ಪ್ರೀತಿಯಂತೆ.ಲ್ಯಾಂಡ್‌ಮಾರ್ಕನ್ನು ಟಾಟಾ ಸಂಸ್ಥೆಗೆ ಮಾರುವ ಮುನ್ನ ಆ ಸಂಸ್ಥೆಯ ಜವಾಬ್ದಾರಿಯನ್ನೂ ಹಂಚಿಕೊಂಡಿದ್ದರು. ಟಾಟಾಗೆ ಲ್ಯಾಂಡ್‌ಮಾರ್ಕನ್ನು ಹಸ್ತಾಂತರಿಸಿದ ನಂತರ ಏನಾದರೂ ಮಾಡುವ ತುಡಿತವಿತ್ತು. ಆಭರಣಗಳ ಉದ್ಯಮ ಈಗಲೂ ಸಾಂಪ್ರದಾಯಿಕ ಮಳಿಗೆಗಳ ಪದ್ಧತಿಯಲ್ಲಿಯೇ ಇರುವುದು ಇವರ ಆಸಕ್ತಿಯನ್ನು ಕೆರಳಿಸಿತ್ತು.ಮದುವೆಯ ನಂತರ ಆಭರಣಗಳ ವ್ಯಾಪಾರದಲ್ಲಿ ಆಸಕ್ತಿ ಬೆಳೆಯಿತು. ಟ್ರೆಂಡಿ, ಸಮಕಾಲೀನ ಆಭರಣಗಳು ಹಾಗೂ ಅಮೂಲ್ಯವಾದ ಹರಳು-ಲೋಹದ ಬಳಕೆ ಇರಲಿಲ್ಲ. ಸಮಕಾಲೀನ ವಿನ್ಯಾಸವೆಂದರೆ ಸಿದ್ಧ ಆಭರಣಗಳು ಎಂದೇ ಅರ್ಥವಾಗಿತ್ತು ಅಥವಾ ಕೃತಕ ಆಭರಣಗಳೇ ಆಗಬೇಕು ಎಂಬ ಮನೋಭಾವವಿತ್ತು.ಈ ಗ್ಯಾಪ್ ಬ್ಲುಸ್ಟೋನ್ ಆರಂಭಿಸಲು ಕಾರಣವಾಯಿತು ಎನ್ನುತ್ತಾರೆ ವಿದ್ಯಾ. ಇನ್ನೊಂದು ಕಾರಣವೆಂದರೆ ಆನ್‌ಲೈನ್ ವ್ಯಾಪಾರದ ಟ್ರೆಂಡ್ ಗಮನಿಸಿದಾಗ ಲೈಫ್‌ಸ್ಟೈಲ್ ಆ್ಯಕ್ಸಸರಿ ಹಾಗೂ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಕಂಡು ಬಂತು. ಆಗಲೇ ಮಾರುಕಟ್ಟೆಯ ನಾಡಿ ಮಿಡಿತ ಅರ್ಥವಾಗಿದ್ದು.2012ರ ಜನವರಿಯಲ್ಲಿ ಆರಂಭವಾದ ಈ ವ್ಯಾಪಾರದ ಮೂಲಕ ಈಗಾಗಲೇ ದೇಶದ ಉದ್ದಗಲಕ್ಕೂ ಗ್ರಾಹಕರನ್ನು ಗಳಿಸಿಕೊಂಡಿದೆ. ಆನ್‌ಲೈನ್ ವ್ಯಾಪಾರದ ಬಗ್ಗೆ ಭಾರತೀಯರಿಗೆ ಒಂದು ಆತಂಕ ಇದ್ದೇ ಇದೆ. ಈ ಆತಂಕವನ್ನು ಭರವಸೆಯಾಗಿ ಬದಲಿಸಲು ಆಭರಣ ಪಡೆದ ದಿನಗಳಿಂದ 30 ದಿನಗಳವರೆಗೆ ಹಣ ವಾಪಸಾತಿಯ ಅನುಕೂಲ ಮಾಡಿಕೊಟ್ಟಿದೆ.

 

ವಿನ್ಯಾಸದಲ್ಲಿ ಬದಲಾವಣೆ ಬೇಕಿದ್ದಲ್ಲಿ, ಅಳತೆ ವ್ಯತ್ಯಾಸವಾಗಿದ್ದಲ್ಲಿ, ಅಥವಾ ಹರಳುಗಳ ಬಣ್ಣ ಬದಲಿಸಬೇಕಿದ್ದಲ್ಲಿ ಏನೂ ಕಾರಣಗಳಿರದೇ ಇಷ್ಟವೇ ಆಗದಿದ್ದಲ್ಲಿಯೂ ಆಭರಣವನ್ನು ವಾಪಸು ಮಾಡಬಹುದಾಗಿದೆ.ಯಾವುದೇ ಕಡಿತ ಮಾಡದೇ ಹಣವನ್ನು ಮರಳಿಸಲಾಗುತ್ತದೆ. ಆನ್‌ಲೈನ್ ವ್ಯಾಪಾರದ ಇನ್ನೊಂದು ಲಾಭವೆಂದರೆ ಲೈಫ್‌ಟೈಮ್ ಎಕ್ಸ್‌ಚೇಂಜ್ ಕೊಡುಗೆಯನ್ನೂ ನೀಡಿದ್ದಾರೆ. ಒಂದು ಆಭರಣವನ್ನು ವಾಪಸಾತಿ ಅಥವಾ ಬದಲಿಸಬೇಕೆಂದಿದ್ದಲ್ಲಿ ಅದರ ಮೂಲ ಬೆಲೆಯ ಶೇ 80ರಷ್ಟು ಹಣ ಪಡೆಯಬಹುದಾಗಿದೆ.ಇಂಥ ಅನುಕೂಲಗಳಿಂದಾಗಿ ಇದು ಗ್ರಾಹಕಸ್ನೇಹಿ ವ್ಯಾಪಾರವಾಗಿದೆ. ಉಂಗುರ, ಬಳೆಯಂಥ ಆಭರಣಗಳಿಗೆ ಅಳತೆಯ ಬಗ್ಗೆ ಸಂಶಯವಿದ್ದರೆ ಅಳತೆಯನ್ನೂ ಮನೆಯವರೆಗೆ ಕಳುಹಿಸಲಾಗುತ್ತದೆ.ಆಭರಣಗಳನ್ನು ವಾಪಸು ಮಾಡುವ ಅಥವಾ ಬದಲಿಸುವ ವ್ಯವಸ್ಥೆಯೂ ಸರಳ ಹಾಗೂ ನಂಬಿಕೆಗೆ ಅರ್ಹವಾಗಿರುವಂತೆ ಯೋಜಿಸಲಾಗಿದೆ. ಸಂಸ್ಥೆಯ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿದರೆ, ವಿಶೇಷ ಪ್ಯಾಕ್ ಇರುವ ಕವರ್ ಅನ್ನು ಸಿದ್ಧ ಲಕೋಟೆಯಲ್ಲಿರಿಸಿ ಮನೆಗೆ ಕೊರಿಯರ್ ಮಾಡಲಾಗುತ್ತದೆ. ನಂತರ ಅದನ್ನು ಸಂಸ್ಥೆಯ ಕಡೆಯವರೇ ಮರು ಸಂಗ್ರಹಿಸುತ್ತಾರೆ. ಹೀಗಾಗಿ, ಮೋಸ, ವಂಚನೆಯ ಅವಕಾಶಗಳೇ ಇರುವುದಿಲ್ಲ ಎನ್ನುವುದು ವಿದ್ಯಾ ಭರವಸೆ.10 ಸಾವಿರ ರೂಪಾಯಿ ಮೀರಿದ ಆಭರಣಗಳಿಗೆ ಕಂತಿನ ಸೌಲಭ್ಯವನ್ನು ನೀಡಲಾಗಿದೆ. ಮೂರು ಅಥವಾ 6 ಕಂತುಗಳಲ್ಲಿ ಹಣ ಪಾವತಿಸಬಹುದಾಗಿದೆ. ಆದರೆ ಇದು ಕ್ರೆಡಿಟ್ ಕಾರ್ಡ್ ಸೌಲಭ್ಯ ಇರುವವರಿಗೆ ಮಾತ್ರ ಸೀಮಿತವಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಡೆಬಿಟ್ ಕಾರ್ಡ್‌ಗಳಿಗೂ ವಿಸ್ತರಿಸುವ ಯೋಚನೆ ಇದೆ.

ಉಳಿತಾಯ ಯೋಜನೆಗಳಿಗೂ ಸಾಕಷ್ಟು ಬೇಡಿಕೆ ಇದೆ. ಆದರೆ ಅದಿನ್ನೂ ಯೋಜನೆಯ ಹಂತದಲ್ಲಿದೆ ಎನ್ನುತ್ತಾರೆ ವಿದ್ಯಾ.ಹಳದಿ ಚಿನ್ನ, ಶ್ವೇತ ಚಿನ್ನ ಹಾಗೂ ತಿಳಿ ಗುಲಾಬಿ ಚಿನ್ನಗಳಲ್ಲಿ ಬ್ಲೂಸ್ಟೋನ್ ಆಭರಣಗಳು ಲಭ್ಯ ಇವೆ. ಹರಳುಗಳ ಆಯ್ಕೆಗೆ ಮುಕ್ತ ಅವಕಾಶವಿದೆ. ಸ್ವಂತ ವಿನ್ಯಾಸಗಾರರ ತಂಡವಿರುವುದರಿಂದ ವಿನ್ಯಾಸಗಳಲ್ಲಿ ಹೊಸತನ ಹಾಗೂ ತಾಜಾತನ ಕಾಯ್ದುಕೊಳ್ಳಲು ಸಾಧ್ಯವಾಗಿದೆ.ಮೂಲತಃ ಉದ್ಯೋಗಸ್ಥ ಮಹಿಳೆಯರು ಅಥವಾ ಕಾರ್ಪೋರೆಟ್ ವ್ಯವಸ್ಥೆಯಲ್ಲಿರುವವರಿಗೆ `ಸಮಯವೇ ಹಣ~ ಎಂಬಂತೆ ಆಗಿದೆ. ಹಾಗಾಗಿ ಅವರು ಎಲ್ಲಿಯೂ ಹೋಗದೆ `ಕ್ಲಿಕ್~ ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ಇನ್ನೊಂದು ಮುಖ್ಯ ಕಾರಣವೆಂದರೆ ಇಂದು ಮಹಿಳೆಯರಿಗೆ ಕೊಳ್ಳುವ ಸಾಮರ್ಥ್ಯ ಹಾಗೂ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುವುದರಿಂದ ಆನ್‌ಲೈನ್ ವ್ಯಾಪಾರ ಭರಾಟೆಯಲ್ಲಿದೆ.ಬ್ಲೂಸ್ಟೋನ್ ಕೇವಲ ವ್ಯಾಪಾರವಲ್ಲ. ಅದೊಂದು ಬ್ರ್ಯಾಂಡ್. ಹಾಗಾಗಿ ಸ್ಪರ್ಧಿಗಳಿಲ್ಲ. ಬ್ಲೂಸ್ಟೋನ್‌ಗೆ ವಿಶೇಷವಾದ ವಿಶಿಷ್ಟ ಹಾಗೂ ವಿಭಿನ್ನವಾದ ವಿನ್ಯಾಸಗಳಿವೆ. ಇದು ನಮ್ಮ ಬಲ ಎನ್ನುತ್ತಾರೆ ವಿದ್ಯಾ.ಹೆಚ್ಚಿನ ಮಾಹಿತಿಗೆ ಲಾಗಿನ್ ಆಗಿ: www.bluestone.com  ಅಥವಾ ಟೋಲ್ ಫ್ರಿ: 1800-103-2200ಗೆ ಕರೆ ಮಾಡಬಹುದು. ವಾರದ ಏಳೂ ದಿನಗಳು ಬೆಳಿಗ್ಗೆ 10ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಆಭರಣ ಪರಿಣತರ ತಂಡವು ಉತ್ತರಿಸಲು ಸಿದ್ಧವಾಗಿದೆ ಇದು ವಿದ್ಯಾ ವಿಶ್ವಾಸ. ಇನ್ನೇಕೆ ತಡ, ವಜ್ರ ದೂರವಿಲ್ಲ. ಒಂದು ಕ್ಲಿಕ್ ಅಷ್ಟೇನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.