ಭಾನುವಾರ, ಏಪ್ರಿಲ್ 11, 2021
32 °C

ಆಯುರ್ವೇದ ಜ್ಞಾನ ಪ್ರಸಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಭಾರತದಲ್ಲಿ ಹೇರಳವಾಗಿರುವ ಆಯುರ್ವೇದ ಔಷಧಿ ಪದ್ಧತಿಯಲ್ಲಿನ ಪಾರಂಪರಿಕ ಜ್ಞಾನವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು `ಆಯುರ್ವೇದ ಮತ್ತು ಇಂಟಿ ಗ್ರೇಟಿವ್ ಮೆಡಿಸಿನ್ ಸಂಸ್ಥೆ~ಯ ಉಪಾಧ್ಯಕ್ಷ ಅನಂತ್ ದರ್ಶನ್ ಶಂಕರ್ ಹೇಳಿದರು.ಮಾವಳ್ಳಿಪುರದಲ್ಲಿರುವ ಸ್ಥಳೀಯ ಪಾರಂಪರಿಕ ಪುನರುತ್ಥಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ತಮ್ಮ ಸಂಸ್ಥೆಯ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯ ಮತ್ತು ಆಯುರ್ವೇದದಲ್ಲಿರುವ ಜ್ಞಾನ ಈ ಎರಡೂ ಔಷಧಿ ಕ್ರಮಗಳು ಗಿಡಮೂಲಿಕೆಗಳದ್ದೆ ಆಗಿದ್ದು, ಸಮುದಾಯದ ಜನರು ತಲೆ ತಲೆಮಾರುಗಳಿಂದ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಈ ಔಷಧಿ ಪದ್ಧತಿ ಜಾರಿ ಯಲ್ಲಿದ್ದರೆ, ಆಯುರ್ವೇದ ವೈದ್ಯರು ಪಠ್ಯಪುಸ್ತಕಗಳ ನೆರವಿನಿಂದ ಜ್ಞಾನ ಸಂಪಾದಿಸಿದ್ದಾರೆ. ಆದರೆ ಎರಡೂ ಜ್ಞಾನವೂ ಆಯುರ್ವೇದದ್ದೆ ಆಗಿದೆ ಎಂದು ಸ್ಪಷ್ಟಪಡಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಡಾ.ವಿಜಯಲಕ್ಷ್ಮಿ ಅವರು, ಮರೆಗುಳಿತನದ ಕಾಯಿಲೆ ನಿವಾರಣೆಯಲ್ಲಿ ಆಯುರ್ವೇದದ ಅಶ್ವಗಂಧ ಔಷಧಿ ಗಿಡದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ತಾಂತ್ರಿಕ ಕ್ಷೇತ್ರಗಳಲ್ಲಿದ್ದುಕೊಂಡು ಆಯುರ್ವೇದದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವ 8 ಮಂದಿಯನ್ನು ಸನ್ಮಾನಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 76 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

 

`ರಕ್ತದಾನ ಮಾಡುವುದರಿಂದ ಸಮಾಧಾನ~

ಕೆಂಗೇರಿ: `ಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಿದರೆ ಮತ್ತೆ ಹೊಸ ರಕ್ತ ಉತ್ಪತ್ತಿಯಾಗಿ ವ್ಯಕ್ತಿ ಇನ್ನಷ್ಟು ಆರೋಗ್ಯವಂತನಾಗಿರಲು ಸಹಕಾರಿಯಾಗುತ್ತದೆ. ನೀವು ದಾನ ಮಾಡಿದ ಒಂದು ಹನಿ ರಕ್ತವು ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ~ ಎಂದು ಶಾಸಕ ಎಂ.ಕೃಷ್ಣಪ್ಪ ಸಲಹೆ ಮಾಡಿದರು.ಹೊರ ವರ್ತುಲ ರಸ್ತೆಯ ಜ್ಞಾನ ಭಾರತಿ ಸರ್ಕಲ್‌ನ ಎಸ್.ವಿ.ಕೆ.ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ಕಷ್ಟದಲ್ಲಿರುವವರನ್ನು ನೋಡಿ ಮರುಕ ಪಡುವುದಕ್ಕಿಂತ ಸಹಾಯ ಮಾಡುವ ಗುಣ ಬೆಳೆಸಿಕೊಂಡರೆ ಮಾತ್ರ ಇನ್ನೊಬ್ಬರು ನಿಮ್ಮ ಕಷ್ಟಕ್ಕೆ ನಿಮಗರಿವಿಲ್ಲದಂತೆ ನೆರವಾಗುತ್ತಾರೆ ಎಂದು ಅವರು ಹೇಳಿದರು.ರಾಜರಾಜೇಶ್ವರಿ ನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಬೆಂಗಳೂರು ಗ್ರಾಮಂತರ ಲೋಕಸಭಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಎ.ಎನ್.ನಟರಾಜ್‌ಗೌಡ, ಮುಖಂಡರಾದ ಆರ್.ಕಶ್ಯಪ್, ಸಿದ್ದಾರ್ಥ್, ಸುನಿಲ್ ಇತರರು ಹಾಜರಿದ್ದರು.ಸಂಸ್ಥೆಯ ನಿರ್ದೇಶಕಿ ಡಾ.ಪದ್ಮಾ ವೆಂಕಟ್, ಜಂಟಿ ನಿರ್ದೇಶಕ ಡಾ.ಕೆ.ಹರಿದಾ ಸನ್, ಪಾರಂಪರಿಕ ಆಯುರ್ವೇದ ವೈದ್ಯರಾದ ಎಂ. ಗೋಪಾಲಕೃಷ್ಣ ಇತರರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.