ಬುಧವಾರ, ಮೇ 12, 2021
24 °C

ಆರುಷಿ: ಬಂಧನ ವಾರೆಂಟ್ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಜಿಯಾಬಾದ್ (ಐಎಎನ್‌ಎಸ್): ಆರುಷಿ ಕೊಲೆಗೆ ಸಂಬಂಧಿಸಿದಂತೆ ಆಕೆಯ ತಾಯಿ, ದಂತವೈದ್ಯೆ ನೂಪುರ್ ತಲ್ವಾರ್ ಅವರ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ಬಂಧನದ ವಾರೆಂಟ್ ಅವಧಿಯನ್ನು ಏಪ್ರಿಲ್ 30ರವರೆಗೆ ಸಿಬಿಐ ಕೋರ್ಟ್ ವಿಸ್ತರಿಸಿದೆ.ನೂಪುರ್ ಅವರನ್ನು ಬಂಧಿಸಲು ಹೊಸ ವಾರೆಂಟ್‌ನ ಅಗತ್ಯವಿದ್ದು, ಮೊದಲು ಜಾರಿ ಮಾಡಲಾದ ವಾರೆಂಟ್‌ನ ಕಾಲಾವಧಿ ಬುಧವಾರ ಮುಗಿದಿದೆ ಎಂದು ತನಿಖಾ ಸಂಸ್ಥೆ ವಾದಿಸಿತ್ತು. ಸುಪ್ರೀಂಕೋರ್ಟ್‌ನ ಮುಂದೆ ಜಾಮೀನು ಅರ್ಜಿ ಬಾಕಿ ಇರುವುದರ ಆಧಾರದ ಮೇಲೆ ಸಿಬಿಐನ ಅರ್ಜಿಯನ್ನು ತಲ್ವಾರ್ ಪರ ವಕೀಲರು ವಿರೋಧಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.