ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಆರಂಭಿಸಲು ವಿಳಂಬ ನೀತಿ ಅನುಸರಿಸಿದ 6 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಜಯರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಗುಂಜಿಗನೂರು ಪಂಚಾಯ್ತಿಯ ಎಸ್.ಎಂ. ಮಲ್ಲಿಕಾರ್ಜುನ್, ಹೊಳಲ್ಕೆರೆ ತಾಲ್ಲೂಕು ಆರ್. ನುಲೇನೂರು ಪಂಚಾಯ್ತಿಯ ಎಸ್. ಮಹೇಶ್ವರಪ್ಪ, ಹೊಳಲ್ಕೆರೆ ತಾಲ್ಲೂಕು ತಾಳೀಕಟ್ಟೆ ಪಂಚಾಯ್ತಿಯ ಟಿ. ನಾಗೇಂದ್ರಪ್ಪ, ಹೊಳಲ್ಕೆರೆ ತಾಲ್ಲೂಕು ತುಪ್ಪದಹಳ್ಳಿಯ ಕುಬೇಂದ್ರಪ್ಪ, ಹಿರಿಯೂರು ತಾಲ್ಲೂಕು ಐಮಂಗಲ ಪಂಚಾಯ್ತಿಯ ಎಸ್.ಎಂ. ಚಿತ್ತಪ್ಪ ಹಾಗೂ ಚಳ್ಳಕೆರೆ ತಾಲ್ಲೂಕು ಜಾಜೂರು ಪಂಚಾಯ್ತಿಯ ಎನ್.ಆರ್. ತಿಪ್ಪೇಸ್ವಾಮಿ ಅಮಾನತುಗೊಂಡ ಪಿಡಿಒಗಳು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗುಂಜಿಗನೂರ ಗ್ರಾಮ ಪಂಚಾಯ್ತಿಯಲ್ಲಿ 54, ಆರ್. ನುಲೇನೂರು ಪಂಚಾಯ್ತಿಯಲ್ಲಿ 29, ತಾಳಿಕಟ್ಟೆಯಲ್ಲಿ 29,ತುಪ್ಪದಹಳ್ಳಿಯಲ್ಲಿ 22, ಜಾಜೂರು ಪಂಚಾಯ್ತಿಯಲ್ಲಿ 6, ಐಮಂಗಲ ಪಂಚಾಯ್ತಿಯಲ್ಲಿ 20 ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿತ್ತು.

ಸಂಬಂಧಿಸಿದ ಕಿರಿಯ ಎಂಜಿನಿಯರ್ಗಳು ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಂದ ತಾಂತ್ರಿಕ ಮಂಜೂರಾತಿ ದೊರಕಿಸಿಕೊಟ್ಟಿದ್ದರೂ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.