ಗುರುವಾರ , ಜೂನ್ 24, 2021
29 °C

ಆರೋಗ್ಯಶ್ರೀ ಕಾರ್ಡ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಘಟ್ಟಪುರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ `ವಾಜಪೇಯಿ ಆರೋಗ್ಯಶ್ರೀ~ ಕಾರ್ಡ್‌ಗಳನ್ನು ಅರ್ಹರಿಗೆ ತಲುಪಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಕರೆ ನೀಡಿದರು.  ಕೋಣನಕುಂಟೆ ಆರ್‌ಬಿಐ ಬಡಾವಣೆಯಲ್ಲಿ ಪಾಲಿಕೆ ವತಿಯಿಂದ ಕಡು ಬಡವರಿಗೆ ವಾಜಪೇಯಿ ಆರೋಗ್ಯಶ್ರೀ ಕಾರ್ಡ್ ವಿತರಿಸಿ ಮಾತನಾಡಿದ ಅವರು ಮಾತನಾಡಿದರು.ಪಾಲಿಕೆ ಜಂಟಿ ಆಯುಕ್ತ ಶಿವಬಸವಯ್ಯ ಪಾಲಿಕೆ ಸದಸ್ಯರಾದ ವಿಜಯಾ ರಮೇಶ್, ಶಶಿರೇಖಾ ಜಯರಾಮ್, ಓ. ಮಂಜುನಾಥ್, ಉಪ ಆಯುಕ್ತ ರಾಮಶೆಟ್ಟಿಗಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಕಂಠೇಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ನಿಸಾರ್ ಅಹಮದ್‌ಖಾನ್, ಎಸ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.