ಶುಕ್ರವಾರ, ಜನವರಿ 24, 2020
21 °C

ಆರೋಗ್ಯ ಅರಿವು ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: ಉತ್ತಮ ಪರಿಸರದ ಕೊರತೆ ಎದುರಾಗಿ­ರುವು­ದರಿಂದ ನಗರ ಪ್ರದೇಶದ ಮಕ್ಕಳು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಕಿದ್ವಾಯಿ ಗ್ರಂಥಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಆತಂಕ ವ್ಯಕ್ತಪಡಿಸಿದರು.ಅವರು ದಾಸರಹಳ್ಳಿಯ ಶಾರದ ವಿದ್ಯಾಮಂದಿರದಲ್ಲಿ ಹಸಿರು ಪ್ರತಿಷ್ಠಾನ ಆಯೋಜಿಸಿದ್ದ ಆರೋಗ್ಯದ ಅರಿವು ಅಭಿಯಾನ ಕಾರ್ಯಕ್ರಮ­ವನ್ನು ಉದ್ಘಾಟಿಸಿ ಮಾತನಾಡಿದರು.ಅತಿಯಾದ ಒತ್ತಡವು ಕೂಡ ಮಕ್ಕಳಿಗೆ ದೈಹಿಕ ಕಾಯಿಲೆಯನ್ನು ತಂದೊಡ್ಡುತ್ತಿದೆ.ಇದಕ್ಕೆ ಪೋಷಕರು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಹಸಿರು ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಇ­ದ್ದರು.

ಪ್ರತಿಕ್ರಿಯಿಸಿ (+)