ನವದೆಹಲಿ (ಪಿಟಿಐ): ಹವಾನಿಯಂತ್ರಿತ ವ್ಯವಸ್ಥೆ ಇರುವ 25ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ಸೇವೆಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಶೇಕಡಾ 5ರಷ್ಟು ಸೇವಾ ತೆರಿಗೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಗಳವಾರ ಲೋಕಸಭೆಯಲ್ಲಿ ಪ್ರಕಟಿಸಿದರು.

ಅಲ್ಲದೆ ಕೆಲವು ಬ್ರ್ಯಾಂಡೆಡ್ ಸಿದ್ದ ಉಡುಪುಗಳ ಚಿಲ್ಲರೆ ಮಾರಾಟದ ಮೇಲಿನ ಶೇ 10ರ ಅಬ್ಕಾರಿ ಸುಂಕದಲ್ಲೂ ಕೆಲವು ವಿನಾಯಿತಿ ನೀಡಿರುವುದಾಗಿ ಹೇಳಿದರು.‘ಆದಾಯ ಕ್ರೋಡೀಕರಿಸುವುದಷ್ಟೇ ಉದ್ದೇಶಿತ ಹೊಸ ತೆರಿಗೆಯ ಗುರಿ ಆಗಿರಲಿಲ್ಲ. ಜಿಎಸ್ಟಿ (ಸರಕು ಮತ್ತು ಸೇವೆಗಳ ತೆರಿಗೆ) ಚಾಲನೆಗೆ ಅವಕಾಶ ಮಾಡುವ ಉದ್ದೇಶವೂ ಇತ್ತು.

ಆದಾಗ್ಯೂ ಜಿಎಸ್ಟಿ ಜಾರಿಗೆ ಬರುವವರೆಗೆ ಆಸ್ಪತ್ರೆಗಳಲ್ಲಿ ಲಭಿಸುವ ಸೇವೆ ಮತ್ತು ರೋಗ ಪತ್ತೆ ಹಚ್ಚುವ ತಪಾಸಣೆಗಳ ಮೇಲಿನ ಹೊಸ ತೆರಿಗೆಯಲ್ಲಿ ವಿನಾಯಿತಿ ನೀಡಲು ನಾನು ನಿರ್ಧರಿಸಿದ್ದೇನೆ’ ಎಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ ಚರ್ಚೆ ವೇಳೆ ಪ್ರಣವ್ ಮುಖರ್ಜಿ ತಿಳಿಸಿದರು. ಈ ಪ್ರಕಟಣೆಯನ್ನು ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಫೆಬ್ರುವರಿ 28ರಂದು 2011-12ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವರು ಮಾಡಿದ್ದ ಈ ಎರಡೂ ಪ್ರಸ್ತಾವಗಳು ಸಂಬಂಧಿಸಿದ ಕ್ಷೇತ್ರಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.ಆರೋಗ್ಯರಕ್ಷಣೆ ಸೇವಾ ತೆರಿಗೆ ಪ್ರಸ್ತಾವವನ್ನು ‘ಸಂಕಟ ತೆರಿಗೆ’ ಎಂದಿದ್ದ ಬಹುತೇಕ ರಾಜಕೀಯ ಪಕ್ಷಗಳು ‘ಕಳೆದ ವಾರ ಬಜೆಟ್ ಮೇಲೆ ಚರ್ಚೆ ಸಂದರ್ಭದಲ್ಲಿ ಇದನ್ನು ಪ್ರಣವ್ ಮುಖರ್ಜಿ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದವು.

ಸಿದ್ದ ಉಡುಪಿನ ಮೇಲೆ ಶೇಕಡಾ 10ರಷ್ಟು ಅಬ್ಕಾರಿ ಸುಂಕ ವಿಧಿಸುವ ಪ್ರಸ್ತಾವವು ಸಣ್ಣ ಉದ್ಯಮಿಗಳಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಸಿದ್ದ ಉಡುಪು ವ್ಯಾಪಾರಸ್ಥರು ಟೀಕಿಸಿದ್ದರು.‘ಬ್ರ್ಯಾಂಡೆಡ್ ಸಿದ್ದ ಉಡುಪಿನ ಚಿಲ್ಲರೆ ಮಾರಾಟ ದರದ ಶೇ 60ರಷ್ಟು ಬೆಲೆ ಮೇಲೆ ಶೇಕಡಾ 10ರಷ್ಟು ಅಬ್ಕಾರಿ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿತ್ತು. ಈಗ ಪರಿಷ್ಕೃತ ನಿಯಮಾವಳಿ ಪ್ರಕಾರ ಚಿಲ್ಲರೆ ಮಾರಾಟ ದರದ ಶೇ 45ರಷ್ಟು ಬೆಲೆ ಮೇಲೆ ಅಬ್ಕಾರಿ ಸುಂಕ ವಿಧಿಸಲಾಗುವುದು’ ಎಂದು ಸಚಿವರು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ಹರ್ಷ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮೇಲೆ ಶೇಕಡಾ 5ರಷ್ಟು ಸೇವಾ ತೆರಿಗೆ ವಿಧಿಸುವ ಪ್ರಸ್ತಾವ ಹಿಂದಕ್ಕೆ ಪಡೆಯುವ ಸರ್ಕಾರ ನಿರ್ಧಾರವನ್ನು ಖಾಸಗಿ ಆರೋಗ್ಯ ಸಂಸ್ಥೆಗಳು ಮತ್ತು ಡಯಾಗ್ನಸ್ಟಿಕ್ ಲ್ಯಾಬ್ಗಳು ಸ್ವಾಗತಿಸಿದ್ದು ಈ ಕ್ರಮದಿಂದ ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದಿವೆ.

‘ಹಣಕಾಸು ಸಚಿವರ ಈ ನಿರ್ಧಾರದಿಂದ ನನಗೆ ಸಂತೋಷವಾಗಿದೆ. ಎರಡು ವಾರಗಳ ಹಿಂದೆ ನಾನು ಸಚಿವರನ್ನು ಭೇಟಿ ಮಾಡಿದ್ದೆ. ತೆರಿಗೆಯಿಂದ ಶ್ರೀಸಾಮಾನ್ಯನಿಗೆ ತೊಂದರೆ ಆಗುತ್ತದೆ. ಇದನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ ಎಂದಿದ್ದರು’ ಎಂದು ನಾರಾಯಣ ಹೃದಯಾಲಯದ ಅಧ್ಯಕ್ಷ ದೇವಿಶೆಟ್ಟಿ ಹೇಳಿದ್ದಾರೆ.

‘ಸೇವಾ ತೆರಿಗೆ ಹಿಂದಕ್ಕೆ ಪಡೆದಿರುವುದು ಒಳ್ಳೆಯದು. ಇನ್ನೂ ಹೆಚ್ಚಿಗೆ ಹಣ ಪಾವತಿಸಬೇಕಿದ್ದ ರೋಗಿಗಳಿಗೆ ಇದು ಉತ್ತಮ ಸುದ್ದಿಯಾಗಿದೆ’ ಎಂದು ಮ್ಯಾಕ್ಸ್ ಹೆಲ್ತ್ಕೇರ್ನ ಸಿಇಒ ಮತ್ತು ವ್ಯವಸ್ತಾಪಕ ನಿರ್ದೇಶಕ ಪರ್ವೇಜ್ ಅಹ್ಮದ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.ಅಪೊಲೊ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಅವರು, ‘ಈ ಪ್ರಗತಿದಾಯಕ ಕ್ರಮದಿಂದ ನಾವು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.