ಬುಧವಾರ, ಆಗಸ್ಟ್ 4, 2021
26 °C

ಆರ್ಥಿಕ ಸಮಗ್ರ ಸಹಭಾಗಿತ್ವ ಒಪ್ಪಂದಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಐಎಎನ್‌ಎಸ್): ಆರ್ಥಿಕ ಒಪ್ಪಂದಗಳು ಮತ್ತು ತಂತ್ರಗಾರಿಕೆ ಸಹಭಾಗಿತ್ವ ಕುರಿತು ಇಲ್ಲಿ ನಡೆಯುತ್ತಿರುವ ಭಾರತ- ಮಲೇಷ್ಯಾ ಜಂಟಿ ಸಮಿತಿ (ಜೆಸಿಎಂ)ನಲ್ಲಿ ಮಂಗಳವಾರ ಚರ್ಚೆ ಆರಂಭವಾಗಲಿದೆ.ದ್ವಿಪಕ್ಷೀಯ ವಿಷಯಗಳಿಗೆ ಸಂಬಂಧಿಸಿದಂತೆ ಪೂರ್ಣಾವಧಿ ಮಾತುಕತೆ ವಿಷಯ ಪಟ್ಟಿಯಲ್ಲಿದೆ. ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಲೇಷ್ಯಾ ಸಹವರ್ತಿ ನಜೀಬ್ ತುನ್ ರಜಾಕ್ ಅವರು ಕಳೆದ ವರ್ಷದ ಜನವರಿ ಮತ್ತು ಅಕ್ಟೋಬರ್‌ನಲ್ಲಿ ದೆಹಲಿ ಹಾಗೂ ಕ್ವಾಲಾಲಂಪುರದಲ್ಲಿ ನಡೆಸಿದ ಚರ್ಚೆಯ ಮುಂದುವರೆದ ಭಾಗವಾಗಿ ಜೆಸಿಎಂ ಈಗ ಚರ್ಚೆ ನಡೆಸುತ್ತಿದೆ.ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದು, ವಿದೇಶಾಂಗ ಸಚಿವ ಅನಿಫಾಹ ಅಮನ್ ಮಲೇಷ್ಯಾ ನಿಯೋಗದ ನೇತೃತ್ವ ವಹಿಸಿದ್ದಾರೆ.ಉಭಯ ದೇಶಗಳ ಫೆ.18ರಂದು ಆಗಿರುವ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ ಎಂದು ಮಲೇಷ್ಯಾದಲ್ಲಿರುವ ಭಾರತೀಯ ಹೈಕಮಿಷನರ್ ವಿಜಯ್ ಗೋಖಲೆ ತಿಳಿಸಿದ್ದಾರೆ.ಎರಡೂ ದೇಶಗಳ ನಡುವಿನ ಸಮಗ್ರ ಸಹಕಾರ ಆರ್ಥಿಕ ಒಪ್ಪಂದ ಜೂನ್ ತಿಂಗಳಿನಿಂದ ಜಾರಿಗೆ ಬರಲಿದ್ದು, ಅದರ ವಿಧಿ ವಿಧಾನಗಳಿಗೆ ರೂಪುರೇಷೆ ನೀಡಲಾಗುತ್ತಿದೆ ಎಂದವರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.