ಆರ್‌ಟಿಪಿಎಸ್ 4 ಘಟಕ ಕೆಲಸ: 800 ಮೆಗಾವಾಟ್ ಉತ್ಪಾದನೆ

7

ಆರ್‌ಟಿಪಿಎಸ್ 4 ಘಟಕ ಕೆಲಸ: 800 ಮೆಗಾವಾಟ್ ಉತ್ಪಾದನೆ

Published:
Updated:

ರಾಯಚೂರು: ಇಲ್ಲಿನ ಆರ್‌ಟಿಪಿಎಸ್‌ನ ಎಂಟು ಘಟಕಗಳಲ್ಲಿ ನಾಲ್ಕು ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ಕೇವಲ ನಾಲ್ಕು ಘಟಕಮಾತ್ರ ವಿದ್ಯುತ್ ಉತ್ಪಾದನೆ ಮಾಡು ತ್ತಿದ್ದು, ಶನಿವಾರ 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ ತಿಳಿಸಿದ್ದಾರೆ.1,2,3,8ನೇ ಘಟಕ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ ಘಟಕಗಳಾಗಿವೆ ಎಂದಿದಾರೆ. ಕಲ್ಲಿದ್ದಲು ಸಂಗ್ರಹ: ಸದ್ಯ ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಒಂದು ರೇಕ್ ಕಲ್ಲಿದ್ದಲು ಬರಲಿದೆ. ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್, ತಾಲ್ಚೇರಿಯಿಂದ ಕಲ್ಲಿದ್ದಲು ಬಂದಿದೆ. ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆ ಆರಂಭವಾಗಿದೆ. ಸಿಂಗರೇಣಿಯಿಂದ ಆರ್‌ಟಿಪಿಎಸ್‌ಗೆ ಭಾನುವಾರ ಮುಂಜಾನೆ ತಲುಪುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry