ಸೋಮವಾರ, ಮೇ 17, 2021
22 °C

ಆಶ್ರಮದಲ್ಲೇ ಉಳಿದ ಕೊಪ್ಪಳದ ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ:  ಉತ್ತರ ಭಾರತದ ಕಡೆಗೆ ಪ್ರವಾಸ ಹೊರಟಿದ್ದ ಇ್ಲ್ಲಲಿಗೆ ಸಮೀಪದ ಭಾಗ್ಯನಗರ ಆಂಜನೇಯ ಬಡಾವಣೆಯ ನಿವಾಸಿ ಜೆಸ್ಕಾಂನ ನಿವೃತ್ತ ಎಂಜಿನಿಯರ್ ಗೋವಿಂದರಾವ್ ಮತ್ತು ಕುಟುಂಬ ಬದರಿನಾಥದ ಆಶ್ರಮದಲ್ಲೇ ಉಳಿದುಕೊಂಡಿದೆ.ಮೇ 30ರಂದು ಉತ್ತರ ಭಾರತದ ಕಡೆಗೆ ಪ್ರವಾಸ ಹೊರಟಿದ್ದ ಕುಟುಂಬದ ಐವರು ಸದಸ್ಯರು ಅಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ಬದರಿನಾಥದ ಆಶ್ರಮದಲ್ಲೇ ಉಳಿಯಬೇಕಾಯಿತು.ಅವರನ್ನು ವಾಪಸ್ ಕರೆತರುವ ಬಗ್ಗೆ ಇನ್ನೂ ಯಾವುದೇ ಪ್ರಯತ್ನಗಳು ಸಫಲವಾಗುತ್ತಿಲ್ಲ. ಅಲ್ಲಿ ಸೂಕ್ತ ಆಹಾರ, ವಿದ್ಯುತ್, ಔಷಧ ಪೂರೈಕೆ ಆಗದೆ ಯಾತ್ರಿಗಳು ಪರದಾಟ ಅನುಭವಿಸುತ್ತಿದ್ದಾರೆ. ರಸ್ತೆ ಸಂಚಾರ ಸಂಪೂರ್ಣ ಹದಗೆಟ್ಟಿದೆ. ವಾಪಸ್ ಬರಲು ಹೆಲಿಕಾಪ್ಟರ್ ಮೂಲಕ ಮಾತ್ರ ಸಾಧ್ಯ. ಆ ವ್ಯವಸ್ಥೆ ಇನ್ನೂ ಆಗಿಲ್ಲ  ಎಂದು ಅವರ ಪುತ್ರ ಪ್ರಕಾಶ್  ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.