ಶನಿವಾರ, ಮೇ 8, 2021
26 °C

ಆಸರೆ ಶೌಚಾಲಯಕ್ಕೆ ಗುಂಡಿಯೇ ಇಲ್ಲ...!

ಪ್ರಜಾವಾಣಿ ವಾರ್ತೆ, ಆರ್.ವೀರೇಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಗದಗ: ಪ್ರತಿ ಮನೆಯಲ್ಲೂ ಶೌಚಾಲಯ ಇರಬೇಕು ಎನ್ನುವ ಸರ್ಕಾರ ಆಸರೆ ಯೋಜನೆಯಡಿ ತಾನೇ ನಿರ್ಮಿಸಿರುವ ಮನೆಗಳ ಶೌಚಾಲಯಗಳಿಗೆ ಗುಂಡಿಯನ್ನೇ ನಿರ್ಮಿಸಿಲ್ಲ...!ನರಗುಂದ ತಾಲ್ಲೂಕಿನ ಬೂದಿಹಾಳದಲ್ಲಿ ನೆರೆ ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಆಸರೆ ಮನೆಗಳಿಗೆ ಶೌಚಾಲಯವನ್ನೇನೋ ಕಟ್ಟಲಾಗಿದೆ. ಆದರೆ ಸೇಪ್ಟಿ ಟ್ಯಾಂಕ್ ನಿರ್ಮಾಣಕ್ಕೆ ಗುಂಡಿಯನ್ನೇ ತೆಗೆದಿಲ್ಲ. ಹಾಗೆಯೇ ಹೊರಗೆ ಪೈಪ್‌ಗಳನ್ನು ಬಿಡಲಾಗಿದೆ.ಮಲಪ್ರಭಾ ನದಿಯ ಪ್ರವಾಹ ಸಂತ್ರಸ್ತರಾಗಿರುವ ಬೂದಿಹಾಳ ಗ್ರಾಮದ ಜನರಿಗೆ 174 ಮನೆಗಳನ್ನು ನವ ಗ್ರಾಮದಲ್ಲಿ ಕಟ್ಟಲಾಗಿದೆ. ಯಾವ ಮನೆಗೂ ಶೌಚಾಲಯದ ಗುಂಡಿಯನ್ನೇ  ತೋಡಿಲ್ಲ. ಅಲ್ಲದೇ ಮೂಲಸೌಕರ್ಯಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.ಆದರೂ ಬುಧವಾರ (ಸೆ.7) ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನರಗುಂದದಲ್ಲಿ ನಡೆಯುವ ಸಮಾರಂಭದಲ್ಲಿ ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡಲಿದ್ದಾರೆ.ನವಗ್ರಾಮದಲ್ಲಿ ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಮುಖ್ಯಮಂತ್ರಿಯಿಂದ ಮನೆ ಹಸ್ತಾಂತರ ಮಾಡಿಸಬೇಕೆನ್ನುವ ಉಮೇದಿನಿಂದಾಗಿ ರಸ್ತೆಗಳಿಗೆ ಜಲ್ಲಿ ಕಲ್ಲನ್ನು ಹಾಕಿ, ಮೇಲೆ ಮಣ್ಣನ್ನು ಹಾಕುವ ಕೆಲಸ ಮಂಗಳವಾರವೂ ನಡೆದಿತ್ತು.ಗ್ರಾಮಕ್ಕೆ ನೀರು ಪೂರೈಕೆ ಮಾಡಬೇಕಿರುವ ಟ್ಯಾಂಕ್ ಕಾಮಗಾರಿಯೂ ಅರ್ಧಂಬರ್ಧವಾಗಿದೆ. ಕೆಲವು ಮನೆಗಳ ಬಾಗಿಲುಗಳೇ ನಾಪತ್ತೆಯಾಗಿ ಹೋಗಿವೆ.ಡಿಸಿ ಮಾತಿಗೂ ಕಿಮ್ಮತ್ತಿಲ್ಲ: ಬೂದಿಹಾಳ ಗ್ರಾಮದ 220 ಮಂದಿ ಆಸರೆ ಮನೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ ನೀಡುತ್ತಿರುವುದು 174 ಮನೆಗಳನ್ನು ಮಾತ್ರ. ಈ ವಿಷಯವನ್ನು ಸಂತ್ರಸ್ತರು ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಅವರ ಗಮನಕ್ಕೂ ತಂದಿದ್ದಾರೆ.~ಈಗಾಗಲೇ ಮತ್ತೆ ಮಲಪ್ರಭಾ ನದಿಯ ಪ್ರವಾಹ ಶುರುವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗ್ರಾಮದಲ್ಲಿಯೇ ಉಳಿಯಬೇಕಿರುವ 46 ಕುಟುಂಬಗಳು ಪ್ರವಾಹದ ಭೀತಿಯಲ್ಲಿಯೇ ಬದುಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ~ ಎಂದು ಶಿವಾಜಿ ಸಿದ್ದಪ್ಪ ಇಂದಲಕರ ~ಪ್ರಜಾವಾಣಿ~ಗೆ ತಿಳಿಸಿದರು.ಜಿಲ್ಲಾಧಿಕಾರಿಯವರು ಗ್ರಾಮಲೆಕ್ಕಾಧಿಕಾರಿ ಹತ್ತಿರ ಅರ್ಜಿ ಸಲ್ಲಿಸಿ, ನಂತರ ಪರಿಶೀಲಿಸುತ್ತೇವೆ ಎನ್ನುವ ಭರವಸೆ ಕೊಟ್ಟಿದ್ದರು. ಆದರೆ ಗ್ರಾಮಲೆಕ್ಕಾಧಿಕಾರಿ ನಮ್ಮ ಅರ್ಜಿಯನ್ನು ಪಡೆದುಕೊಳ್ಳಲು ನಿರಾಕರಿಸಿದರು. ಕಾರಣ ಕೇಳಿದರೆ ~ನೀವು ಊರಿನಲ್ಲಿ ವಾಸ ಮಾಡುತ್ತಿರುವ ಬಗ್ಗೆ ಏನು ಗ್ಯಾರಂಟಿ.ಸ್ಥಳಕ್ಕೆ ಬಂದು ಪರಿಶೀಲಿಸಿದ ನಂತರ ಅರ್ಜಿ ಪಡೆದುಕೊಳ್ಳುತ್ತೇನೆ~ ಎಂದು ಉದ್ಧಟತನದಿಂದ ಮಾತನಾಡುತ್ತಾರೆ ಎಂದು ಬಸವರಾಜ ಅಟಗಲ್, ವೀರಪ್ಪ ಹಳೇಹೊಳಿ, ಶೇಖಪ್ಪ ಚಿಕ್ಕನಾಳ ಆಳಲು ತೋಡಿಕೊಂಡರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.