ಸವದತ್ತಿ: `ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥದಲ್ಲಿಯೂ ಕಲಬೆರಕೆ ಇದೆ. ತರಕಾರಿ ಹಾಗೂ ಹಣ್ಣುಗಳೂ ವಿಷಯುಕ್ತವಾಗಿದ್ದು, ಅವುಗಳನ್ನು ಉಪಯೋಗಿಸುವಾಗ ಅತ್ಯಂತ ಜಾಗ್ರತೆ ವಹಿಸುವುದು ಅವಶ್ಯವಿದೆ~ ಎಂದು ಸರ್ವಮಂಗಲಾ ಕಟ್ಟಿ ಹೇಳಿದರು.

ಇಲ್ಲಿನ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಮಹಿಳಾ ಸಂಘ ಹಾಗೂ ಜೈಂಟ್ಸ್ ಸಹೇಲಿ ಗ್ರೂಪ್ನವರು ವಿಶ್ವವಿಜ್ಞಾನ ದಿನ ಪ್ರಯುಕ್ತ ಆಯೋಜಿಸಿದ್ದ `ಅಡುಗೆ ಮನೆಯಲ್ಲಿ ವಿಜ್ಞಾನ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರೈತರು ಬೆಳೆಯುವ ಪ್ರತಿಯೊಂದು ಬೆಳೆಗೆ ಅತ್ಯಂತ ವಿಷಯುಕ್ತ ರಸಗೊಬ್ಬರ, ಔಷಧಿಗಳನ್ನು ಬಳಸುತ್ತಿದ್ದು, ಅದರಿಂದ ಸೇವಿಸುವ ಆಹಾರ ವಿಷಯುಕ್ತವಾಗಿದೆ~ ಎಂದರು.

ಪ್ರಭಾರಿ ಪ್ರಾಚಾರ್ಯರಾದ ಎಸ್.ಬಿ. ಕಿಲ್ಲೇದಾರ ಮಾತನಾಡಿ, `ಮಹಿಳೆಯರು ವೈಜ್ಞಾನಿಕ ಮನೋಭಾವ ಹೊಂದುವುದರೊಂದಿಗೆ ಹೆಚ್ಚು ಸಾತ್ವಿಕ ಆಹಾರ ತಯಾರಿಸುವಲ್ಲಿ ಆದ್ಯತೆ ನೀಡುವ ಅಗತ್ಯವಿದೆ~ ಎಂದರು.
ರೇಣುಕಾ ಸಹೇಲಿ ಅಧ್ಯಕ್ಷೆ ಶಶಿಕಲಾ ಹಿರೇಮಠ, ಡಾ. ಅರುಂಧತಿ ಬದಾಮಿ, ಡಾ. ಗೀತಾ ಖರಾಡೆ, ಸುಮಾ ಯಡಾಲ, ಪ್ರೊ. ಸಂಜನಾ ಹೊಳಿಮಠ, ಪ್ರೊ. ಸಾವಿತ್ರಿ ಕುರಬೇಟ ಉಪಸ್ಥಿತರಿದ್ದರು.

ಸೌಮ್ಯಾ ದೈವಜ್ಞ, ಸೈರಾಜ ಬೂದ್ಲೇಖಾನ ಪ್ರಾರ್ಥನೆ ಹಾಡಿದರು. ಜಯಶ್ರೀ ಕುರುವಿಕೊಪ್ಪ ಸ್ವಾಗತಿಸಿದರು. ಸಾವಿತ್ರಿ ಹಿರೇಮಠ ಪರಿಚಯಿಸಿದರು. ನೀಲಾಂಬಿಕಾ ಪ್ರಭುನವರ ನಿರೂಪಿಸಿದರು. ಶಶಿಕಲಾ ಬಂಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.