ಚಿಕ್ಕಮಗಳೂರು: ಸಂಸತ್ತಿನಲ್ಲಿ ಶೀಘ್ರದಲ್ಲಿಯೇ ಆಹಾರ ಭದ್ರತಾ ಮಸೂದೆ ಮಂಡನೆಯಾಗಲಿದೆ ಎಂದು ರಾಜ್ಯಸಭಾ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ತಿಳಿಸಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆಜಿ ಅಕ್ಕಿಯನ್ನು 3 ರೂಪಾಯಿಗಳಿಗೆ ಮತ್ತು ಗೋಧಿಯನ್ನು 2 ರೂಪಾಯಿಗೆ ನೀಡಲು ಈ ಮಸೂದೆ ನೆರವಾಗುತ್ತದೆ ಎಂದು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಅಧ್ಯಯನ ನಡೆಸಲು ಓಂಬುಡ್ಸ್ಮನ್, ಖಾಸಗಿ ಏಜೆನ್ಸಿ ಮತ್ತು ಗುಪ್ತದಳಗಳನ್ನು ಬಲಪಡಿಸಲಾಗುವುದೆಂದು ಅವರು ಭರವಸೆಯ ಮಾತನಾಡಿದರು.

ಒಂದು ವೇಳೆ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಕಾರ್ಯಗತಗೊಳ್ಳದಿರುವುದು ಕಂಡುಬಂದರೆ ಅಗತ್ಯ ಕ್ರಮಕೈಗೊಳ್ಳಲು ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ಯಂತ್ರದಿಂದ ಕೆಲಸ ನಿರ್ವಹಿಸುತ್ತಿರುವುದು, ಕೂಲಿಕಾರ್ಮಿಕರು ಉದ್ಯೋಗ ಅರಸಿ ಬಾರದಿರುವುದು ತಮ್ಮ ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಅವ್ಯವಹಾರ ನಡೆದಿದ್ದರೆ ನಿಖರವಾದ ಮಾಹಿತಿ ನೀಡುವಂತೆ ಯುವಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದರು.

ಉದ್ಯೋಗ ಖಾತರಿ ಯೋಜನೆಯಡಿ ಎಷ್ಟು ಮಂದಿ ಉದ್ಯೋಗ ಪಡೆದಿದ್ದಾರೆ? ಎಂಬುದರ ಮೇಲೆ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ನಿಖರವಾಗಿ ಗುರುತಿಸಲು ಸಹಕಾರಿಯಾಗಬಹುದೆಂದು ಅಭಿಪ್ರಾಯಪಟ್ಟರು.

ಈ ಯೋಜನೆಯಡಿ ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ರೀತಿ ಸಂಬಳ ನಿಗದಿಯಾಗಿದೆ. ಮೊದಲ ಹಂತವಾಗಿ 200 ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿಯೋಜನೆ ಜಾರಿಗೊಂಡರೆ, ಎರಡನೇ ಹಂತವಾಗಿ 350 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದರು.

ನಿಯೋಗ: ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಬೆಳೆಗಾರರನ್ನೊಳಗೊಂಡ ನಿಯೋಗವನ್ನು ವಾಣಿಜ್ಯ ಸಚಿವರು ಮತ್ತು ಹಣಕಾಸು ಸಚಿವರ ಬಳಿ ಕರೆದೊಯ್ಯಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಕುರಿತು ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, ಹಲವು ವರ್ಷದಿಂದ ಪದಾಧಿಕಾರಿಗಳಾಗಿದ್ದವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶಮಾಡಿಕೊಟ್ಟಿದ್ದರಿಂದ ಕೆಲವು ವರ್ಗದವರಿಗೆ ಅವಕಾಶ ನೀಡಿಲ್ಲವೆಂಬ ಮಾತು ಕೇಳಿಬಂದಿದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯದ ಉಸ್ತುವಾರಿ ವಹಿಸಿಕೊಂಡವರು ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಯುವಜನ ರಾಜಕೀಯ: ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಸೋಮವಾರ ಸಂಜೆ 5ಗಂಟೆಗೆ ಮುಗಿದಿದೆ. ರಾಜಕೀಯದಲ್ಲಿ ಯುವಜನರನ್ನು ಹೆಚ್ಚಾಗಿ ತೊಡಗಿಸಲು ರಾಹುಲ್ಗಾಂಧಿ ಆಸಕ್ತಿವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸ, ಸಂವಿಧಾನ ಮತ್ತು ದೇಶದ ಆಡಳಿತ ಉತ್ತಮಗೊಳ್ಳಬೇಕಾದರೆ ಯುವಜನರು ರಾಜಕೀಯದಲ್ಲಿ ವಹಿಸಬೇಕಾದ ಪಾತ್ರ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಸಂಸತ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಯುವಜನರಿಗೆ ಹೆಚ್ಚಿನ ಸ್ಥಾನ ನೀಡುವ ಆಲೋಚನೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ ಚುನಾವಣೆಯಲ್ಲಿ ಸ್ಥಾನಗಳನ್ನು ನೀಡುವಾಗ ಅನುಭವ ಮತ್ತು ಸೇವೆ ಪರಿಗಣಿಸಲಾಗುವುದು ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ, ಮುಖಂಡರಾದ ಕೆ.ಬಿ.ಮಲ್ಲಿ ಕಾರ್ಜುನ, ಎ.ಎನ್.ಮಹೇಶ್, ಸಚ್ಚಿನ್ಮೀಗಾ, ಶಾಂತೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.