ಮಂಗಳವಾರ, ಏಪ್ರಿಲ್ 13, 2021
24 °C

ಆಹಾರ ಹಣದುಬ್ಬರ: ಮತ್ತೆ ಎರಡಂಕಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹದಿನೈದು ದಿನಗಳ ಅಂತರದ ನಂತರ ಆಹಾರ ಹಣದುಬ್ಬರವು, ಮಾರ್ಚ್ 12ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಮತ್ತೆ ಎರಡಂಕಿಗೆ ಏರಿಕೆಯಾಗಿದೆ.ತರಕಾರಿ, ಹಣ್ಣು ಮತ್ತು ಪ್ರೋಟಿನ್ ಆಧಾರಿತ ಸರಕುಗಳು ದುಬಾರಿಯಾಗಿದ್ದರಿಂದ ಆಹಾರ ಹಣದುಬ್ಬರವು ಹಿಂದಿನ ವಾರದ ಶೇ 9.42ದಿಂದ ಶೇ 10.05ಕ್ಕೆ ಏರಿಕೆಯಾಗಿದೆ.ಕಳೆದ ಮೂರು ವಾರಗಳಿಂದ ಇಳಿಕೆ ಪ್ರವೃತ್ತಿ ತೋರಿಸುತ್ತಿದ್ದ ಹಣದುಬ್ಬರವು ಮಾರ್ಚ್ 5ಕ್ಕೆ ಕೊನೆಗೊಂಡಿದ್ದ ವಾರಾಂತ್ಯದಲ್ಲಿ ಒಂದಂಕಿಗೆ ಇಳಿದಿತ್ತು.ಹಣದುಬ್ಬರ ಪರಾಮರ್ಶಿಸುವ ಅವಧಿಯಲ್ಲಿ ತರಕಾರಿ ಬೆಲೆ ವರ್ಷದಿಂದ ವರ್ಷಕ್ಕೆ ಶೇ 11.20, ಹಣ್ಣು ಶೇ 23.60, ಮೊಟ್ಟೆ, ಮಾಂಸ ಮತ್ತು ಮೀನು ಶೇ 13.21ರಷ್ಟು ತುಟ್ಟಿಯಾಗಿವೆ.ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಸಮತೋಲನವು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಶೀಘ್ರವಾಗಿ ಕೊಳೆಯುವ ತರಕಾರಿ ಮತ್ತು ಹಣ್ಣುಗಳ ಬೆಲೆಗಳು ಗಮನಾರ್ಹ ಏರಿಳಿತ ಕಾಣುತ್ತಿವೆ.ಆಹಾರ ಹಣದುಬ್ಬರ ಮತ್ತೆ ಎರಡಂಕಿಗೆ ಏರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪೂರೈಕೆಯಲ್ಲಿನ ಅಡಚಣೆ ಕಾರಣದಿಂದ ಬೆಲೆಗಳು ಮತ್ತೆ ಏರಿಕೆ  ಹಾದಿಯಲ್ಲಿ ಇವೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯ ಆರ್ಥಿಕ ತಜ್ಞ ಬರುವಾ ಅಭಿಪ್ರಾಯಪಟ್ಟಿದ್ದಾರೆ.ಸಮಗ್ರ ಹಣದುಬ್ಬರವು 2010ರ ಮಾರ್ಚ್ ತಿಂಗಳಿನಿಂದ ಶೇ 8ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಶೇ 8.31ರಷ್ಟು ದಾಖಲಾಗಿತ್ತು. ಬೆಳವಣಿಗೆ ಮತ್ತು ಹಣದುಬ್ಬರ ಮಧ್ಯೆ ಸಮತೋಲನ ಸಾಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.ಮೇ ತಿಂಗಳಲ್ಲಿ ಪ್ರಕಟಿಸಲಿರುವ ಮಧ್ಯಂತರ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೇ 0.25ರಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.