ಸೋಮವಾರ, ಜನವರಿ 20, 2020
18 °C

ಆ್ಯಷಸ್‌: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್‌ (ಎಎಫ್‌ಪಿ): ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದೆ.ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 531 ರನ್‌ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್‌ ನಾಲ್ಕನೇ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 247 ರನ್‌ ಗಳಿಸಿದೆ.ಇದೀಗ ಗೆಲುವು ಪಡೆಯಲು ಅಂತಿಮ ದಿನ 284 ರನ್‌ ಗಳಿಸುವ ಸವಾಲು ಅಲಸ್ಟೇರ್‌ ಕುಕ್‌ ಬಳಗದ ಮುಂದಿದೆ. ಆದರೆ ಕೈಯಲ್ಲಿರುವುದು ನಾಲ್ಕು ವಿಕೆಟ್‌ಗಳು ಮಾತ್ರ. ಯಾವುದೇ ಪವಾಡ ನಡೆಯದಿದ್ದರೆ, ಮೈಕಲ್‌ ಕ್ಲಾರ್ಕ್‌ ಬಳಗ ಈ ಪಂದ್ಯ ಗೆದ್ದು ಸರಣಿಯಲ್ಲಿ 2–-0 ರಲ್ಲಿ ಮುನ್ನಡೆ ಪಡೆಯುವುದು ಖಚಿತ.ಶನಿವಾರ 3 ವಿಕೆಟ್‌ಗೆ 132 ರನ್‌ ಗಳಿಸಿದ ಆಸ್ಟ್ರೇಲಿಯಾ ಅದೇ ಮೊತ್ತಕ್ಕೆ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡು ಎದುರಾಳಿಗಳ ಗೆಲುವಿಗೆ 531 ರನ್‌ಗಳ ಗುರಿ ನೀಡಿತು.ಕಠಿಣ ಗುರಿ ಬೆನ್ನಟ್ಟತೊಡಗಿದ ಇಂಗ್ಲೆಂಡ್‌ ತಂಡ ಕುಕ್ (1) ಅವರನ್ನು ಎರಡನೇ ಓವರ್‌ನಲ್ಲೇ ಕಳೆದುಕೊಂಡಿತು. ಅಲ್ಪ ಸಮಯದ ಬಳಿಕ ಮೈಕಲ್‌ ಕಾರ್ಬೆರಿ (14) ಕೂಡಾ ಪೆವಿಲಿಯನ್‌ಗೆ ಮರಳಿದರು.ಈ ಹಂತದಲ್ಲಿ ಜೊತೆಯಾದ ಜೋ ರೂಟ್‌ (87) ಮತ್ತು ಕೆವಿನ್‌ ಪೀಟರ್‌ಸನ್‌ (53) ಮೂರನೇ ವಿಕೆಟ್‌ಗೆ 111 ರನ್‌ಗಳ ಜೊತೆಯಾಟ ನೀಡಿ ಮರುಹೋರಾಟದ ಸೂಚನೆ ನೀಡಿದರು. ಆದರೆ ಪೀಟರ್‌ ಸಿಡ್ಲ್‌ ಎಸೆತದಲ್ಲಿ ಪೀಟರ್‌ಸನ್‌ ಔಟಾಗುವು ದರೊಂದಿಗೆ ಇಂಗ್ಲೆಂಡ್‌ ಕುಸಿತದ ಹಾದಿ ಹಿಡಿಯಿತು. ದಿನದಾಟದ ಅಂತ್ಯಕ್ಕೆ ಮ್ಯಾಟ್‌ ಪ್ರಯರ್‌ (31) ಮತ್ತು ಸ್ಟುವರ್ಟ್‌ ಬ್ರಾಡ್‌ (22) ಕ್ರೀಸ್‌ನಲ್ಲಿದ್ದರು.

 

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 158 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 570 ಡಿಕ್ಲೇರ್ಡ್‌  ಮತ್ತು ಎರಡನೇ ಇನಿಂಗ್ಸ್‌ 39 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ಡಿಕ್ಲೇರ್ಡ್‌; ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 68.2 ಓವರ್‌ಗಳಲ್ಲಿ 172 ಮತ್ತು ಎರಡನೇ ಇನಿಂಗ್ಸ್‌ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 247 (ಜೋ ರೂಟ್‌ 87, ಕೆವಿನ್‌ ಪೀಟರ್‌ಸನ್‌ 53, ಬೆನ್‌ ಸ್ಟೋಕ್ಸ್‌ 28, ಮ್ಯಾಟ್‌ ಪ್ರಯರ್‌ ಬ್ಯಾಟಿಂಗ್‌ 31, ಸ್ಟುವರ್ಟ್‌ ಬ್ರಾಡ್‌ ಬ್ಯಾಟಿಂಗ್‌ 22)

ಪ್ರತಿಕ್ರಿಯಿಸಿ (+)