ಕೋಲಾರ: ‘ಜಿಲ್ಲೆಯಲ್ಲಿ ಆರಂಭವಾ ಗಿರುವ ಶಾಶ್ವತ ನೀರಾವರಿ ಹೋರಾ ಟವು ಆ.25ಕ್ಕೆ 75 ದಿನ ಪೂರೈಸಲಿದ್ದು, ಆ ದಿನ ಬೃಹತ್ ಹೋರಾಟ ನಡೆಸಲಾ ಗುತ್ತದೆ’ ಎಂದು ಅಂತರರಾಷ್ಟ್ರೀಯ ಯೋಗಪಟು ಹಾಗೂ ರೈತ ಹೋರಾಟ ಗಾರ್ತಿ ಸಿ.ಎಲ್.ಭಾಗೀರಥಿ ಹೇಳಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯು ನಗರದ ಸರ್ಕಾರಿ ಬಾಲಕಿ ಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋ ಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, 75ನೇ ದಿನದ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಜನ ಬರುತ್ತಾರೆ. ವಿದ್ಯಾರ್ಥಿಗಳು ಸಹ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಜನತೆ ಚಲ್ಲಘಟ್ಟ, ಎತ್ತಿನಹೊಳೆ, ಯರಗೋಳ್ ಯೋಜನೆ ಗಳಿಗೆ ತೃಪ್ತರಾದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಬದಲಿಗೆ ನದಿ ನೀರಿಗಾಗಿ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕು. ಆ.25 ರಂದು ನಡೆಯುವ ಹೋರಾಟದಲ್ಲಿ ರಾಜ್ಯದ ಸಾಕಷ್ಟು ಹೋರಾಟಗಾರರು ಭಾಗವಹಿಸಲಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆ ಹೋರಾಟಕ್ಕೆ ಬರದಿದ್ದರೆ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು,

ಸಾರ್ವಜನಿಕರು, ವಿವಿಧ ಸಂಘಟನೆ ಗಳ ಸದಸ್ಯರು, ಎಲ್ಲಾ ಶಾಲಾ ಕಾಲೇಜು ಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೀರಾವರಿ ಹೋರಾಟದಲ್ಲಿ ಭಾಗವಹಿಸ ಬೇಕು.ಜತೆಗೆ ನೆರೆಹೊರೆಯ ವರನ್ನು ಹುರಿದುಂಬಿಸಿ ಹೋರಾಟಕ್ಕೆ ಕರೆ ತರ ಬೇಕು. ಆ ಮೂಲಕ ಹೋರಾಟ ಯಶಸ್ವಿ ಗೊಳಿಸಬೇಕು ಎಂದು ಕರೆ ನೀಡಿದರು.

ಕಷ್ಟದ ಅರಿವಾಗಿದೆ: ಸಮಿತಿ ಸಂಚಾಲಕ ಪ್ರಕಾಶ್ ಮಾತನಾಡಿ, ‘ಜನರಿಗೆ ಅರಿವಿಲ್ಲದೆ ಅನವಶ್ಯಕವಾಗಿ ಕಾಡು ಕಡಿಯುತ್ತಿರುವುದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಈಗಾಗಲೇ ನೀರಿನ ಕಷ್ಟದ ಅರಿವಾಗಿದೆ. ಮರ ಗಿಡಗಳನ್ನು ರಕ್ಷಿಸಿದರೆ ಉತ್ತಮ ಮಳೆಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ನೀಲಗಿರಿ ಮರಗಳನ್ನು ಹೆಚ್ಚಾಗಿ ಬೆಳೆದಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಮತ್ತೊಂದೆಡೆ ನೀಲಗಿರಿ ಮರಗಳಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಕೃಷಿ ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳು ಮನೆಯಲ್ಲಿದ್ದ ಚಿನ್ನಾಭರಣ ಮಾರಿ ಕೊಳವೆ ಬಾವಿ ಕೊರೆಸುತ್ತಿವೆ. ಆದರೆ, ನೀರು ಸಿಗುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ವಿಷಕಾರಿ ಫ್ಲೋರೈಡ್ ಪ್ರಮಾಣ ಹೆಚ್ಚಿರುವುದರಿಂದ ಬಳಕೆಗೆ ಯೋಗ್ಯ ವಾಗಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 58 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಎತ್ತಿನಹೊಳೆ ಅಥವಾ ಯರಗೋಳ್ ಯೋಜನೆಯಿಂದ ಜಿಲ್ಲೆಗೆ ನೀರು ಬರುವುದಿಲ್ಲ. ಚಲ್ಲಘಟ್ಟ ಯೋಜನೆಯ ನೀರು ಕೊಳಚೆ ನೀರಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಈ ಮೂರೂ ಯೋಜನೆಗಳು ನಿಷ್ಪ್ರಯೋಜಕ ಎಂದು ಲೇವಡಿ ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಕೃಷ್ಣಮೂರ್ತಿ, ಉಪನ್ಯಾಸಕರಾದ ಗೋಪಿಕೃಷ್ಣನ್, ಚಂದ್ರಪ್ಪ, ಹೇಮಾವತಿ, ಸಮಿತಿ ಸಂಚಾಲಕ ವಿ.ಕೆ.ರಾಜೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.