ಶುಕ್ರವಾರ, ಮೇ 14, 2021
29 °C

ಇಂಚರದಲ್ಲಿ `ರಿದಂಪ್ಯಾಡ್' ನಾದಝರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯು ದೊಡ್ಡಬೊಮ್ಮಸಂದ್ರದಲ್ಲಿ ಇತ್ತೀಚೆಗೆ `ಇಂಚರ-23' ವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.ಪ್ರಣವ್‌ದತ್ ಅವರು ರಿದಂಪ್ಯಾಡ್ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ `ವಾತಾಪಿ ಗಣಪತಿಂ ಭಜೆ' ಭಕ್ತಿ ಗೀತೆಯನ್ನು ಆಯ್ದುಕೊಂಡರು. `ಭಾಗ್ಯದಾ ಲಕ್ಷ್ಮೀ ಬಾರಮ್ಮ' ಗೀತೆಯೊಂದಿಗೆ ಮುಕ್ತಾಯ ಮಾಡಿದರು. ಅಭಿಜಿತ್ (ಹಾರ್ಮೋನಿಯಂ), ಗುರುನಂದನರಾವ್ (ತಬಲಾ) ವಾದ್ಯ ಸಹಕಾರ ನಿಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕ್ ಉದ್ಯೋಗಿ ಬಿ.ಎಸ್. ವಿಜಯಕುಮಾರ್ ಅವರು `ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವಲ್ಲಿ ಪೋಷಕರ ಪಾತ್ರ ಹಾಗೂ ಸಹಕಾರ ಅಗತ್ಯ'ಎಂದು ಅಭಿಪ್ರಾಯಪಟ್ಟರು. ವಿಶೇಷ ಲಯವಾದ್ಯಗಾರ ರವಿ,  ಪ್ರತಿಮಾ ರವಿ, ಕವಿ ವಿ.ಮಲ್ಲಿಕಾರ್ಜುನಯ್ಯ, ಸಂಸ್ಥೆ ಸಂಸ್ಥಾಪಕಿ ಗಾಯತ್ರಿ ಕೇಶವ್ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.