ಶಿವಮೊಗ್ಗ: ರಾಜ್ಯದಲ್ಲಿ ಹಾಲಿನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಶಿಮೂಲ್) ಕೂಡ ಲೀಟರ್ಗೆ ` 2 ಏರಿಕೆ ಮಾಡಿದೆ. ಈ ಪರಿಷ್ಕೃತ ದರ ಫೆ. 15ರಿಂದಲೇ ಶಿಮೂಲ್ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಪರಿಷ್ಕರಣೆಗೊಂಡಿರುವ ಹೆಚ್ಚುವರಿ ` 2 ಅನ್ನು ಸಂಪೂರ್ಣವಾಗಿ ಹಾಲು ಉತ್ಪಾದಕರಿಗೆ ಫೆ. 15ರಿಂದಲೇ ನೀಡಲಾಗುತ್ತಿದ್ದು,

ಗ್ರಾಮೀಣ ಮಟ್ಟದಲ್ಲಿ ಹಾಲು ಶೇಖರಣೆಯ ಪ್ರಸ್ತುತ ದರವನ್ನು ` 15.20ಗಳಿಂದ ` 17.20ಗೆ ಹೆಚ್ಚಿಸಲಾಗಿದೆ.ಪರಿಷ್ಕೃತ ದರ ಪಟ್ಟಿ ಪ್ರತಿ ಲೀಟರ್ಗೆ ಈ ಕೆಳಗಿನಂತಿದೆ. ಟೋನ್ಡ್ ಹಾಲು: ` 21, ಶುಭಂ ಹಾಲು: ` 24, ಹೋಮೊಜಿನೈಸ್ಡ್ ಶುಭಂ ಹಾಲು: ` 25, ಹೋಮೊಜಿನೈಸ್ಡ್ ಹಸುವಿನ ಹಾಲು (250 ಮಿಲಿ ಸ್ಕಾಚೇಟ್ಗೆ): ` 6.50, ಮೊಸರು (500ಗ್ರಾಂ): ` 13, ಮೊಸರು (200 ಗ್ರಾಂ): ` 6.50 ಹಾಗೂ ಮಜ್ಜಿಗೆ (200ಗ್ರಾಂ) ` 6 ನಿಗದಿಪಡಿಸಲಾಗಿದೆ.

ಪರಿಷ್ಕೃತಗೊಂಡ ದರಗಳು ಮುದ್ರಿತಗೊಂಡ ಪಾಲಿಥಿನ್ ಫಿಲ್ಮ್ ಶಿಮೂಲ್ಗೆ ಪೂರೈಕೆಯಾಗುವವರೆಗೂ ಹಳೆಯ ದರ ಮುದ್ರಿತವಾಗಿರುವ ಪಾಲಿಥಿನ್ ಫಿಲ್ಮ್ನಲ್ಲೇ ಹಾಲನ್ನು ಪ್ಯಾಕ್ ಮಾಡಿ, ಮಾರುಕಟ್ಟೆಗೆ ಪೂರೈಕೆ ಮಾಡಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಶಿಮೂಲ್ ಅಧ್ಯಕ್ಷ ಡಿ.ಜಿ. ಷಣ್ಮುಖ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.