ಸೋಮವಾರ, ಮೇ 23, 2022
22 °C

ಇಂದು ಜಗನ್ ಜಾಮೀನು ಮನವಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಚಂಚಲಗೂಡ ಕಾರಾಗೃಹದಲ್ಲಿರುವ ಕಡಪಾ ಸಂಸದ ವೈ. ಎಸ್. ಜಗನ್ ಮೋಹನ್ ಅವರು ಸಲ್ಲಿಸಿರುವ ಜಾಮೀನು ಮನವಿ ಅರ್ಜಿಯ ಆದೇಶವು ಶುಕ್ರವಾರ ಹೊರಬೀಳಲಿದೆ.

ಜಗನ್ ಪರ ವಕೀಲರು ಜಗನ್ ಮೋಹನ್ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಸಿಬಿಐ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಸಿಬಿಐನ ವಿಶೇಷ ನ್ಯಾಯಾಧೀಶರು ಮನವಿಯ ಆದೇಶವನ್ನು ಇಂದು ಕಾಯ್ದಿರಿಸಿದ್ದಾರೆ.

~ಜೂನ್ 12ರಂದು ವಿಧಾನಸಭೆಯ ಉಪಚುನಾವಣೆಯು ನಡೆಯುವ ಹಿನ್ನೆಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಪಕ್ಷದ ಪರವಾಗಿ ಚುನಾವಣೆ ಪ್ರಚಾರ ನಡೆಸಬೇಕಿದೆ. ಇದರಿಂದಾಗಿ ಅವರಿಗೆ ನ್ಯಾಯಾಲಯವು ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಬೇಕು.ಜಗನ್ ಅವರು ಚುನಾವಣಾ ಪ್ರಚಾರದ ವೇಳೆಯಲ್ಲಿಯೇ ಬಂಧನಕ್ಕೆ ಒಳಗಾಗಿದ್ದಾರೆ. ಅವರಿಗೆ ಮಧ್ಯಾಂತರ ಜಾಮೀನು ನೀಡಿದಲ್ಲಿ, ಅವರು ಜೂನ್ 10ಕ್ಕೆ ಮುಗಿಯಲಿರುವ ಉಪಚುನಾವಣೆಯ ಪ್ರಚಾರದ ನಂತರ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ~ಜತೆಗೆ ಜಗನ್ ತಮ್ಮ ಕ್ಷೇತ್ರದಲ್ಲಿನ ಪೊಲೀಸ್ ಠಾಣೆಗೆ ನಿತ್ಯ ಹಾಜರಾಗಲು ಸಹ ಅವರು ಸಿದ್ಧರಿದ್ದಾರೆ~ ಎಂದು ಜಗನ್ ಪರ ವಕೀಲ ರಂಜಿತ್ ಕುಮಾರ್ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.